ನವದೆಹಲಿ(ಪಿಟಿಐ): ಸತತ ಐದು ತಿಂಗಳ ಕುಸಿತದ ನಂತರ ದೇಶದ ಚಿನ್ನಾಭರಣ ರಫ್ತು ವಹಿವಾಟು ಅಕ್ಟೋಬರ್ನಲ್ಲಿ ಶೇ 21.8ರಷ್ಟು ಏರಿಕೆ ಕಂಡಿದ್ದು ರೂ 20,894 ಕೋಟಿ (337 ಕೋಟಿ ಡಾಲರ್ ) ವಹಿವಾಟು ದಾಖಲಿಸಿದೆ.

ಕ್ರಿಸ್ಮಸ್ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕ, ಯೂರೋಪ್, ಜಪಾನ್, ಮಧ್ಯಪ್ರಾಚ್ಯ ಸೇರಿದಂತೆ ಸಾಗರೋತ್ತರ ಮಾರುಕಟ್ಟೆಗಳಿಂದ ದೇಶದ ಆಭರಣಗಳಿಗೆ, ವಿಶೇಷವಾಗಿ ಕುಸುರಿ ಕೆಲಸದ ಚಿನ್ನದ ಒಡವೆಗಳು, ಹವಳಗಳು, ವಜ್ರಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಚಿನ್ನಾಭರಣ ರಫ್ತು ವಹಿವಾಟು ಉತ್ತೇಜನಾ ಮಂಡಳಿ(ಜಿಜೆಇಪಿಸಿ) ತಿಳಿಸಿದೆ.

2012ರ ಅಕ್ಟೋಬರ್ನಲ್ಲಿ ರೂ 16,740 ಕೋಟಿ (270 ಕೋಟಿ ಡಾಲರ್) ರಫ್ತು ವಹಿವಾಟು ನಡೆದಿತ್ತು.
ಕಳೆದ ಹಣಕಾಸು ವರ್ಷದಲ್ಲಿ 830 ಟನ್ ಚಿನ್ನ ಆಮದು ಮಾಡಿಕೊಳ್ಳಲಾ ಗಿತ್ತು. ಈ ಬಾರಿ ರಫ್ತು ಉತ್ತೇಜಿಸಲು ಸರ್ಕಾರ ಸಾಕಷ್ಟು ಉತ್ತೇಜನಾ ಕೊಡುಗೆ ಗಳನ್ನು ಪ್ರಕಟಿಸಿದೆ. ರಫ್ತು ಉದ್ದೇಶಕ್ಕಾ ಗಿಯೇ ಆಮದು ಮಾಡಿಕೊಳ್ಳಬೇಕು ಎಂಬ ನಿರ್ಬಂಧವನ್ನೂ ವಿಧಿಸಿತ್ತು.

ದೇಶದ ಒಟ್ಟಾರೆ ರಫ್ತು ವಹಿವಾಟಿ ನಲ್ಲಿ ಚಿನ್ನಾಭರಣಗಳ ಪಾಲು ಶೇ 17ರ ಷ್ಟಿದ್ದು, 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.