ಗುರುವಾರ , ಮೇ 19, 2022
20 °C

ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಕೋಳಿವಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: `5 ಬಾರಿ ಶಾಸಕನಾಗಿದ್ದೇನೆ, ಇನ್ನು ಮುಂದೆ ಚನಾವಣೆಗೆ ನಿಲ್ಲುವುದಿಲ್ಲ ಎಂದು ಬರಿ ಬಾಯಿ ಮಾತಿನಿಂದ ಹೇಳುತ್ತಿಲ್ಲ, ಹೃದಯದಿಂದ ಹೇಳಿದ್ದೇನೆ. ಚುನಾವಣೆಗಳು ದಾರಿ ತಪ್ಪಿವೆ. ಜಾತಿ, ಹಣದ ಪ್ರಭಾವ ಬಲಿಷ್ಠವಾಗುತ್ತಿದೆ, ಮತದಾರರು ಕೆಟ್ಟವರೋ, ಚುನಾಯಿತ ಪ್ರತಿನಿಧಿಗಳು ಕೆಟ್ಟವರೋ ಎಂಬ ಜಿಜ್ಞಾಸೆ ಮೂಡಿದೆ' ಎಂದು ಶಾಸಕ ಕೆ.ಬಿ.ಕೋಳಿವಾಡ ಹೇಳಿದರು.ನಗರದ ಸ್ಟೇಶನ್ ರಸ್ತೆಯ ವರ್ತಕರ ಸಂಘದ ಸಮುದಾಯ ಭವನದಲ್ಲಿ ಶನಿವಾರ ವರ್ತಕರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ವರ್ತಕರ ಎಲ್ಲ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಗಳು ಮಾತುಗಳಾಗಬೇಕು ಎಂದರು.ಐಎಎಸ್‌ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕರೂರಿನ ಡಾ.ರಾಜೇಂದ್ರ ಅವರು ಸನ್ಮಾನವನ್ನು ಸ್ವೀಕರಿಸಿ, ವರ್ತಕರು ಮತ್ತು ವಿವಿಧ ಸಂಘಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ ಮಾತನಾಡಿದರು.ಎಪಿಎಂಸಿ ಸದಸ್ಯರಾದ ಏಕನಾಥ ಭಾನುವಳ್ಳಿ, ಹರಿಹರ, ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಎಪಿಎಂಸಿ ವರ್ತಕರ ಸಂಘದ ಪ್ರತಿನಿಧಿ ಜಿ.ಜಿ. ಹೊಟ್ಟಿಗೌಡ್ರ ಅವರು ವರ್ತಕರ ಪರವಾಗಿ ವಿವಿಧ ಬೇಡಿಕೆಗಳನ್ನು ಶಾಸಕರಿಗೆ ಮನವಿ ಮಾಡಿದರು, ಎಪಿಎಂಸಿ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ.ಲಿಂಗನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಮೋಟಗಿ ಸ್ವಾಗತಿಸಿದರು. ಬಿ.ಬಿ.ನಂದ್ಯಾಲ ಕಾರ್ಯಕ್ರಮ ನಿರೂಪಿಸಿದರು. ಶೇಖರ ಜಡಮಲಿ ವಂದಿಸಿದರು.`ಚಿಂತನ-ಮಂಥನ'

ಹಾವೇರಿ:
ತಾಲ್ಲೂಕಿನ ಅಗಡಿ ಗ್ರಾಮದ ಅಕ್ಕಿಮಠದ ಉತ್ತರಾಧಿಕಾರಿ ಗುರುಲಿಂಗದೇವರ ಸಾನಿಧ್ಯದಲ್ಲಿ ಮಠದ ಬೆಳವಣಿಗೆಗೆ ಕಾರ್ಯ ಯೋಜನೆಗಳ ಚಿಂತನ ಮಂಥನ ಸಭೆ ನಡೆಯಿತು.ಶಾಸಕರ ವಿಶೇಷ ಅನುದಾನ ರೂ.5 ಲಕ್ಷ ಹಾಗೂ ವೈಯಕ್ತಿಕ ವಾಗ್ದಾನ ರೂ. 2 ಲಕ್ಷ ಹಾಗೂ ಚಿತ್ರದುರ್ಗದ ಮುರುಘಾಶರಣರು ವಾಗ್ದಾನ ಮಾಡಿರುವ ಹಣದಿಂದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಲಿಂಗೈಕ್ಯ ಸ್ವಾಮೀಜಿವರ ಪುಣ್ಯಾರಾಧನೆ ಕಾರ್ಯಕ್ರಮದ ಜಮಾ, ಖರ್ಚಿನ ವಿವರವನ್ನು ಪ್ರಭು ಪಟ್ಟಣಶೆಟ್ಟಿ ಸಭೆಗೆ ತಿಳಿಸಿದರು.ಸಭೆಯಲ್ಲಿ ನಿಜಲಿಂಗಪ್ಪ ಬಸೇಗಣ್ಣಿ, ಹನುಮಂತಗೌಡ ಗೊಲ್ಲರ, ಹನುಮಂತ ಕುಲಕರ್ಣಿ, ನಾಗರಾಜ, ಶಿವಪುತ್ರಪ್ಪ, ಡಾ.ಸತೀಶ ಈಳಿಗೇರ, ಪರಮೇಶಪ್ಪ ಶಿವಣ್ಣವರ, ಪುಟ್ಟಯ್ಯ ಮಾಗೋಡ, ಶಂಭಣ್ಣ ಬಸೇಗಣ್ಣಿ,  ಶಂಕರಗೌಡ, ಮಂಜಣ್ಣ, ಪರಶುರಾಮ, ದೇವೇಂದ್ರಪ್ಪ ಅಳ್ಳಳ್ಳಿ ಮತ್ತಿತರು ಪಾಲ್ಗೊಂಡಿದ್ದರು.ಚಂದ್ರಶೇಖರ ನಿರ್ವಾಣಮಠ ಸ್ವಾಗತಿಸಿದರು. ಫಕ್ಕೀರಯ್ಯ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.