ಚೆನ್ನವೀರ ಶ್ರೀಗಳ ಪುಣ್ಯಾರಾಧನೆ

ಭಾನುವಾರ, ಮೇ 26, 2019
22 °C

ಚೆನ್ನವೀರ ಶ್ರೀಗಳ ಪುಣ್ಯಾರಾಧನೆ

Published:
Updated:

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಮೂಡಿ ಗ್ರಾಮದ ಶಿವಲಿಂಗೇಶ್ವರ ಮಠದಲ್ಲಿ ಲಿಂ.ಚನ್ನವೀರ ಶ್ರೀಗಳ ಪುಣ್ಯಾ ರಾಧನೆ ಈಚೆಗೆ ಜರುಗಿತು.ಪುಣ್ಯಾರಾಧನೆಯ ಅಂಗವಾಗಿ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆ ಯಿತು. ಶಿವಲಿಂಗೇಶ್ವರ ಮಠದ ಆವರಣ ದಿಂದ ಆರಂಭಗೊಂಡ ಮೆರವಣಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ಸಾಗಿತು.ಇದಕ್ಕೂ ಮುನ್ನ ಬೆಳಿಗ್ಗೆ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಪೂಜಾ ವಿಧಾನಗಳು ನೆರೆವೇರಿದವು. ಹಾಲಕೆರೆಯ ಜಗದ್ಗುರು ಸಂಗನಬಸವ ಶ್ರೀಗಳು, ಶಿವಮೊಗ್ಗದ ಬೆಕ್ಕಿನಕಲ್ಮಠದ ಜಗದ್ಗುರು ಮಲ್ಲಿಕಾ ರ್ಜುನ ಮುರುಘರಾಜೇಂದ್ರ ಶ್ರೀಗಳು, ಬಾಳೇಹೊಸೂರಿನ ದಿಂಗಾಲೇಶ್ವರ ಶ್ರೀಗಳು, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು, ಮೂಡಿಯ ಶಿವಲಿಂಗೇಶ್ವರ ಮಠದ ಸದಾಶಿವ ಶ್ರೀಗಳು, ಮರಕುಂಬಿಯ ಮಲ್ಲಿಕಾರ್ಜುನ ಶ್ರೀಗಳು, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳು, ಬನವಾಸಿಯ ನಾಗಭೂಷಣ ಶ್ರೀಗಳು, ತಿಪ್ಪಾಯಿಕೊಪ್ಪದ ವಿರುಪಾಕ್ಷ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.ಸೊರಬ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಮೀನಾಕ್ಷಮ್ಮ, ಜಿಲ್ಲಾ ಪಂಚಾ ಯಿತಿ ಮಾಜಿ ಸದಸ್ಯ ಸಿದ್ಧರಾಮಯ್ಯ, ಡಾ.ಭೋಜರಾಜ ಪಾಟೀಲ, ಡಾ.ಎಸ್.ಎಂ.ಎಲಿ ಇನ್ನೂ ಹಲವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನ ದಲ್ಲಿ ಮಹಾಪ್ರಸಾದ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry