ಸೋಮವಾರ, ಜನವರಿ 20, 2020
18 °C

ಚುನಾವಣೆ ಗೆಲುವು; ಬಿಜೆಪಿ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಫಲಿತಾಂಶ ಬಂದಿದ್ದು, ಲೋಕ­ಸಭಾ ಚುನಾವಣೆಯಲ್ಲೂ ಬಿಜೆಪಿ ಬಹು­ಮತ ಗಳಿಸಲಿದೆ ಎಂದು ಬಿಜೆಪಿ ಮುಖಂಡ ಅಗಲಗುರ್ಕಿ ಚಂದ್ರಶೇಖರ್‌ ತಿಳಿಸಿದರು.ಫಲಿತಾಂಶ ಘೋಷಣೆಯಾಗು­ತ್ತಿ­ದ್ದಂತೆ ಪಕ್ಷದ ಕಾರ್ಯಕರ್ತರು ಭಾನು­ವಾರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸೇರಿ ವಿಜಯೋತ್ಸವ ಆಚರಿಸಿದ ಸಂದರ್ಭ ಅವರು ಮಾತನಾಡಿದರು. ಬಿಜೆಪಿ ಮುಖಂಡರಾದ ತಮ್ಮೇಶ್‌­ಗೌಡ, ಶ್ರೀನಿವಾಸರೆಡ್ಡಿ, ಲಕ್ಷ್ಮಿನಾರಾ­ಯಣ ಗುಪ್ತಾ ಮುಂತಾದವರು ವಿಜ­ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದರು.ವಿಜಯೋತ್ಸವ

ಶಿಡ್ಲಘಟ್ಟ: ಬಿಜೆಪಿ ಕಾರ್ಯಕರ್ತರು ಭಾನುವಾರ ಪಟ್ಟಣದ ಕೋಟೆ ವೃತ್ತ­ದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.ದೆಹಲಿ, ರಾಜಾಸ್ತಾನ, ಮಧ್ಯ­ಪ್ರದೇಶ­ದಲ್ಲಿ ಕಾಂಗ್ರೆಸ್‌ ಪಕ್ಷ ಧೂಳೀ­ಪಟ­ವಾಗಿದೆ. ಛತ್ತೀಸ್‌ಗಢದಲ್ಲೂ ಹೆಚ್ಚು ಸ್ಥಾನ ಪಡೆಯಲು ಬಿಜೆಪಿ ಸಫಲವಾಗಿದ್ದು ಮುಂದಿನ ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿ­ಯಾಗ­ಲಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಯಿರಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಶ್ರೀಧರ್, ದಾಮೋದರ್, ಖಂಡೇ­ರಾವ್, ತ್ಯಾಗರಾಜ್, ಮುನಿರತ್ನಮ್ಮ, ರತ್ಮಮ್ಮ ಮತ್ತಿತರರು ವಿಜಯೋತ್ಸವ­ದಲ್ಲಿ ಪಾಲ್ಗೊಂಡಿದ್ದರು.ಲೋಕಸಭೆ ದಿಕ್ಸೂಚಿ

ಗೌರಿಬಿದನೂರು: ನವದೆಹಲಿ, ರಾಜ­ಸ್ತಾನ, ಛತ್ತೀಸ್‌ಗಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರೆ ಮಾತ್ರ ದೇಶಕ್ಕೆ ಭವಿಷ್ಯ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ.­ರವಿ­ನಾರಾಯಣರೆಡ್ಡಿ ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಆರ್.ನರಸಿಂಹಮೂರ್ತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಗೋಪಿನಾಥ್, ಸಣ್ಣಕ್ಕಿ ವೆಂಕಟರವಣಪ್ಪ, ಕೋಚಿಮುಲ್ ನಿರ್ದೇಶಕ ರಮೇಶ್, ಪುರಸಭೆ ಸದಸ್ಯ ಮೋಹನ್, ಗೋವಿಂದರಾಜು, ಸೊಸೈಟಿ ರಾಮಾಂಜಿ, ನಾಗರಾಜರೆಡ್ಡಿ, ಜಯಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ, ಶೋಭಾ, ರಮೇಶ್ ರಾವ್, ಜಯಣ್ಣ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)