ಸೋಮವಾರ, ಜೂನ್ 14, 2021
22 °C

ಚಿಣ್ಣರ ಅರಿವಿನ ಹರವು ಹೆಚ್ಚಿಸುತ್ತ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಣ್ಣರ ಅರಿವಿನ ಹರವು ಹೆಚ್ಚಿಸುತ್ತ..!

ಬೇಸಿಗೆ ರಜೆ ಎಂದರೆ ಬೆಂಗಳೂರಿನಲ್ಲಿ ರಜಾಶಿಬಿರಗಳದ್ದೇ ಭರಾಟೆ. ಶಾಲೆಯ ಓದು ಹಾಗೂ ಬರಹದಲ್ಲಿ ಆಗಾಗ ಕುಗ್ಗುವ ಅವರ ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಶಕ್ತಿ ಆಚೆ ಬರುವುದೇ ಇಂಥ ಶಿಬಿರಗಳಲ್ಲಿ.ಈ ವರ್ಷ ಮಕ್ಕಳ ಸೃಜನಾತ್ಮಕ ಶಕ್ತಿಯನ್ನು ಬೆಳೆಸಲು ಧಾತು ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಿದೆ. ಬನಶಂಕರಿಯ ಎರಡನೇ ಹಂತದಲ್ಲಿರುವ `ಧಾತು~ ಸಂಸ್ಥೆಯು 9ರಿಂದ 13 ವರ್ಷ ವಯೋಮಾನದ ಮಕ್ಕಳಿಗಾಗಿ ಮಹಾಭಾರತದ ಕಾರ್ಯಾಗಾರವನ್ನು ಏರ್ಪಡಿಸಿದೆ.ಮಹಾಭಾರತದ ಮಹಾ ಕತೆಯನ್ನು ಹೇಳುತ್ತಲೇ ವರ್ಕ್ ಬುಕ್ ಆ್ಯಕ್ಟಿವಿಟಿ ಬುಕ್‌ಗಳನ್ನು ಸಹ ಮಕ್ಕಳಿಗೆ ನೀಡುತ್ತದೆ. ಈ ಕಾರ್ಯಾಗಾರದಲ್ಲಿ ಮಹಾಭಾರತದ ದೃಶ್ಯಗಳನ್ನು ರೂಪಕವಾಗಿ, ಬೊಂಬೆಯಾಟದ ಮೂಲಕ ಪ್ರಸ್ತುತ ಪಡಿಸುವುದನ್ನೂ ಹೇಳಿಕೊಡಲಾಗುತ್ತದೆ.ಮಹಾಭಾರತದ ಕತೆಯೊಂದಿಗೆ, ಕತೆ ಹೇಳುವುದನ್ನು ಮಕ್ಕಳು ಕಲಿಯುತ್ತಾರೆ. ಪತ್ರಗಳೇ ಮರೆಯಾಗುತ್ತಿರುವ ಈ ಕಾಲದಲ್ಲಿ ಪೋಸ್ಟ್ ಕಾರ್ಡ್‌ನಲ್ಲಿ ಮಹಾಭಾರತದ ಯಾವುದಾದರೂ ಒಂದು ಪಾತ್ರ ಪರಿಚಯ ಅಥವಾ ದೃಶ್ಯವನ್ನು ಇನ್ನೊಬ್ಬರಿಗೆ ಬರೆಯುವ ಕಲೆಯನ್ನೂ ಹೇಳಿಕೊಡಲಾಗುತ್ತದೆ.ಮಕ್ಕಳ ಕಲ್ಪನಾ ಲೋಕವನ್ನು ವಿಸ್ತರಿಸುತ್ತಲೇ, ಪರಿಕಲ್ಪನೆಯನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನೂ ನೀಡಲಾಗುತ್ತದೆ.7ರಿಂದ 12 ವರ್ಷಗಳ ಚಿಣ್ಣರಿಗೆ ಬೊಂಬೆ ತಯಾರಿಸುವ ಬಗೆಯನ್ನು ಹೇಳಿಕೊಡಲಿದ್ದಾರೆ. ಇವರಿಗೆ ಏ.9ರಿಂದ 13ರವರೆಗೆ ಕಾರ್ಯಾಗಾರವನ್ನು ಏರ್ಪಡಿಸಿದ್ದಾರೆ. ಮಕ್ಕಳು ಮಾಡಿದ ಬೊಂಬೆಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.ಇದಷ್ಟೇ ಅಲ್ಲ, ಬೊಂಬೆ ಬಳಸಿ ಕತೆ ಹೇಳುವ ಕಲೆಯನ್ನು ಕಲಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಅನುಪಮಾ ಹೊಸಕೆರೆ ಅವರನ್ನು ಸಂಪರ್ಕಿಸಬಹುದು. ಠ್ಠಿಃಜಞಜ್ಝಿ.್ಚಟಞ, 08065683396ಗೆ ಸಂಪರ್ಕಿಸಬಹುದು.ಬ್ರಿಟಿಷ್ ಲೈಬ್ರೆರಿ ಹದಿಹರೆಯದ ಮಕ್ಕಳನ್ನು ಈ ಬೇಸಿಗೆಯಲ್ಲಿ ಓದಿನತ್ತ ಸೆಳೆಯುವ ತಂತ್ರ ಹೂಡಿದೆ.ಬ್ರಿಟಿಷ್ ಲೈಬ್ರೆರಿ ಯಂಗ್ ಲರ್ನರ್ಸ್‌ ಸದಸ್ಯತ್ವವನ್ನು ಪರಿಚಯಿಸಿದೆ. ಲೈಬ್ರೆರಿಯ ಸಂಗ್ರಹದಲ್ಲಿರುವ 4000 ಮಕ್ಕಳ ಪುಸ್ತಕಗಳಲ್ಲಿ ಕೆಲವನ್ನಾದರೂ ಈ ಬೇಸಿಗೆಯಲ್ಲಿ ಓದಿ ಎಂಬುದು ಗ್ರಂಥಾಲಯದ ಆಶಯವಾಗಿದೆ.ಕಾಲ್ಪನಿಕ ಕತೆಯೊಂದಿಗೆ ರೋಚಕ ಅನುಭವ ಪಡೆಯಿರಿ. ಕತೆಯಿಂದಲೇ ಕಲ್ಪನಾಲೋಕಕ್ಕೆ ಕಾಲಿರಿಸಿ ಎಂದು ಕರೆ ನೀಡಿದೆ. ಜ್ಞಾನ ಕಣಜದ ಹರಿವನ್ನು ಹಿಗ್ಗಿಸಲು ಸರಳ ವಿಜ್ಞಾನ, ಸುಲಭ ಗಣಿತ, ಆಸಕ್ತಿಕರ ಇತಿಹಾಸದ ಪುಸ್ತಕಗಳನ್ನೂ ಓದಿರಿ ಎಂದು ಆಹ್ವಾನಿಸಿದೆ.ಇಂಗ್ಲಿಷ್ ಶಬ್ದ ಸಂಪತ್ತು ಹೆಚ್ಚಿಸುತ್ತಲೇ ಭಾಷಾ ಕೌಶಲ ಪಡೆಯಿರಿ ಎಂಬ ಸಲಹೆ ನೀಡುತ್ತದೆ. ಇದಷ್ಟೇ ಅಲ್ಲ,  ಸದಸ್ಯತ್ವ ಪಡೆದವರಿಗಾಗಿ ರಿಯಾಯಿತಿ ದರದಲ್ಲಿ ಕೆಲ ಸಾಹಿತ್ಯದ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬಹುದಾಗಿದೆ ಎಂದು ಲೈಬ್ರೆರಿ ಹೇಳಿದೆ.16 ವರ್ಷ ಮೀರದ ಮಕ್ಕಳಿಗಾಗಿ ಎರಡು ತಿಂಗಳ ಅವಧಿಯ ಸದಸ್ಯತ್ವವನ್ನು ನೀಡಲಾಗುತ್ತದೆ. ಪ್ರತಿ ಸದಸ್ಯತ್ವ ಶುಲ್ಕ 600 ರೂಪಾಯಿಗಳು. ಹೆಚ್ಚಿನ ಮಾಹಿತಿಗೆ 22489220ಗೆ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.