ಮಂಗಳವಾರ, ಜೂನ್ 15, 2021
27 °C

ಚೀನಾ ಕಾಲೇಜಿನಲ್ಲಿ ನೈತಿಕ ಬ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಐಎಎನ್‌ಎಸ್): ವಿದ್ಯಾರ್ಥಿಗಳಲ್ಲಿ ಸ್ವಯಂ ಸೇವಾ ಮನೋಭಾವ ಉತ್ತೇಜಿಸಲು ಚೀನಾದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ `ನೈತಿಕ ಬ್ಯಾಂಕ್~ ಆರಂಭಿಸಲಾಗಿದೆ. ಇದೀಗ ಇಲ್ಲಿ ವಿದ್ಯಾರ್ಥಿಗಳು ಖಾತೆಯನ್ನೂ ತೆರೆದಿದ್ದಾರೆ.



ಹುನಾನ್ ಪ್ರಾಂತ್ಯದ ದ ಚೆಂಗ್‌ನಾನ್ ಕಾಲೇಜ್ ಆಫ್ ಚಾಂಗ್‌ಶಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಈ ವಿನೂತನ ಯೋಜನೆ ಜಾರಿಗೊಳಿಸಿದ್ದು, ಉತ್ತಮ ಕೆಲಸಕ್ಕಾಗಿ `ನಾಣ್ಯ~ಗಳನ್ನು  ಖಾತೆಯಲ್ಲಿ ನಮೂದಿಸಲಾಗುತ್ತದೆ.



ಒಂದು ಗಂಟೆ ಸ್ವಯಂ ಸೇವೆ ಸಲ್ಲಿಸಿದ ವಿದ್ಯಾರ್ಥಿಗೆ ಮೂರು `ನೈತಿಕ ನಾಣ್ಯ~ಗಳನ್ನು ನೀಡಲಾಗುತ್ತದೆ; ರಕ್ತದಾನ ಮಾಡಿದರೆ `ಆರು ನಾಣ್ಯ~ಗಳನ್ನು ಗಳಿಸಬಹುದು ಎಂದು ಬ್ಯಾಂಕ್ ಸಂಸ್ಥಾಪಕ ಪೆಂಗ್‌ಕ್ಸಿಯಾ ಹೇಳಿದ್ದಾರೆ.



ಶಿಷ್ಯವೇತನಕ್ಕೆ ಅರ್ಜಿ ಹಾಕಲು ಮತ್ತು ರಿಯಾಯಿತಿ ಪಡೆಯಲು ಕನಿಷ್ಠ 10 ನಾಣ್ಯಗಳನ್ನು ಪಡೆಯುವುದು ಕಡ್ಡಾಯವಾಗ್ದ್ದಿದು ಹೆಚ್ಚು  ನಾಣ್ಯ ಸಂಪಾದಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಕಾಲೇಜು ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.