ಸೋಮವಾರ, ಮೇ 23, 2022
22 °C

ಚೀನಾ: ವಿಕೃತಕಾಮಿಗೆ ಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಹದಿಹರೆಯದ ಯುವತಿಯರಿಬ್ಬರನ್ನು ಎರಡು ವರ್ಷಗಳ ಕಾಲ ನೆಲಮಾಳಿಗೆಯ ಕೋಣೆಯೊಂದರಲ್ಲಿ ಬಂಧಿಸಿ ನಿರಂತರ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಚೀನಾದ ವಿಕೃತಕಾಮಿಯೊಬ್ಬನಿಗೆ ಮರಣದಂಡನೆ ವಿಧಿಸಲಾಗಿದೆ.2008ರಲ್ಲಿ ಜೆಂಗ್ 16 ವರ್ಷದ ಹು ಎಂಬ ಯುವತಿಯನ್ನು ಅಪಹರಿಸಿ ತನ್ನ ಮನೆಯ ನೆಲಮಾಳಿಗೆಗೆ ಎಳೆದೊಯ್ದು ಅತ್ಯಾಚಾರ ಎಸೆಗಿದ್ದ. 2009ರಲ್ಲಿ 19ವರ್ಷದ ಜುವಾ ಎಂಬಾಕೆಯನ್ನು ಅಪಹರಿಸಿ ಅದೇ ರೀತಿ ಬಂಧಿಸಿ ಅತ್ಯಾಚಾರ ಎಸಗಿದ್ದನು. ಪ್ರತಿ ನಿತ್ಯ ಇಬ್ಬರನ್ನೂ ಹಿಂಸಿಸುತ್ತಿದ್ದ ಆತ  ನಿರಂತರವಾಗಿ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದನು. 2010ರ ಮೇ ತಿಂಗಳಿನಲ್ಲಿ  ಯುವತಿಯರು ತಾವು ಬಂಧಿತರಾಗಿರುವ ವಿಷಯವನ್ನು ಹಾಳೆಯೊಂದರಲ್ಲಿ ಬರೆದು ಹಾಳಾಗಿದ್ದ ಟಿವಿಯೊಳಗೆ ಇರಿಸಿದ್ದರು. ಟಿವಿ ರಿಪೇರಿ ಮಾಡುವ ಅಂಗಡಿಯಾತ ಅದನ್ನು ಓದಿ ಮಾಹಿತಿ ನೀಡಿದ ಬಳಿಕ ಪೊಲೀಸರು ಯುವತಿಯರನ್ನು ರಕ್ಷಿಸಿದ್ದರು.ಜೆಂಗ್ ಯುವತಿಯರನ್ನು ದೈಹಿಕ ಮತ್ತು ಮಾನಸಿಕವಾಗಿ ಶೋಷಿಸಿದ್ದಾನೆ. ಆತನ ಕೃತ್ಯ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದರಿಂದ ಆತನಿಗೆ ಮರಣದಂಡನೆಯೇ ಸೂಕ್ತ ಎಂದು  ನ್ಯಾಯಾಲಯ ತೀರ್ಪಿತ್ತಿದೆ.ಸ್ಥಳೀಯರು ಜೆಂಗ್ ಸಂಕೋಚದ ಪ್ರವೃತ್ತಿಯ, ಮಿತಭಾಷಿ ಮತ್ತು ಸನ್ನಡತೆಯುಳ್ಳ ವ್ಯಕ್ತಿ ಎಂದು ಭಾವಿಸಿದ್ದಾಗಿ ತಿಳಿಸಿದ್ದಾರೆ.

ವಿಚ್ಛೇದಿತನಾಗಿರುವ ಜೆಂಗ್ ತಾನು ಮಾನಸಿಕ ಸಮಸ್ಯೆ ಹೊಂದಿದ್ದು, ತನಗೆ ವಿಧಿಸಿರುವ ಶಿಕ್ಷೆ ಬಹಳ ಕಠಿಣವಾಗಿದೆ. ಮರಣದಂಡನೆಗೆ ಒಳಪಡಿಸುವ ತಪ್ಪು ಎಸಗಿಲ್ಲ ಎಂದು ವಾದಿಸಿದ್ದಾನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.