ಶುಕ್ರವಾರ, ಮೇ 7, 2021
21 °C

ಚೀನಾದಲ್ಲಿ `ಈಗ' ಚಿತ್ರಕ್ಕೆ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲುಗು ನಿರ್ದೇಶಕ ರಾಜಮೌಳಿ ತುಂಬಾ ಖುಷಿಯಲ್ಲಿದ್ದಾರಂತೆ. ಅವರ ನಿರ್ದೇಶನದ `ಈಗ' ಸಿನಿಮಾಕ್ಕೆ 16ನೇ  ಶಾಂಘೈ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ ದೊರತಿರುವುದು ಖುಷಿಗೆ ಕಾರಣ.



ಸತ್ತ ವ್ಯಕ್ತಿ `ನೊಣ'ವಾಗಿ ತನ್ನ ದ್ವೇಷವನ್ನು ತೀರಿಸಿಕೊಳ್ಳುವ `ಈಗ' ಜನರನ್ನು ಹೆಚ್ಚು ಆಕರ್ಷಿಸಿತ್ತು. ತಮಿಳು, ಹಿಂದಿ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿತ್ತು. ಇದೀಗ ಚೀನಾ ಸರದಿ. ಈ ವರ್ಷದ ಕೊನೆಯಲ್ಲಿ ಚೀನಾ ಮಂದಿಯೂ `ಈಗ' ವೀಕ್ಷಿಸಲಿದ್ದಾರೆ ಎಂದು ರಾಜಮೌಳಿ ತಮ್ಮ ಸಿನಿಮಾ ಕುರಿತು ಟ್ವೀಟ್ ಮಾಡಿದ್ದಾರೆ. ತೆಲುಗಿನಲ್ಲಿ `ಈಗ', ಹಿಂದಿಯಲ್ಲಿ `ಮಕ್ಕಿ', ತಮಿಳಿನಲ್ಲಿ `ನಾನ್ ಈ' ಎಂದೆಲ್ಲಾ ಶೀರ್ಷಿಕೆಗಳಿದ್ದ ಚಿತ್ರಕ್ಕೆ ಚೀನಾದಲ್ಲಿ ತಾತ್ಕಾಲಿಕವಾಗಿ `ಕುಂಗ್ ಫು ಹೌಸ್‌ಫ್ಲೈ` ಎಂಬ ಹೆಸರಿಟ್ಟಿದ್ದಾರಂತೆ.



ಜನರ ಭಾಷೆ, ಜಾತಿ, ಸಂಸ್ಕೃತಿ ಬೇರೆ ಇರಬಹುದು. ಆದರೆ ಭಾವನೆಗಳು ಒಂದೇ ರೀತಿಯಾಗಿರುತ್ತವೆ. ಚೀನಾದ ವೀಕ್ಷಕರು ಇದನ್ನು ಸ್ವೀಕರಿಸಬಹುದು ಎಂಬ ನಂಬಿಕೆ ನನಗಿದೆ ಎಂದು ಚಿತ್ರ ನಿರ್ದೇಶಕ ಹೇಳಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.