ದಾವಣಗೆರೆ: ಜನಿಸಿದಾಗ ಕಡಿಮೆ ತೂಕ ಹೊಂದಿರುವ ಅಥವಾ ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ (ಪ್ರಿಮೆಚೂರ್) ಕಂಡುಬರುವ ಅಂಧತ್ವ ನಿವಾರಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇಂತಹ ಮಕ್ಕಳಿಗೆ ಉಚಿತ ಸೇವೆ ಕಲ್ಪಿಸಲು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಸಮನ್ವಯ (ನೋಡೆಲ್) ಕೇಂದ್ರಗಳು ಶೀಘ್ರವೇ ಆರಂಭವಾಗಲಿವೆ.

ಒಂಬತ್ತು ತಿಂಗಳಿಗೆ ಜನಿಸುವ ಮಕ್ಕಳನ್ನು `ಆರೋಗ್ಯವಂತ ಮಕ್ಕಳು~ ಎಂದು ಕರೆಯಲಾಗುತ್ತದೆ. ನಾನಾ ಕಾರಣದಿಂದಾಗಿ, 9 ತಿಂಗಳಿಗೆ ಮುನ್ನವೇ ಮಕ್ಕಳು ಜನಿಸುವುದು ಉಂಟು. ಹೀಗೆ, ~ಅವಧಿಗೆ ಮುನ್ನವೇ~ ಜನಿಸುವ ಮಕ್ಕಳ ತೂಕ ಕಡಿಮೆ ಇರುತ್ತವೆ ಮತ್ತು ವಿವಿಧ ಆರೋಗ್ಯ ಸಂಬಂಧಿ ತೊಂದರೆಗಳನ್ನು ಎದುರಿಸುತ್ತವೆ. ಇದರಲ್ಲಿ ದೃಷ್ಟಿದೋಷವೂ ಒಂದು.

ಹೀಗೆ, ದೃಷ್ಟಿದೋಷ ಇರುವುದು ಪೋಷಕರಿಗೆ ಆರಂಭದಲ್ಲಿಯೇ ಗೊತ್ತಾಗುವುದಿಲ್ಲ. ಮಗು ಬೆಳೆಯುತ್ತಾ ಹೋದಂತೆ, ದೃಷ್ಟಿದೋಷ ಇರುವುದು ತಿಳಿದುಬರಬಹುದು. ಆ ವೇಳೆಗಾಗಲೇ ಸಮಸ್ಯೆಯ ಪರಿಣಾಮ ಹೆಚ್ಚಾಗಿರುತ್ತದೆ. ಸೂಕ್ತ ಚಿಕಿತ್ಸೆ ದೊರೆಯದೇ, ಮಕ್ಕಳು ಅಂಧತ್ವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಯೋಜನೆ ರೂಪಿಸಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ತಲಾ ರೂ 1 ಕೋಟಿ ಅನುದಾನ: ರಾಯಚೂರಿನಲ್ಲಿ ಈ ಸೇವಾ ಕೇಂದ್ರ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ದಾವಣಗೆರೆಯಲ್ಲಿ ಶೀಘ್ರವೇ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಮುಂದಿನ ಹಂತದಲ್ಲಿ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ.

ತಲಾ ರೂ 1 ಕೋಟಿ ಅನುದಾನ ದೊರೆಯಲಿದೆ. ಈ ಹಣದಲ್ಲಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ, ಮಕ್ಕಳಿಗೆ ತಪಾಸಣೆ ಮತ್ತು ಚಿಕಿತ್ಸಾ ಸೇವೆ ನೀಡಲಾಗುವುದು. ಅಲ್ಲದೇ, ನೆರೆಹೊರೆಯ ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಶೀಘ್ರವೇ ಸೇವೆ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ಪರಶುರಾಮಪ್ಪ, ಆರ್ಒಪಿ (ರೆಟಿನೋಪಥಿ ಆಫ್ ಪ್ರಿಮೆಚೂರ್) ಯೋಜನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿಯ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

ಯೋಜನೆ ಅನುಷ್ಠಾನಕ್ಕಾಗಿ ರೂ 1 ಕೋಟಿ ಅನುದಾನ ದೊರೆತಿದ್ದು, ರೂ 80 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಹಾಗೂ ವಾಹನ ಖರೀದಿಸಲಾಗಿದೆ. ವೈದ್ಯರಿಗೆ ತರಬೇತಿ ನೀಡಿದ ನಂತರ, ಸೇವೆ ಆರಂಭಿಸಲಾಗುವುದು. ಸಮಯ ನಿಗದಿಪಡಿಸಿಕೊಂಡು ನಮ್ಮ ವ್ಯಾಪ್ತಿಯ ಇತರ 5 ಜಿಲ್ಲೆಗಳಿಗೂ ವೈದ್ಯರ ತಂಡ ತೆರಳಿ, ಅಲ್ಲಿನ ಮಕ್ಕಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಿದೆ.

ಇದರಿಂದ, ಅವಧಿಗೆ ಮುನ್ನವೇ ಜನಿಸುವ ಮಕ್ಕಳಲ್ಲಿ ಕಂಡುಬರುವ ಅಂಧತ್ವ ಆರಂಭದಲ್ಲಿಯೇ ಗುರುತಿಸಿ, ಆ ಸಮಸ್ಯೆ ಮುಂದುವರಿಯದಂತೆ ನೋಡಿಕೊಳ್ಳಬಹುದು. ಸಂಪೂರ್ಣ ಉಚಿತವಾಗಿ ಈ ಸೇವೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಏನಿದರ ಮಹತ್ವ?
ಸದ್ಯಕ್ಕೆ `ಅವಧಿಗೆ ಮುನ್ನವೇ ಜನಿಸುವ~ ಮಕ್ಕಳ, ನೇತ್ರ ತಪಾಸಣೆ ಮಾಡಿಸುವುದಕ್ಕೆ ಪೋಷಕರು ಪರದಾಡಬೇಕಾದ ಸ್ಥಿತಿ ಇದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಹೋಗುವುದಕ್ಕೆ ಕಷ್ಟ ಆಗಬಹುದು. ಕೆಲ ಜಿಲ್ಲೆಗಳಲ್ಲಿ, ಆಯ್ದ ಆಸ್ಪತ್ರೆಗಳಿಗೆ ನಾರಾಯಣ ನೇತ್ರಾಲಯದ ವೈದ್ಯರ ತಂಡ ಭೇಟಿ ಕೊಡುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ತಪಾಸಣೆಗೆ ಇಂತಿಷ್ಟು ಶುಲ್ಕ (ಕನಿಷ್ಠ ರೂ 250- 300) ಪಡೆಯಲಾಗುತ್ತದೆ. ಹೀಗೆ, ಹಲವು ಬಾರಿ ತಪಾಸಣೆಗೆ ಹೋದಾಗಲೂ ಶುಲ್ಕ ನೀಡಬೇಕು, ಚಿಕಿತ್ಸೆಗೆ ಹಣ ತುಂಬಬೇಕು. ಅಲ್ಲದೇ, ಪ್ರಯಾಣದ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಮಧ್ಯಮ ವರ್ಗದವರಿಗೆ ಇದರಿಂದ ಆಗುವ `ಹೊರೆ~ ತಪ್ಪಿಸಲು ಸರ್ಕಾರದಿಂದಲೇ, ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಸೇವೆ ಕಲ್ಪಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.