ಗುರುವಾರ , ಮೇ 13, 2021
38 °C

ಚಿನ್ನ, ಬೆಳ್ಳಿ ಧಾರಣೆ ಅಲ್ಪ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜಾಗತಿಕ ಸಂಗತಿಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಗುರುವಾರದ ವಹಿವಾಟಿನಲ್ಲಿ ಅಲ್ಪ ಇಳಿಕೆ ಕಂಡಿವೆ. ಚಿನ್ನ 10 ಗ್ರಾಂಗಳಿಗೆ ರೂ175 ಇಳಿಕೆ ಕಂಡರೆ, ಬೆಳ್ಳಿ 1 ಕೆ.ಜಿಗೆ ರೂ800 ಇಳಿಕೆಯಾಗಿದೆ.ದೇಶಿಯ ಮಾರುಕಟ್ಟೆಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಬೆಲೆ ಕ್ರಮವಾಗಿ 10 ಗ್ರಾಂಗಳಿಗೆ ರೂ28,290 ಮತ್ತು ರೂ28,140ರಷ್ಟಾಗಿದೆ. ಬುಧವಾರ ಚಿನ್ನದ ಬೆಲೆ ರೂ225 ಏರಿಕೆಯಾಗಿತ್ತು. ಬೆಳ್ಳಿ ಧಾರಣೆ ರೂ64,200ರಷ್ಟಾಗಿದೆ.ಜಾಗತಿಕ ಷೇರುಪೇಟೆಗಳಲ್ಲಿನ ಚೇತರಿಕೆ ಮತ್ತು ಯೂರೋಪ್ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಜರ್ಮನಿ, ಪ್ರೆಂಚ್ ಮತ್ತು ಚೀನಾ ಬೆಂಬಲ ಸೂಚಿಸಿರುವುದರಿಂದ ಹೂಡಿಕೆದಾರರ ಆತ್ಮವಿಶ್ವಾಸ ಮರಳಿದೆ. ಇದು  ಚಿನ್ನದ ಮೇಲಿನ ಹೂಡಿಕೆ ಮತ್ತು ಖರೀದಿಗೆ ತಾತ್ಕಾಲಿಕ ಕಡಿವಾಣ ಹಾಕಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಶೇ 0.9ರಷ್ಟು ಇಳಿಕೆ ಕಂಡಿದ್ದು, ಪ್ರತಿ ಔನ್ಸ್‌ಗೆ 1,804 ಡಾಲರ್‌ಗಳಷ್ಟಾಗಿದೆ. ಬೆಳ್ಳಿ ಬೆಲೆ ಕೆ.ಜಿಗೆ ಶೇ 0.4ರಷ್ಟು ಕುಸಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.