ನವದೆಹಲಿ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕ್ರಿಕೆಟ್ ಟೂರ್ನಿಯ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧದ ಮಂಗಳವಾರದ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆ ಹಾಕಿದೆ.

ಟಾಸ್ ಸೋತರೂ, ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಮಾತ್ರ ಗಳಿಸಿತು.

ಮೊದಲ ಎಸೆತದಲ್ಲಿಯೇ ಮುರಳಿ ವಿಜಯ್ ವಿಕೆಟ್ ಪಡೆದ ಡೆಲ್ಲಿ ಆರಂಭಿಕ ಮೇಲುಗೈ ಸಾಧಿಸಿತು. ಸುರೇಶ್ ರೈನಾ (17), ಎಸ್. ಬದರೀನಾಥ್ (15) ತಂಡಕ್ಕೆ ಕೊಂಚ ನೆರವಾದರು. ವೇಗವಾಗಿ ರನ್ ಗಳಿಸುವ ಆತುರದಲ್ಲಿ ನಾಲ್ಕು ಮಂದಿ ಬ್ಯಾಟ್ಸ್ಮನ್ಗಳು ರನ್ಔಟ್ ಬಲೆಗೆ ಬಿದ್ದರು.

ಡ್ವೇನ್ ಬ್ರಾವೊ (22, 31ಎಸೆತ, 1ಬೌಂಡರಿ) ಚೆನ್ನೈ ಪರ ಗರಿಷ್ಠ ಸ್ಕೋರರ್ ಎನಿಸಿದರು. ನಿಗದಿಯಾದ ಪ್ರಕಾರ 8 ಗಂಟೆಗೆ ಪಂದ್ಯ ನಡೆಯಬೇಕಿತ್ತು. ಮಳೆ ಬಂದ ಕಾರಣ ಕೊಂಚ ಹೊತ್ತು ತಡವಾಗಿ ಆರಂಭವಾಯಿತು.

ಇರ್ಫಾನ್ ಪಠಾಣ್ (25ಕ್ಕೆ1), ಉಮೇಶ್ ಯಾದವ್ (24ಕ್ಕೆ1) ಹಾಗೂ ಮಾರ್ಕೆಲ್ (19ಕ್ಕೆ2) ಎದುರಾಳಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಕಾರಣರಾದರು.

ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 110
ಫಾಫ್ ಡು ಪ್ಲೆಸ್ಸಿಸ್ ಸಿ ವಾನ್ ಡೆರ್ ಮೆರ್ವ್ ಬಿ ಮಾರ್ನ್ ಮಾರ್ಕೆಲ್ 15
ಮುರಳಿ ವಿಜಯ್ ರನ್ಔಟ್ (ಇರ್ಫಾನ್ ಪಠಾಣ್/ಜಯವರ್ಧನೆ) 00
ಸುರೇಶ್ ರೈನಾ ರನ್ಔಟ್ (ಯೋಗೇಶ್ ನಗರ್/ಪ್ರಗ್ಯಾನ್ ಓಜಾ) 17
ಎಸ್. ಬದರೀನಾಥ್ ರನ್ಔಟ್ (ಕೆವಿನ್ ಪೀಟರ್ಸನ್/ಪ್ರಗ್ಯಾನ್ ಓಜಾ) 15
ರವೀಂದ್ರ ಜಡೇಜ ಸಿ ಪ್ರಗ್ಯಾನ್ ಓಜಾ ಬಿ ಇರ್ಫಾನ್ ಪಠಾಣ್ 13
ಡ್ವೇನ್ ಬ್ರಾವೊ ಬಿ ಉಮೇಶ್ ಯಾದವ್ 22
ಮಹೇಂದ್ರ ಸಿಂಗ್ ದೋನಿ ಸಿ ಜಯವರ್ಧನೆ ಬಿ ಮಾರ್ನ್ ಮಾರ್ಕೆಲ್ 11
ಅಲ್ಬಿ ಮಾರ್ಕೆಲ್ ಔಟಾಗದೆ 02
ಆರ್. ಅಶ್ವಿನ್ ರನ್ಔಟ್ (ಸೆಹ್ವಾಗ್/ಓಜಾ) 08
ಶದಾಬ್ ಜಕಾತಿ ಔಟಾಗದೆ 01
ಇತರೆ: (ಬೈ-1, ಲೆಗ್ ಬೈ-1, ವೈಡ್-4) 06
ವಿಕೆಟ್ ಪತನ: 1-0 (ವಿಜಯ್; 0.1), 2-26 (ಪ್ಲೆಸ್ಸಿಸ್; 3.1), 3-43 (ರೈನಾ; 6.3), 4-64 (ಬದರೀನಾಥ್; 9.4), 5-66 (ಜಡೇಜ; 10.2), 6-89 (ದೋನಿ; 17.1), 7-100 (ಬ್ರಾವೊ; 18.4), 8-108 (ಅಶ್ವಿನ್; 19.3).
ಬೌಲಿಂಗ್: ಇರ್ಫಾನ್ ಪಠಾಣ್ 4-0-25-1, ಉಮೇಶ್ ಯಾದವ್ 3-0-24-1, ಮಾರ್ನ್ ಮಾರ್ಕೆಲ್ 4-0-19-2, ಕೆವಿನ್ ಪೀಟರ್ಸನ್ 2-0-16-0, ವಾನ್ ಡೆರ್ ಮೆರ್ವ್ 4-0-15-0, ಶಹ್ಬಾಜ್ ನದೀಮ್ 3-0-9-0.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.