ಶನಿವಾರ, ಜೂನ್ 19, 2021
28 °C

ಚೆಕ್ ಪೋಸ್ಟ್: ಸಮಸ್ಯೆ ಬಗೆಹರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ/ ಹಿ.ಕೃ.ಚಂದ್ರು Updated:

ಅಕ್ಷರ ಗಾತ್ರ : | |

ಹಿರೀಸಾವೆ: ಪಟ್ಟಣದ ಬಸವೇಶ್ವರ (ಮೇಟಿಕೆರೆ) ವೃತ್ತದಲ್ಲಿ ಎನ್ಎಚ್– 75ರಲ್ಲಿರುವ ಚುನಾವಣಾ ಅಕ್ರಮ ತಡೆ ಚೆಕ್ ಪೋಸ್ಟ್‌ ನಿಂದ ವಾಹನ ಚಾಲಕರು, ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಚೆಕ್ ಪೋಸ್ಟ್‌ ಪ್ರಾರಂಭವಾಗಿ ನಾಲ್ಕು ದಿನಗಳಾಗಿವೆ. ಇದುವರೆಗೆ ಯಾವುದೇ ಸೂಚನ ಫಲಕ ಹಾಕಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ವಾಹನಗಳು ಅತಿವೇಗವಾಗಿ ಬರುವುದ­ರಿಂದ ವಾಹನ ಚಾಲಕರಿಗೆ ಚೆಕ್‌ ಪೋಸ್ಟ್‌ ತಿಳಿಯುತ್ತಿಲ್ಲ. ರಸ್ತೆಗೆ ಅಡ್ಡಲಾಗಿ ಇಟ್ಟಿರುವ ಬ್ಯಾರಿಕೇಡ್‌­ಗಳಿಗೆ ರಿಪ್ಲೇಕಟ್ಟರ್‌ಗಳನ್ನು ಹಾಕದೆ ಇರುವುದರಿಂದ ರಾತ್ರಿ ಸಂಚಾರ ಮಾಡುವವರಿಗೆ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯಿಂದ  ಒಂದು ವಾಹನ ತಪಾಸಣೆಗೆ ತಡೆದರೆ, ಹತ್ತಾರು ವಾಹನಗಳು ಸಾಲಿನಲ್ಲಿ ನಿಲ್ಲಬೇಕಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಹೆಚ್ಚಿನ ಸಿಬ್ಬಂದಿ ಅಗತ್ಯವಿದ್ದರು, ಹಿರಿಯ ಅಧಿಕಾರಿಗಳು ಗಮನಹರಿಸಿಲ್ಲ ಎಂದು ವಾಹನ ಚಾಲಕರು ದೂರಿದ್ದಾರೆ.ವಿಐಪಿಗಳು: ಪ್ರತಿ ನಿತ್ಯ ಈ ರಸ್ತೆಯಲ್ಲಿ ಹಲವು ರಾಜಕೀಯ ನಾಯಕರು ಸೇರಿದಂತೆ ಹಲವು ಪಕ್ಷಗಳ ಅಭ್ಯರ್ಥಿಗಳು ಪ್ರಯಾಣಿಸುತ್ತಾರೆ. ಹಿರಿಯ ಅಧಿಕಾರಿಗಳು ಚೆಕ್ ಪೋಸ್ಟ್‌ನಲ್ಲಿ ಇಲ್ಲದೆ ಇರುವುದರಿಂದ ಗಣ್ಯರು ಮತ್ತು ಅವರ ಜತೆ ಸಂಚರಿಸುವ ವಾಹನಗಳ ತಪಾಸಣೆ ಮಾಡದೆ, ಇತರೆ ವಾಹನಗಳನ್ನು ಚೆಕ್‌ ಮಾಡುತ್ತಿರುವ ಬಗ್ಗೆ ಸಾರ್ವಜನಿರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.‘ರಸ್ತೆಯಲ್ಲಿ ಜಿಗ್‌ಜಾಗ್‌ ಬ್ಯಾರಿಕೇಡ್‌ಗಳು ಇರುವುದು ಚಾಲಕರಿಗೆ ತಿಳಿಯದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸ್‌, ಅಬಕಾರಿ ಮತ್ತು ಗೃಹ ರಕ್ಷಕ ದಳದ ಒಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಪ್ರತಿ ನಿಮಿಷಕ್ಕೆ 10ಕ್ಕೂ ಹೆಚ್ಚು ವಾಹನಗಳು ಸಂಚರಿಸುವುದರಿಂದ ತಪಾಸಣೆ ನಡೆಸಲು ಕಷ್ಟವಾಗಿದೆ. ಖಚಿತ ಮಾಹಿತಿ ಮೇರೆಗೆ ಕೆಲವು ವಾಹನಗಳನ್ನು ಚೆಕ್‌ ಮಾಡಲಾಗುತ್ತಿದೆ. ಪ್ರತಿ ತಪಾಸಣಾ ಕೇಂದ್ರದಲ್ಲಿ ವಾಹನಗಳನ್ನು ಚೆಕ್‌ ಮಾಡುವುದನ್ನು ವಿಡಿಯೋ ಚಿತ್ರಿಕರಣ ಮಾಡಬೇಕು ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದುವರೆಗೆ ಇಲ್ಲಿ ಯಾವುದೇ ವಾಹನ ತಪಾಸಣೆಯ ಚಿತ್ರಕರಣ ನಡೆಯುತ್ತಿಲ್ಲ. ಚೆಕ್‌ ಪೋಸ್ಟ್‌ನ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟು ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.