ಮಂಗಳವಾರ, ಮೇ 24, 2022
25 °C

ಚಿನ್ನ, ಬೆಳ್ಳಿ ಆಮದು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಕೈಗೊಂಡ ಚಿನ್ನ-ಬೆಳ್ಳಿ ಆಮದು ನಿಯಂತ್ರಣ ಕ್ರಮಗಳೂ ಕಡೆಗೂ ಫಲಿತಾಂಶ ನೀಡಿವೆ. ಜೂನ್‌ನಲ್ಲಿ 245 ಕೋಟಿ ಡಾಲರ್ (ಅಂದಾಜು ರೂ.14,577 ಕೋಟಿ)ಮೌಲ್ಯದ ಚಿನ್ನ-ಬೆಳ್ಳಿ ಆಮದಾಗಿದೆ. ಇದು ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿನ ಆಭರಣ ಲೋಹಗಳ ಕಡಿಮೆ ಆಮದು ಪ್ರಮಾಣವಾಗಿದೆ.ಇದರಿಂದಾಗಿ ಜೂನ್‌ನಲ್ಲಿ ದೇಶದ ಆಮದು-ರಫ್ತು ಅಂತರ ಪ್ರಮಾಣ 1220 ಕೋಟಿ ಡಾಲರ್(ರೂ.72,590 ಕೋಟಿ)  ಮಟ್ಟಕ್ಕೆ ತಗ್ಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ 2010 ಕೋಟಿ ಡಾಲರ್‌ಗಳಷ್ಟಿದ್ದ ಆಮದು-ರಫ್ತು ಅಂತರ ಕಳೆದ ಏಳು ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿತ್ತು.ಜೂನ್‌ನಲ್ಲಿ ಆಮದು ಪ್ರಮಾಣ ತಗ್ಗಿರುವುದು ಚಾಲ್ತಿ ಖಾತೆ ಕೊರತೆ(ಸಿಎಡಿ)ಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4.8ಕ್ಕೆ  ಇಳಿಯುವಂತೆ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.