ಸಾಹಸ ಪ್ರವೃತ್ತಿ ಇರುವ ಯುವಕರು ಸದಾ ಒಂದಿಲ್ಲೊಂದು ಕಷ್ಟಕರ ಚಟುವಟಿಕೆಯಲ್ಲಿ ತೊಡಗುತ್ತಾರೆ. ಕೈತುಂಬ ಸಂಬಳ ಪಡೆಯುವ ಐಟಿ ಉದ್ಯೋಗಿಗಳಿಗೆ ತಮ್ಮ ಹವ್ಯಾಸಗಳಿಗೆ ಜೀವ ತುಂಬುವ ಕಾಲವಿದು. ಗಟ್ಟಿ ಮನಸು ಮತ್ತು ಅಗತ್ಯ ಹಣವಿದ್ದರೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವೇನಲ್ಲ.

ವಾರಾಂತ್ಯದಲ್ಲಿ ಒಂದಷ್ಟು ಜನ ಪ್ರವಾಸಿತಾಣಗಳಿಗೆ ಭೇಟಿ ನೀಡಿದರೆ, ಕೆಲವರು ಮೋಜು ಮಸ್ತಿ ಎಂದು ಕಳೆಯುತ್ತಾರೆ. ಮತ್ತೆ ಕೆಲವರು ವರ್ಷಕ್ಕೊಮ್ಮೆ ವಿದೇಶಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದೂ ಇದೆ. ಇನ್ನು ಕೆಲವು ಹವ್ಯಾಸಿ ಛಾಯಾಗ್ರಾಹಕರು ನಿಸರ್ಗದ ರಮಣೀಯತೆಯನ್ನು ಸೆರೆಹಿಡಿಯುವ ಉದ್ದೇಶದಿಂದ ಹಿಮಾಲಯ ಸೇರಿದಂತೆ ದೇಶದ ನಾನಾ ಪರ್ವತಶ್ರೇಣಿಗಳಿಗೆ ಹೋಗಿಬರುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ನಗರದಲ್ಲಿ ಇಂತಹ ಸಾಹಸಪ್ರಿಯರ ತಂಡಗಳು ಅನೇಕ. ಅದರಲ್ಲಿ ‘ಬೆಂಗಳೂರು ಮೌಂಟೆನರಿಂಗ್ ಕ್ಲಬ್’ ಒಂದು.

2004ರ ಮೇ 27ರಂದು ಆರಂಭವಾದ ಪರ್ವತಾರೋಹಿಗಳ ಕ್ಲಬ್ ಈವರೆಗೆ 1500 ಸಾಹಸ ಪ್ರವಾಸಗಳನ್ನು ಆಯೋಜಿಸಿದೆ. ಚಾರಣ, ಬ್ಯಾಕ್ಪ್ಯಾಕಿಂಗ್, ಸಫಾರಿ, ರಿವರ್ ರಾಫ್ಟಿಂಗ್, ರಾಕ್ ಕ್ಲೈಂಬಿಂಗ್, ಪ್ಯಾರಾ ಗ್ಲೈಡಿಂಗ್, ಭಂಗಿ ಜಂಪ್, ಸ್ಕೂಬಾ ಡೈವಿಂಗ್, ಸ್ಕೈಡೈವಿಂಗ್ ಮುಂತಾದ ಎಲ್ಲ ಬಗೆಯ ಸಾಹಸಕ್ರೀಡೆಗಳನ್ನೂ ಆಯೋಜಿಸುತ್ತಾ ಬಂದಿದೆ. ಹಿಮಾಲಯ ಸೇರಿದಂತೆ ಅಂತರರಾಷ್ಟ್ರೀಯ ಪರ್ವತಾರೋಹಣವನ್ನೂ ಕೈಗೊಂಡಿದೆ.

ಕ್ಲಬ್ನ ಸದಸ್ಯತ್ವ ಉಚಿತವಾಗಿದ್ದು, ವೆಬ್ಸೈಟ್ ಮೂಲಕ ಯಾರು ಬೇಕಾದರೂ ಸದಸ್ಯರಾಗಬಹುದು. ಹಾಗಾಗಿ 20 ಸಾವಿರಕ್ಕೂ ಹೆಚ್ಚು ಸಾಹಸಿಗಳು ಕ್ಲಬ್ನ ಸದಸ್ಯರಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳೇ ಹೆಚ್ಚು ಮಂದಿ ಎಂದು ಕ್ಲಬ್ನ ಸಂಘಟಕರಲ್ಲಿ ಒಬ್ಬರಾಗಿರುವ ಮೊಹಮದ್ ಆಕಿಬ್ ಹೇಳುತ್ತಾರೆ.

ಇದುವರೆಗೆ ಬೆಂಗಳೂರು ಸುತ್ತಲಿನ ಅನೇಕ ತಾಣಗಳೂ ಸೇರಿದಂತೆ ರಾಜ್ಯದ ರಮಣೀಯ ಪರ್ವತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿರುವ ಕ್ಲಬ್ ತಡಿಯಂಡ ಮೋಳ್, ಪಶ್ಚಿಮಘಟ್ಟದ ಕುಮಾರ ಪರ್ವತ, ದೂದ್ಸಾಗರ್, ಕುಂತಿಬೆಟ್ಟ, ಹಸಿರು ವ್ಯಾಲಿ, ಅಂತರಗಂಗೆ, ಕೊಡಚಾದ್ರಿ, ಕಬ್ಬಲದುರ್ಗಾ, ನಾರಾಯಣಗಿರಿ, ನೇತ್ರಾಣಿ ದ್ವೀಪ, ಮುರುಡೇಶ್ವರ, ಕಾರವಾರದಲ್ಲಿ ಜಲಸಾಹಸ ಕ್ರೀಡೆ, ಗವಿ ರಂಗನಬೆಟ್ಟ, ಮಧುಗಿರಿ ಮುಂತಾದ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಜಾಗಗಳಲ್ಲಿ ಸಾಹಸ ಪ್ರವಾಸ ನಡೆಸಿದೆ.

ಒಂದು ದಿನದಿಂದ ಒಂದು ವಾರಗಳ ಅವಧಿಯ ಟ್ರೆಕಿಂಗ್ ಕೂಡ ಇದೆ. ಹಿಮಾಲಯದ ತಪ್ಪಲಿನ ಗಿರಿಧಾಮಗಳಿಗೂ ಪ್ರವಾಸ ಆಯೋಜಿಸುತ್ತಿದೆ. ದೇಶದೆಲ್ಲೆಡೆ ಕ್ಲಬ್ನ ಜಾಲವಿದ್ದು, ನಗರದಲ್ಲಿ ಮೂವರು ಸಂಘಟಕರಿದ್ದಾರೆ. ಜೊತೆಗೆ ಒಂದಷ್ಟು ಹವ್ಯಾಸಿಗಳೂ ಇದ್ದಾರೆ.

ನಗರದ ಸಾಹಸಪ್ರಿಯ ಯುವಕರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪರ್ವತಾರೋಹಿಗಳ ಕ್ಲಬ್ ಸಹಕಾರಿಯಾಗಿದೆ. 2016ರಲ್ಲಿ ಈ ಕ್ಲಬ್ ಮೌಂಟ್ ಎವರೆಸ್ಟ್ ಪರ್ವತಾರೋಹಣದ ಯೋಜನೆ ಹಾಕಿಕೊಂಡಿದೆ. ಸಾಹಸ ಪ್ರವೃತ್ತಿ ಇರುವ ಯಾರೇ ಆದರೂ ಸದಸ್ಯರಾಗಿ ಪ್ರರ್ವತಾರೋಹಣ ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ಮಾಹಿತಿಗೆ: ನಂ.401, 4ನೇ ಮಹಡಿ, ಕರ್ಜನ್ ಸ್ಕ್ವೇರ್, ಬೋರಿಂಗ್ ಆಸ್ಪತ್ರೆ ಎದುರು,
ಶಿವಾಜಿನಗರ. 96111 02222/99020 27262
Email: aqib@bmcindia.org, Website : http://www.bmcindia.org

ವಿಶ್ವ ಸಾಹಸಿಗ
ಕೋಲ್ಕತ್ತಾ ಮೂಲದ ಸತ್ಯರೂಪ್ ಸಿದ್ಧಾಂತ್ ನಗರಕ್ಕೆ ಐಟಿ ಉದ್ಯೋಗಿಯಾಗಿ ಬಂದವರು. ಸಿಕ್ಕಿಂ ಮಣಿಪಾಲ್ ಇನ್ಸ್ಟಿಟ್ಯೂಟ್ನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮುಗಿಸಿ 2007ರಲ್ಲಿ ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿಂದ ಅವರ ಪರ್ವತಾರೋಹಣದ ಯಾನ ಶುರುವಾಯಿತು. ಇದಕ್ಕೆಂದೇ ಡಾರ್ಜಿಲಿಂಗ್ನ ‘ಹಿಮಾಲಯನ್ ಮೌಂಟೆನರಿಂಗ್ ಇನ್ಸ್ಟಿಟ್ಯೂಟ್’ನಲ್ಲಿ ತರಬೇತಿಯನ್ನೂ ಪಡೆದರು. ಬೆಂಗಳೂರು ಮೌಂಟೆನರಿಂಗ್ ಕ್ಲಬ್ನ ಸದಸ್ಯರೊಂದಿಗೆ ಪಶ್ಚಿಮಘಟ್ಟದ ಪರ್ವತಶ್ರೇಣಿಗಳ ಉದ್ದಗಲಕ್ಕೂ ಓಡಾಡಿದ ಸಿದ್ಧಾಂತ್, ಈಗಲೂ ಸಾಹಸಯಾತ್ರೆ ಮುಂದುವರಿಸಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಏಳು ಪರ್ವತಗಳನ್ನು ಏರುವುದು ಇವರ ಗುರಿಯಾಗಿದೆ. ಅದರಲ್ಲಿ ಮೂರು ಪರ್ವತಗಳನ್ನು ಈಗಾಗಲೇ ಏರಿದ್ದಾರೆ. ಆಫ್ರಿಕಾ ಖಂಡದ 19,340 ಅಡಿಯ ಮೌಂಟ್ ಕಿಲಿಮಾಂಜರೋ, ಯುರೋಪ್ನ 18,510 ಅಡಿಯ ಮೌಂಟ್ ಎಲ್ಬ್ರೂಸ್, ದಕ್ಷಿಣ ಅಮೆರಿಕಾದ 22,841 ಅಡಿ ಎತ್ತರದ ಅಕಾನ್ಕುಗುವಾ ಪರ್ವತವನ್ನು ಏರಿದ ಸಾಹಸಿ ಇವರು.

ಉತ್ತರ ಅಮೆರಿಕಾದ ಮೌಂಟ್ ದೆನಾಲಿ, ಅಂಟಾರ್ಟಿಕಾದ ಮೌಂಟ್ ವಿನ್ಸರ್ ಮಾಸ್ಸಿಫ್, ಆಸ್ಟ್ರೇಲಿಯಾದ ಕೊಸಸಿಯೋಸ್ಕೋ ಮತ್ತು ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ವಿಶ್ವದ ಎಲ್ಲ ಏಳು ಗಿರಿಶೃಂಗಗಳನ್ನು ಏರಿದ ಸಾಹಸಿ ಎಂಬ ದಾಖಲೆ ಬರೆಯುವುದು ಇವರ ಗುರಿ. ಈವರೆಗೆ ಈ ಏಳು ಪರ್ವತಗಳನ್ನು ಏರಿದ ಭಾರತೀಯರಲ್ಲಿ ಆಂಧ್ರಪ್ರದೇಶದ ಮಲ್ಲಿ ಮಸ್ತಾನ್ ಬಾಬು ಮತ್ತು ಜಾರ್ಖಂಡ್ನ ಪ್ರೇಮಲತಾ ಅಗರವಾಲ್ ಮಾತ್ರ ಸೇರಿದ್ದಾರೆ. ಸಿದ್ಧಾಂತ್ ಈ ಸಾಲಿಗೆ ಸೇರಲಿದ್ದಾರೆ.

ಉಚಿತ ಸದಸ್ಯತ್ವ

ನಮ್ಮಲ್ಲಿ ಉಚಿತ ಸದಸ್ಯತ್ವವಿದೆ. ಯಾರು ಬೇಕಾದರೂ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿ ಸದಸ್ಯತ್ವ ಪಡೆಯಬಹುದು. ಹತ್ತು ಜನರ ತಂಡಕ್ಕೆ ಒಬ್ಬರು ಸಂಯೋಜಕರು ಇರುತ್ತಾರೆ. ಹೆಣ್ಣು ಮಕ್ಕಳಿರುವ ತಂಡ ಪ್ರತ್ಯೇಕವಾಗಿರುತ್ತದೆ. ಕನಿಷ್ಠ ಹತ್ತು ಮಂದಿ ಹೆಣ್ಣುಮಕ್ಕಳಿದ್ದರೆ ಮಾತ್ರ ಶಿಬಿರಕ್ಕೆ ಸೇರಿಸಿಕೊಳ್ಳುತ್ತೇವೆ. ಅವರಿಗೆ ವಸತಿ ವ್ಯವಸ್ಥೆ ಪ್ರತ್ಯೇಕವಿರುತ್ತದೆ. ಬೆಂಗಳೂರಿನಲ್ಲಿ ಮೂವರು ಸಂಯೋಜಕರಿದ್ದೇವೆ.

ಉಳಿದಂತೆ ನಮ್ಮಲ್ಲಿ 60 ಮಂದಿ ಹವ್ಯಾಸಿಗಳಿದ್ದಾರೆ. ಅವರಿಗೆ ನಾವು ತರಬೇತಿ ನೀಡಿದ್ದೇವೆ. ಅವರು ತಂಡವನ್ನು ಮುನ್ನಡೆಸುತ್ತಾರೆ. ಇದರ ಜೊತೆಗೆ ನಮ್ಮ ತಂಡ ಸ್ವಾತಂತ್ರ್ಯ ದಿನ, ಗಣರಾಜ್ಯ ದಿನಗಳನ್ನು ವಿಶೇಷವಾಗಿ ಆಚರಿಸುತ್ತಿದೆ. ಆ ದಿನಗಳಲ್ಲಿ ಟ್ರೆಕಿಂಗ್ ಹೋಗಿ ಅಲ್ಲಿ, ಧ್ವಜಾರೋಹಣ ಮಾಡಿ ವಿಭಿನ್ನವಾಗಿ ಹಬ್ಬ ಆಚರಿಸುತ್ತೇವೆ. ವರ್ಷದಲ್ಲಿ ಎರಡರಿಂದ ಮೂರು ಸಲ ಹಿಮಾಲಯದ ಗಿರಿಧಾಮಗಳಿಗೆ ಟ್ರೆಕಿಂಗ್ ಆಯೋಜಿಸಲಾಗುತ್ತದೆ. ಮನಾಲಿ, ಸಿಕ್ಕಿಂ ಸೇರಿದಂತೆ ಐದರಿಂದ ಆರು ತಾಣಗಳಿಗೆ ಪ್ರವಾಸ ಕೈಗೊಳ್ಳಲಾಗುತ್ತದೆ.

–ಮೊಹಮದ್ ಆಕಿಬ್, ಆಪರೇಷನ್ ಎಕ್ಸಿಕ್ಯುಟಿವ್, ಬಿಎಂಸಿ

ಥ್ಯಾಂಕ್ಸ್ ಬಿಎಂಸಿ
ಬೆಂಗಳೂರು ಪರ್ವತಾರೋಹಿಗಳ ಕ್ಲಬ್ನ ಸದಸ್ಯನಾಗಿ ಅನೇಕ ಮರೆಯಲಾಗದ ಅನುಭವ ಪಡೆದಿದ್ದೇನೆ. ಈ ವರ್ಷ ಗಣರಾಜ್ಯದ ದಿನ ಅಂತರಗಂಗೆ ಗವಿಗೆ ಟ್ರಕ್ಕಿಂಗ್ ಹೋಗಿದ್ದು, ಅಲ್ಲಿ ಧ್ವಜಾರೋಹಣ ಮಾಡಿದ್ದು, ರಾಷ್ಟ್ರಗೀತೆ ಹಾಡಿದ್ದು ವಿಶಿಷ್ಟ ಅನುಭವ.
-ರಾಜಶೇಖರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.