ಚೀನಾಕ್ಕೆ ಅಪ್ಪಳಿಸಿದ ‘ನಿಡಾ’

ಬೀಜಿಂಗ್(ಪಿಟಿಐ): ‘ನಿಡಾ’ ಚಂಡಮಾರುತ ದಕ್ಷಿಣ ಚೀನಾಕ್ಕೆ ಮಂಗಳವಾರ ಅಪ್ಪಳಿಸಿದ್ದು, ಸಾವಿರಾರು ಜನ ತೊಂದರೆಗೆ ಸಿಲುಕಿದ್ದಾರೆ. ಕಳೆದ 33 ವರ್ಷಗಳಲ್ಲಿ ಚೀನಾಕ್ಕೆ ಅಪ್ಪಳಿಸಿದ ಅತ್ಯಂತ ಬಲಿಷ್ಠ ಚಂಡಮಾರುತ ಇದು ಎನ್ನಲಾಗಿದೆ. ಚಂಡಮಾರುತದಿಂದಾಗಿ ಗಂಟೆಗೆ 151 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ದಕ್ಷಿಣ ಚೀನಾದ ಗಾಂಗ್ಡಾಂಗ್ನಲ್ಲಿ ಚಂಡಮಾರುತದ ಕೇಂದ್ರಬಿಂದುವಿತ್ತು. ಇಲ್ಲಿನ ಪ್ರಾಂತೀಯ ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದ್ದು, ಕೆಲಸ, ಉತ್ಪಾದನಾ ಚಟುವಟಿಕೆ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಶಾಲೆಗಳನ್ನು ಮುಚ್ಚಲಾಗಿದೆ. ಪರಿಹಾರ ಕಾರ್ಯಾಚರಣೆಗೆ ಸನ್ನದ್ಧವಾಗಿರುವಂತೆ ತಿಳಿಸಲಾಗಿದೆ.
‘ನಿಡಾ’ ದಿಂದಾಗಿ ಈಶಾನ್ಯ ಭಾಗದಲ್ಲಿ ಮಳೆಯಾಗುತ್ತಿದೆ. ಚೀನಾದಲ್ಲಿ 1983ರಲ್ಲಿ ಇಂಥ ಚಂಡಮಾರುತ ಬೀಸಿತ್ತು. 180 ಬುಲೆಟ್ ರೈಲು ಸೇರಿದಂತೆ 200 ರೈಲುಗಳನ್ನು ಮಂಗಳವಾರ ನಿಲ್ಲಿಸಲಾಗಿದೆ. ಮಧ್ಯಾಹ್ನದವರೆಗೆ 31 ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ವಿಮಾನನಿಲ್ದಾಣಗಳಲ್ಲೇ ಉಳಿದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.