ಬೆಂಗಳೂರು: ಕರ್ನಾಟಕದ ಚೈತಾಲಿ ನರ್ಡೆ ಹಾಗೂ ಶಿಖಾ ಎನ್. ಸಿಂಗ್ ಜೋಡಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಈಚೆಗೆ ನಡೆದ ಎಐಟಿಎ ಟ್ಯಾಲೆಂಟ್ ಸರಣಿ ಕಿರಿಯರ ಟೆನಿಸ್ ಚಾಂಪಿಯನ್ಷಿಪ್ನ ಬಾಲಕಿಯರ ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕದ ಜೋಡಿ 4-2, 2-4, 10-6 ರಲ್ಲಿ ನಿಖಿತಾ ಪಿಂಟೊ (ಕರ್ನಾಟಕ) ಹಾಗೂ ಹರಿಯಾಣದ ಅಂಜೆಲಾ ರಾಮನ್ ವಿರುದ್ಧ ಗೆಲುವು ಸಾಧಿಸಿದೆ. ಚೈತಾಲಿ ಹಾಗೂ ಶಿಖಾ ಮೊದಲ ಸೆಟ್ನಲ್ಲಿ 4-2 ರಲ್ಲಿ ಮುನ್ನಡೆ ಸಾಧಿಸಿದ್ದರು. ಎರಡನೇ ಸುತ್ತಿನಲ್ಲಿ ಪ್ರಬಲ ಪೈಪೋಟಿ ನಡೆಸಿದ ಎದುರಾಳಿ ಜೋಡಿ 4-2ರಲ್ಲಿ ಸೆಟ್ ತಮ್ಮದಾಗಿಸಿಕೊಂಡು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್ನಲ್ಲಿ ಕರ್ನಾಟಕದ ಜೋಡಿ 10-6ರಲ್ಲಿ (ಸೂಪರ್ ಟೈಬ್ರೇಕರ್) ಸೆಟ್ ಅನ್ನು ಜಯಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಅಂಜೆಲಾಗೆ ಸಿಂಗಲ್ಸ್: ಡಬಲ್ಸ್ನಲ್ಲಿ ಸೋಲು ಕಂಡ ಅಂಜೆಲಾ ರಾಮನ್ 18 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ 6-3, 6-3ರ ನೇರ ಸೆಟ್ಗಳಿಂದ ಕರ್ನಾಟಕದ ನಿಖಿತಾ ಪಿಂಟೊ ವಿರುದ್ಧ ಗೆದ್ದು ಪ್ರಶಸ್ತಿ ಎತ್ತಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.