ಶನಿವಾರ, ಜೂನ್ 12, 2021
22 °C

ಚಿನ್ನದ ಸರ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮನೆಯ ಕಾಂಪೌಂಡ್‌ನ ಒಳಗೆ ಕುಳಿತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿ  ಪರಾರಿಯಾಗಿರುವ ಘಟನೆ ಯಲಹಂಕ ಉಪನಗರ ನಾಲ್ಕನೇ ಹಂತದಲ್ಲಿ ಮಂಗಳವಾರ ನಡೆದಿದೆ.ರತ್ನಾವತಿ(70) ಸರ ಕಳೆದುಕೊಂಡ ವೃದ್ಧೆ. ಇವರು ಬೆಳಗ್ಗೆ 11 ಗಂಟೆ ಹೊತ್ತಿನಲ್ಲಿ ಗಣೇಶ ದೇವಸ್ಥಾನದ ಬಳಿಯಿರುವ ತಮ್ಮ ಮನೆಯ ಕಾಂ ಪೌಂಡ್‌ನ ಒಳಗೆ ಕುಳಿತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದಿದ್ದಾರೆ.ಒಬ್ಬ ಹೆಲ್ಮೆಟ್‌ ಧರಿಸಿ ಬೈಕ್‌ನ ಮೇಲೆ ಕುಳಿತಿದ್ದ. ಮತ್ತೊಬ್ಬ ಚೀಟಿ ಹಿಡಿದುಕೊಂಡು ವಿಳಾಸಕೇಳುವ ರೀತಿಯಲ್ಲಿ ಕಾಂಪೌಂಡ್‌ನ ಒಳಗೆ ಬಂದು ಈಕೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ.ಈ ವೇಳೆ ಆಕೆ ಕೂಗಿಕೊಂಡಿದ್ದಾಳೆ. ಮನೆಯವರು ಆಚೆ ಬರುವಷ್ಟರಲ್ಲಿ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಯಲಹಂಕ ಉಪ ನಗರ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.