ಭಾನುವಾರ, ಜನವರಿ 26, 2020
18 °C

ಚೆನ್ನೈ ಓಪನ್ ಟೆನಿಸ್: ರಾವೊನಿಕ್‌ಗೆ ಮಣಿದ ವಿಕ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕೆನಡಾದ ಮಿಲೋಸ್ ರಾವೊನಿಕ್ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಆದರೆ ಆತಿಥೇಯ ದೇಶದ ಸ್ಪರ್ಧಿಗಳು ಡಬಲ್ಸ್‌ನಲ್ಲಿ ನಿರಾಸೆ ಅನುಭವಿಸಿದರು.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾವೊನಿಕ್ 6-1, 6-4ರಲ್ಲಿ ರೊಮೇನಿಯಾದ ವಿಕ್ಟರ್ ಹಾನ್ಸೆಕು ಅವರನ್ನು ಮಣಿಸಿದರು. ಎರಡೂ ಸೆಟ್‌ಗಳಲ್ಲಿ ಕೆನಡಾದ ಆಟಗಾರನಿಗೆ ಪ್ರಬಲ ಸವಾಲು ಎದುರಾಲಿಲ್ಲ.ಮೋಹಿತ್-ರಾಮ ಕುಮಾರ್ ಜೋಡಿಗೆ ನಿರಾಸೆ: ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಮೋಹಿತ್ ಮಯೂರ್ ಜಯಪ್ರಕಾಶ್ ಹಾಗೂ ರಾಮ ಕುಮಾರ್ ರಾಮನಾಥನ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿತು.ಈ ಜೋಡಿಯನ್ನು 6-2, 6-1ರಲ್ಲಿ ಇಸ್ರೇಲ್‌ನ ಜೊನಾಥನ್ ಎರ್ಲಿಚ್-ಆ್ಯಂಡ್ ರಾಮ್ ಮಣಿಸಿತು. ಇನ್ನೊಂದು ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ಎನ್. ಜೀವನ್ ನಿರಾಸೆ ಕಂಡರು. ಇವರನ್ನು 7-5, 6-4ರಲ್ಲಿ ಅಮೆರಿಕದ ರಾಜೀವ್ ರಾಮ್ ಹಾಗೂ ಸ್ಕಾಟ್ ಲಿಪ್ಸ್ಕಿ ಸೋಲಿಸಿದರು. ಎರಡೂ ಸೆಟ್‌ಗಳಲ್ಲಿ ಭಾರತದ ಆಟಗಾರರು ಉತ್ತಮ ಪ್ರತಿರೋಧ ತೋರಿದರು.

ಪ್ರತಿಕ್ರಿಯಿಸಿ (+)