ಜಂಜಿಬಾರ್ ಜಲ ದುರಂತ: 38 ಮಂದಿ ಸಾವು

ಮಂಗಳವಾರ, ಜೂಲೈ 23, 2019
20 °C

ಜಂಜಿಬಾರ್ ಜಲ ದುರಂತ: 38 ಮಂದಿ ಸಾವು

Published:
Updated:

ಜಂಜಿಬಾರ್ (ಎಎಫ್‌ಪಿ):  ಹಿಂದೂ ಮಹಾಸಾಗರದ ಜಂಜಿಬಾರ್ ದ್ವೀಪದ ಬಳಿ ಬುಧವಾರ ಪುಟ್ಟ ಹಡಗು ನೀರಿನಲ್ಲಿ ಮುಳುಗಿದ್ದು, 38 ಜನ ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ.ಈ ಹಡಗಿನಲ್ಲಿ 290ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬುಧವಾರ ಮಧ್ಯಾಹ್ನ ತಾಂಜಾನಿಯಾದ ದರೆಸ್ ಸಲಾಂ ನಗರದ ಕರಾವಳಿಯಿಂದ ಪ್ರಯಾಣ ಆರಂಭಿಸಿತ್ತು.ಇಬ್ಬರು ಯುರೋಪಿಯನ್ನರು ಸೇರಿದಂತೆ 140 ಜನರನ್ನು ಪರಿಹಾರ ಕಾರ್ಯಕರ್ತರು ರಕ್ಷಿಸಿದ್ದಾರೆ. ಇನ್ನುಳಿದ  100 ಕ್ಕೂ ಹೆಚ್ಚು  ಮಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry