ಸೋಮವಾರ, ಜನವರಿ 27, 2020
24 °C

ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಕುಂಬಾರಪೇಟೆಯ ಇಳಿಜಾರು ಪ್ರದೇಶದಲ್ಲಿ ಬುಧವಾರ ಸಾರಿಗೆ ಸಂಸ್ಥೆಯ ಸುರಪುರ– ಸುಗೂರು ಬಸ್ ಬ್ರೆಕ್ ವೈಫಲ್ಯಕ್ಕೆ ಒಳಗಾಯಿತು. ರಸ್ತೆ ಪಕ್ಕದಲ್ಲಿ ಚರಂಡಿ ಕಾಮಗಾರಿಯಲ್ಲಿ 25ಕ್ಕೂ ಹೆಚ್ಚು ಕಾರ್ಮಿಕರು ತೊಡಗಿಕೊಂಡಿದ್ದರು. ಬಸ್‌ನಲ್ಲಿ 53 ಜನ ಪ್ರಯಾಣಿಕರಿದ್ದರು.ಈ ಸಂದರ್ಭದಲ್ಲಿ ಚಾಲಕ ಗೊಂದಲಕ್ಕೆ ಒಳಗಾಗದೇ, ಸಮಯ­ಪ್ರಜ್ಞೆ ಮೆರೆದು ಬಸ್‌ನ್ನು ರಸ್ತೆ ಪಕ್ಕದಲ್ಲಿ ಹಾಕಿದ್ದ ಕಂಕರ್ ಸಂಗ್ರಹದ ಮೇಲೆ ತೆಗೆದುಕೊಂಡು ಹೋದರು. ಅದೃಷ್ಟವಶಾತ್ ಕಂಕರ್‌ನಲ್ಲಿ ಬಸ್ ನಿಂತುಕೊಂಡಿತು. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಕಾರ್ಮಿಕರು ಮತ್ತು ಪ್ರಯಾಣಿಕರು ಅಪಘಾತಕ್ಕೆ ಈಡಾಗುವ ಸಂಭವವಿತ್ತು.

ಪ್ರತಿಕ್ರಿಯಿಸಿ (+)