ಮಂಗಳವಾರ, ಜೂನ್ 15, 2021
27 °C

ಛಾಯಾಚಿತ್ರದ ಮೂಲಕ ಮತದಾನದ ಅರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಹೀರಾತು ಹಾಗೂ ಪ್ರಚಾರ ನಿರ್ದೇಶನಾಲಯವು ಬಿಬಿ­ಎಂಪಿ ಸಹಯೋಗದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಗರದ  ಮಹಾತ್ಮ ಗಾಂಧಿ ರಸ್ತೆ­ಯ­ಲ್ಲಿರುವ ರಂಗೋಲಿ ಮೆಟ್ರೊ ಕಲಾ ಕೇಂದ್ರದ ಛಾಯಾ ಗ್ಯಾಲರಿಯಲ್ಲಿ  ಛಾಯಾ­ಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.ಬಿಬಿಎಂಪಿ ವಿಶೇಷ ಆಯುಕ್ತ  (ಚುನಾವಣೆ) ಕೆ.ಆರ್.ನಿರಂಜನ್‌ ಅವರು ಭಾನುವಾರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ,  ‘ಪ್ರದ­ರ್ಶ­ನ­ದಲ್ಲಿ­ರುವ ಛಾಯಾ­ಚಿತ್ರಗಳು ಯುವಕರನ್ನು ಆಕ­ರ್ಷಿಸುವ ರೀತಿಯ­ಲ್ಲಿವೆ. ಇದ­ರಿಂ­ದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವ­ಹಿಸಲಿದ್ದಾರೆ ಎಂದು ಹೇಳಿದರು.ಜಾಹೀರಾತು ಹಾಗೂ ಪ್ರಚಾರ ನಿರ್ದೇಶನಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಪಿ.ಜಿ.ಪಾಟೀಲ್‌ ಮಾತ ನಾಡಿ, ಪ್ರದರ್ಶನದ ಮೊದಲ ದಿನವೇ  ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.

ಮಾರ್ಚ್‌ 26ರವರೆಗೆ ಪ್ರದರ್ಶನ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.