ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿರುವ ಮಿನಿ ವಿಧಾನ ಸೌಧಕ್ಕೆ ಹೊಸ ಹೊಳಪು ನೀಡಲಾಗಿದೆ.

ಜುಲೈ 2ರಂದು ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ಅಧಿಕಾರಿ ಪ್ರಕಾಶ ಕುದುರೆ ಒಂದು ತಿಂಗಳಲ್ಲೇ ಮಿನಿ ವಿಧಾನಸೌಧಕ್ಕೆ ಕಾಯಕಲ್ಪ ನೀಡಿದ್ದಾರೆ.

ಕಚೇರಿಯ ಸುತ್ತಲೂ ಭಾರಿ ಪ್ರಮಾಣದಲ್ಲಿ ಬೆಳೆದ ಗಿಡಗಂಟೆ ಸ್ವಚ್ಛಗೊಳಿಸಲಾಗಿದೆ. ಮಿನಿ ವಿಧಾನ ಸೌಧ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಧ್ಯೆ ಮುಚ್ಚಿ ಹೋಗಿದ್ದ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನೆಮ್ಮದಿ ಕೇಂದ್ರದ ಪಕ್ಕದಲ್ಲಿದ್ದ ಗೇಟ್ ಮುಚ್ಚಲಾಗಿದ್ದು, ಇಲ್ಲಿ ಅರ್ಜಿ ಸ್ವೀಕರಿಸುವ ಹೆಚ್ಚುವರಿ ಕೌಂಟರ್ ತೆರೆಯಲು ಕ್ಯಾಬಿನ್ ನಿರ್ಮಿಸಲಾಗಿದೆ. ಇದರ ಜತೆಗೆ ಆಡಳಿತಕ್ಕೂ ಚುರುಕು ನೀಡಿದ್ದು ಮುಂದಿನ ಕೆಲವೇ ದಿನಗಳಲ್ಲಿ ಮಿನಿವಿಧಾನ ಸೌಧ ಜನ ಸ್ನೇಹಿಯಾಗಿ ರೂಪುಗೊಳ್ಳಲಿದೆ.

ದೂರದ ಊರುಗಳಿಂದ ಅರ್ಜಿ ಸಲ್ಲಿಸಲು ಬಂದ ಜನರು ವಿದ್ಯುತ್ಗಾಗಿ ಕಾಯಬೇಕಿತ್ತು. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿರುವ ತಹಶೀಲ್ದಾರರು ದೊಡ್ಡ ಗಾತ್ರದ ಚಿಂಚೋಳಿಯ ಚಂದಾಪುರದಲ್ಲಿರುವ ಮಿನಿ ವಿಧಾನ ಸೌಧಕ್ಕೆ ಹೊಸ ಕಳೆ ನೀಡಲಾಗಿದೆಜನರೇಟರ್ ತಂದಿದ್ದಾರೆ.

ಅಸಲಿಗೆ ಮಿನಿ ವಿಧಾನಸೌಧ ಆವರಣವು ಕೆಸರು ಕೊಚ್ಚೆಯ ತಾಣವಾಗಿತ್ತು. ಸ್ವಲ್ಪ ಮಳೆಯಾದರೂ ವಾಹನಗಳು ಸಂಚರಿಸಲು ಸಾಧ್ಯವಾಗ ದಂತಹ ಪರಿಸ್ಥಿತಿಯಿತ್ತು. ಈಗ ಕೆಂಪು ಮುರುಮ್ ಹರಡಲಾಗಿದ್ದು 20 ವರ್ಷ ದಲ್ಲಿ ಇದೆ ಮೊದಲ ಬಾರಿ ಮಿನುಗುತ್ತಿದೆ.

ಮಿನಿ ವಿಧಾನ ಸೌಧ ಆವರಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಯನಿ ರ್ವಹಿ ಸುತ್ತಿದ್ದು, ವಿಧಾನ ಸೌಧದ ಒಳಗಡೆ ಉಪ ನೋಂದಣಿ, ಉಪ ಖಜಾನೆ, ಭೂ ಮಾಪನ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿವೆ.

ಮಿನಿ ವಿಧಾನ ಸೌಧದ ಒಳಗಿದ್ದಕಸದ ರಾಶಿಗೆ ಮುಕ್ತಿ ನೀಡ ಲಾಗಿದೆ, ಗಿಡಗಂಟೆ ಕಡಿಯಲಾಗಿದೆ. ನೆಮ್ಮದಿ ಕೇಂದ್ರದ ಪಕ್ಕದ ಉದ್ಯಾನ ಬೆಳೆ ಕಳೆ ಕಿತ್ತು ಸ್ವಚ್ಛ ಗೊಳಿಸಲಾಗಿದೆ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ.

ಮಿನಿ ವಿಧಾನ ಸೌಧಕ್ಕೆ ಸುಣ್ಣ ಬಣ್ಣ, ಓರುವ ಕಡೆ ದುರಸ್ತಿ, ಆವರಣ ದಲ್ಲಿ ಡಾಂಬರ್ ರಸ್ತೆ, ವಾಹನ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಂಪೌಂಡ್ ನಿರ್ಮಿಸ ಲಾಗುವುದು. ಲಿ ವಿದ್ಯುದ್ದೀಕರಣ ತಂತಿ ಹಳೆಯದಾಗಿದ್ದು ಸುಡುತ್ತಿವೆ. ಹೊಸ ವಿದ್ಯುದ್ದೀಕರಣ ಕೈಗೊಳ್ಳಲು ಯೋಜಿ ಸಲಾಗಿದೆ ಎಂದು ಪ್ರಕಾಶ ಕುದುರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿ ಮನಸ್ಸು ಮಾಡಿದರೆ ಹೇಗೆ ಇಡೀ ಕಚೇರಿ ಸುಧಾರಿಸಬಹುದು ಎಂಬುದಕ್ಕೆ ತಹಶೀಲ್ದಾರ ಪ್ರಕಾಶ ಕುದುರೆ ನಿದರ್ಶನ. ಬರುವ ಜನರಿಗೆ ಶೌಚಾಲಯ ಮತ್ತು ಕುಡಿವ ನೀರಿನ ವ್ಯವಸ್ಥೆ ಮಾಡ ಬೇಕು ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ತಿಳಿಸಿದರು.

ಸಾರ್ವಜನಿಕರು ಹಲವು ರೀತಿಯ ಸಮಸ್ಯೆ ಎದುರಿಸುವುದು ಗಮನಕ್ಕೆ ಬಂತು. ಅದಕ್ಕೆಂದೇ ಹಂತಹಂತವಾಗಿ ಪರಿಹರಿಸಲು ಕ್ರಮ ಕೈಗೊಂಡೆ.
-ಪ್ರಕಾಶ ಕುದುರೆ ತಹಶೀಲ್ದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.