ಬುಧವಾರ, ಜನವರಿ 29, 2020
24 °C

ಚಾಮರಾಜನಗರ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಚಾಮರಾಜ ನಗರ ತಂಡವು ಇಲ್ಲಿಯ ಡಾ. ಬಿ.ಆರ್‌. ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಶುಭಾರಂಭ ಮಾಡಿತು.ಜಿಲ್ಲಾ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆಯು ತ್ತಿರುವ ಟೂರ್ನಿಯಲ್ಲಿ ಚಾಮರಾಜ ನಗರ ತಂಡವು 29–21, 29–16ರಿಂದ ಬೆಂಗಳೂರಿನ ಕೆಪಿಟಿಸಿಎಲ್ ತಂಡದ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ ಚಾಮರಾಜ ನಗರ ತಂಡವು 29–16, 29–15ರಿಂದ ಮೈಸೂರಿನ ಚಾಣಕ್ಯ ತಂಡದ ವಿರುದ್ಧ ಗೆದ್ದಿತು.ಇನ್ನುಳಿದ ಪಂದ್ಯಗಳಲ್ಲಿ ಬನಶಂಕರಿ ತಂಡ, ಮೈಸೂರಿನ ರೂಸ್ಟಾರ್ ತಂಡಗಳು ಜಯಿಸಿವೆ.ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್‌ ಸಂಸ್ಥೆಯ ಮೂರು ತಂಡಗಳೂ ಶುಭಾರಂಭ ಮಾಡಿವೆ. ಪುರುಷರ ವಿಭಾಗದಲ್ಲಿ 24 ಮತ್ತು ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಭಾಗವಹಿಸಿವೆ.

ಪ್ರತಿಕ್ರಿಯಿಸಿ (+)