ಚೀನಾ: ಎಡಪಕ್ಷ ಕೇಂದ್ರೀಯ ಸಮಿತಿ ಸಭೆ

7

ಚೀನಾ: ಎಡಪಕ್ಷ ಕೇಂದ್ರೀಯ ಸಮಿತಿ ಸಭೆ

Published:
Updated:

ಬೀಜಿಂಗ್ (ಪಿಟಿಐ): ಚೀನಾ ಎಡಪಕ್ಷದ ಕೇಂದ್ರೀಯ ಸಮಿತಿ ಸಭೆಯು ಶನಿವಾರ ಆರಂಭವಾಗಿದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಂತಹ ಅಧಿಕಾರ ಹೊಂದಿರುವ ಸಮಿತಿಯ ಆರನೇ ಸಭೆ ಇದಾಗಿದೆ.ಮುಂದಿನ ವರ್ಷ ಪಕ್ಷದ ಮುಖಂಡತ್ವದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಿದ್ಧತೆ ನಡೆಸಲು ಈ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೇಂದ್ರ ಸಮಿತಿಯ 200ಕ್ಕೂ ಹೆಚ್ಚು ಸದಸ್ಯರು ಮತ್ತು ಸೇನೆ, ಸರ್ಕಾರ ಹಾಗೂ ಪ್ರಾಂತೀಯ ಸಮಿತಿಗಳಿಂದ ಆಯ್ದ 150 ಮಂದಿ ಭಾಗವಹಿಸಿದ್ದಾರೆ.ವಿಶ್ವದಲ್ಲಿ ಬಲಿಷ್ಠ ಎಡಪಕ್ಷ ಹೊಂದಿರುವ ಹೆಗ್ಗಳಿಕೆ ಉಳಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಚೀನಾಕ್ಕೆ ಈ ಪಕ್ಷ ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ಬಗ್ಗೆಸಭೆಯಲ್ಲಿ ಗಹನವಾದ ಚರ್ಚೆ ನಡೆಯಲಿದೆ.  ಚೀನಾ ಕೂಡ ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಎಡಪಕ್ಷದ ಕೇಂದ್ರೀಯ ಸಮಿತಿ ಸಭೆ ಬಹು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry