ಭಾನುವಾರ, ಏಪ್ರಿಲ್ 11, 2021
32 °C

ಚಾಮರಾಜನಗರಕ್ಕೆ ಇಂಟರ್‌ಸಿಟಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮೈಸೂರು- ಬೆಂಗಳೂರು ಮಧ್ಯ ಸಂಚರಿಸುವ ಇಂಟರ್‌ಸಿಟಿ ರೈಲನ್ನು ಚಾಮರಾಜನಗರಕ್ಕೂ ವಿಸ್ತರಣೆ ಮಾಡಬೇಕು ಎಂದು ಸಂಸದ ಧ್ರುವನಾರಾಯಣ    ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.ಸಂಸತ್‌ನಲ್ಲಿ ಮಂಗಳವಾರ ನಡೆದ ರೈಲ್ವೆ ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದರು, ಇದರಿಂದ ಜಿಲ್ಲೆಯಲ್ಲಿ ಯುವಕರಿಗೆ ಸಹಾಯಕವಾಗಲಿದೆ. ಇಲ್ಲಿ      ಶಿಕ್ಷಣ ಪಡೆದ ಯುವಕರು ಬೆಂಗಳೂರಿಗೆ ಸಂಚರಿಸಿ ಉದ್ಯೋಗ ಪಡೆಯಲು ಮತ್ತು ಅತ್ಯುನ್ನತ ವೈದ್ಯಕೀಯ ಸೇವೆ ಪಡೆಯಲು ಸಹಾಯಕವಾಗಲಿದೆ ಎಂದು ಹೇಳಿದರಲ್ಲದೇ, ರಾಜಧಾ     ನಿಯ ಮಧ್ಯೆ ಈ ರೈಲ್ವೆ ಸಂಪರ್ಕ ಉತ್ತಮ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.ಚಾಮರಾಜನಗರ ಜಿಲ್ಲೆ ಈಚೆಗಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಈ ಅಭಿವೃದ್ಧಿಗೆ ರೈಲ್ವೆ ಸಂಪರ್ಕವೂ ಸೇರ್ಪಡೆಗೊಂಡರೆ ಸಾಕಷ್ಟು ನೆರವಾಗಲಿದೆ ಎಂದ ಸಂಸದರು, ಮುಂದಿನ ಬಜೆಟ್‌ನಲ್ಲಿ ಈ ಕುರಿತಾದ ನಿಲುವನ್ನು ಪ್ರಕಟಿಸಬೇಕು ಎಂದು ಮನವಿ ಮಾಡಿಕೊಂಡರು.ಇದಲ್ಲದೇ, ಮೈಸೂರು-ಶಿವಮೊಗ್ಗ ರೈಲನ್ನು ಚಾಮರಾಜನಗರಕ್ಕೂ ವಿಸ್ತರಣೆ ಮಾಡಬೇಕು. ಇದು ಕೃಷಿಕರಿಗೆ ಸಹಾಯಕವಾಗಲಿದೆ. ಚಾಮರಾಜನಗರ ಭಾಗದ ರೈತರು ಅರಸೀಕೆರೆ ಹಾಗೂ ಮೈಸೂರು ಪ್ರದೇಶದಲ್ಲಿ ತೆಂಗಿನ ಉತ್ಪನ್ನ ಮಾರಾಟ ಮಾಡಲು ಸಹಾಯಕವಾಗಲಿದೆ. ಇದು ಕೃಷಿಕರ ಬಾಳನ್ನು ಹಸನು ಮಾಡಲಿದೆ. ಈ ಕುರಿತು ಸಚಿವರು ಮನಸ್ಸು ಮಾಡಬೇಕು. ಈ ಮೂಲಕ ರೈತರ ಜೀವನ ಹಸನುಗೊಳಿಸಬೇಕು ಎಂದು ಹೇಳಿದರು.ಇದರೊಂದಿಗೆ ಹುಬ್ಬಳ್ಳಿ ರೈಲನ್ನೂ ಸಹ ಚಾಮರಾಜನಗರಕ್ಕೆ ವಿಸ್ತರಣೆ ಮಾಡಬೇಕು. ಈ ರೈಲು ಎಲ್ಲದಕ್ಕೂ ಉಪಯೋಗ. ಕೃಷಿ ಉಪಕರಣಗಳು ತಯಾರಾಗುವ ಕೊಲ್ಲಾಪುರ, ಧಾರವಾಡ ಹಾಗೂ ಪುಣೆಯಿಂದ ಉಪಕರಣವನ್ನು ಇಲ್ಲಿಗೆ ತರಲು ಸಹಾಯಕವಾಗುತ್ತದೆ. ಚಾಮರಾಜನಗರ ಜಿಲ್ಲೆಯ ರೈತರಿಗೆ ಈ ರೈಲು ಸಾಕಷ್ಟು ಉಪಯೋಗವಾಗಲಿದ್ದು ಈ ಕುರಿತು ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.ಈ ಮೂರು ಯೋಜನೆಗಳು ಪ್ರಮುಖವಾಗಿವೆ ಎಂದು ಹೇಳಿದರುವ ಸಂಸದರು, ಚಾಮರಾಜನಗರ-ಬೆಂಗಳೂರು-ಮಳವಳ್ಳಿ- ಕೊಳ್ಳೇಗಾಲದ ನಡುವೆ ನೂತನ ರೈಲ್ವೆ ಯೋಜನೆ ರೂಪಿಸಬೇಕಾಗಿದೆ ಎಂದು ಕೋರಿದ್ದಾರೆ.ದೇಶದ ಅಭಿವೃದ್ಧಿಗೆ ರೈಲ್ವೆ ಬಜೆಟ್ ಸಾಕಷ್ಟು ಒತ್ತುಕೊಟ್ಟಿದೆ ಎಂದು ಶ್ಲಾಘಿಸಿಸಿರುವ ಸಂಸದರು, ಕರ್ನಾಟಕಕ್ಕೆ 12 ನೂತನ ರೈಲ್ವೆ ಯೋಜನೆ ಪ್ರಕಟ ಮಾಡಿದ್ದು ಅಭಿವೃದ್ಧಿಪರ ಚಿಂತನೆ ಎಂದು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಸಾಕಷ್ಟು ಯೋಜನೆ ಪ್ರಕಟಿಸಬೇಕಾದ ಅನಿವಾರ್ಯತೆ ಇದೆ. ರಾಜ್ಯ ಹಾಗೂ ನನ್ನ ಕ್ಷೇತ್ರವಾದ ಚಾಮರಾಜನಗರ ಹಲವು ಕ್ಷೇತ್ರದಲ್ಲೂ ಅಭಿವೃದ್ಧಿಯಾಗುತ್ತಿದೆ. ರೈಲ್ವೆ ಯೋಜನೆ ಮೂಲಕವೂ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.