ಶುಕ್ರವಾರ, ಜೂನ್ 25, 2021
30 °C

ಚಿತ್ರೋತ್ಸವಕ್ಕೆ ವಿದ್ಯಾ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರೋತ್ಸವಕ್ಕೆ ವಿದ್ಯಾ ರಾಯಭಾರಿ

ಮೆಲ್ಬರ್ನ್‌ನಲ್ಲಿ ನಡೆಯಲಿರುವ ವಿಕ್ಟೋರಿಯಾ ಚಲನಚಿತ್ರೋತ್ಸವಕ್ಕೆ ವಿದ್ಯಾ ಬಾಲನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.ಈ ಬಗ್ಗೆ ಸಂತೋಷ ವ್ಯಕ್ತ ಪಡಿಸಿರುವ ವಿದ್ಯಾ ನನಗಿದು, ಬಯಸದೆ ಬಂದ ಭಾಗ್ಯವಾಗಿದೆ ಎಂದು ಉದ್ಗರಿಸಿದ್ದಾರೆ.ವಿಕ್ಟೋರಿಯಾ ಹಾಗೂ ಭಾರತದ ಎರಡೂ ಸಮುದಾಯಗಳ ನಡುವೆ ಈ ಚಿತ್ರೋತ್ಸವ ಉತ್ತಮ ಬಾಂಧವ್ಯವನ್ನು ಬೆಸೆಯುತ್ತದೆ. ಚಿತ್ರೋದ್ಯಮಿಗಳಿಗೆ ಪ್ರೋತ್ಸಾಹವನ್ನೂ ನೀಡುತ್ತದೆ. ಇಲ್ಲಿ ಏರ್ಪಡಿಸಲಾಗಿರುವ ಶಾರ್ಟ್ ಫಿಲ್ಮ್ ಸ್ಪರ್ಧೆಯಿಂದಾಗಿ ನೂತನ ಪ್ರತಿಭೆಗಳಿಗೆ ಉತ್ತಮ ವೇದಿಕೆಯೂ ದೊರೆಯುತ್ತದೆ ಎಂದೆಲ್ಲ ಈ ಬೆಡಗಿ ಪಕ್ಕಾ ರಾಯಭಾರಿಯಂತೆಯೇ ಮಾತನಾಡತೊಡಗಿದ್ದಾಳೆ.ಕಳೆದೆರಡು ವರ್ಷಗಳಿಂದ ಸತತವಾಗಿ ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದ ವಿದ್ಯಾ ಬಾಲನ್ `ಕಹಾನಿ~ ಚಿತ್ರದ ನಂತರ ಬ್ರೇಕ್ ಬೇಕು ಎಂದು ಬಯಸಿದ್ದಳು. ಆದರೆ ಅಷ್ಟರಲ್ಲಿಯೇ `ಘನ್‌ಚಕ್ಕರ್~ ಚಿತ್ರದ ಯೋಜನೆ ಸಿದ್ಧವಾಗಿತ್ತು.ಈಗ ಈ ಸಿನಿ ಉತ್ಸವದಿಂದ ಸಣ್ಣದೊಂದು ರಜೆ ಅಥವಾ ಬಿಡುವು ಸಿಗಬಹುದು ಎಂದು ವಿದ್ಯಾ ಎಣಿಸಿದ್ದಾರೆ. ಮೆಲ್ಬರ್ನ್ ತಮ್ಮ ಅತಿ ನೆಚ್ಚಿನ ತಾಣವೆಂದು ಮೆಚ್ಚುಗೆಯ ಮಾತು ಆಡುವುದನ್ನು ಮಾತ್ರ ವಿದ್ಯಾ ಮರೆತಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.