ಗುರುವಾರ , ಜೂನ್ 24, 2021
28 °C

ಚೆಸ್‌: ಡ್ರಾ ಪಂದ್ಯದಲ್ಲಿ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಂಟಿ ಮನ್ಸಿಸಿಕ್‌, ರಷ್ಯಾ (ಪಿಟಿಐ): ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರು ಇಲ್ಲಿ  ನಡೆಯುತ್ತಿರುವ ಕ್ಯಾಂಡಿಡೇಟ್‌ ಚೆಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯಾದ ವೆಸೆಲಿನ್‌ ಟೊಪಲೋವ್‌ ಎದುರು ಡ್ರಾ ಮಾಡಿಕೊಂಡರು.ಕಪ್ಪು ಕಾಯಿಗಳಿಂದ ಆಡಿದ ಅವರು ಎದುರಾಳಿಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ರು. 54ನೇ ನಡೆಯ ಬಳಿಕ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಸಮ್ಮತಿ ಸೂಚಿಸಿದರು. ಹಾಗಾಗಿ ಪಾಯಿಂಟ್‌ ಹಂಚಿಕೊಳ್ಳ ಬೇಕಾಯಿತು.ಭಾರತದ ಆಟಗಾರನ ಬಳಿ ಈಗ ಒಟ್ಟು 1.5 ಪಾಯಿಂಟ್‌ಗಳಿವೆ. ಆನಂದ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಮೇನಿಯಾ ದ ಲೆವೋನ್‌ ಅರೋನಿಯನ್‌ ಎದುರು ಗೆಲುವು ಸಾಧಿಸಿದ್ದರು. ರಷ್ಯಾದ ವ್ಲಾಡಿಮಿರ್‌ ಕ್ರಾಮ್ನಿಕ್‌ ಹಾಗೂ ಪೀಟರ್‌ ಸ್ವಿಡ್ಲರ್‌  ಕೂಡ 1.5 ಪಾಯಿಂಟ್‌ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.