ಮೆಲ್ಬರ್ನ್ (ಐಎಎನ್ಎಸ್): ಸ್ವಿಟ್ಜರ್ ಲೆಂಡ್ನ ಮಾರ್ಟಿನಾ ಹಿಂಗಿಸ್ ಅವರು ಶನಿವಾರ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕಪಟ್ಟಿಯ ಡಬಲ್ಸ್ ವಿಭಾಗದ ವೈಯಕ್ತಿಕ ವಿಶ್ವ ರ್ಯಾಂಕಿಂಗ್ ನಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

15 ವರ್ಷಗಳ ಬಳಿಕ ಮತ್ತೆ ಅಗ್ರಪಟ್ಟಕ್ಕೇರಿರುವ ಮಾರ್ಟಿನಾ ಅವರು ತಮ್ಮ ಡಬಲ್ಸ್ ವಿಭಾಗದ ಜೊತೆಗಾರ್ತಿ ಭಾರತದ ಸಾನಿಯಾ ಮಿರ್ಜಾ ಅವ ರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿ ರುವುದು ವಿಶೇಷ. 2015ರಲ್ಲಿ ಜತೆ ಗೂಡಿ ಆಡಲು ಶುರುಮಾಡಿದ ಬಳಿಕ ಹಿಂಗಿಸ್ ಮತ್ತು ಸಾನಿಯಾ ಸತತ 30 ಪಂದ್ಯಗಳಲ್ಲಿ ಗೆದ್ದು ವಿಶ್ವ ದಾಖಲೆ ಬರೆದಿದ್ದಾರೆ.

ಈ ಋತುವಿನ ಮೊದಲ ಗ್ರ್ಯಾಂಡ್ ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್ ಸೋಮವಾರದಿಂದ ಆರಂಭ ವಾಗಲಿದೆ. ಟೂರ್ನಿಗೂ ಮುನ್ನ ಮಾರ್ಟಿನಾ ಅಗ್ರಸ್ಥಾನ ಗಳಿಸಿರುವುದು ಇಬ್ಬರೂ ಆಟ ಗಾರ್ತಿಯರ ಮನೋಬಲ ಹೆಚ್ಚಿಸಿದೆ. ಮಾರ್ಟಿನಾ ಈ ಮೊದಲು 1998ರ ಜೂನ್ನಿಂದ 2000ದ ಮಾರ್ಚ್ ಅವಧಿಯಲ್ಲಿ ಒಟ್ಟು 35 ವಾರ ಗಳ ಕಾಲ ಡಬಲ್ಸ್ ವಿಭಾಗದ ವೈಯಕ್ತಿಕ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಗಳಿಸಿದ್ದರು.

‘ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಗಳಿಸಿದ್ದು ಹೆಮ್ಮೆಯ ಸಂಗತಿ. ನನ್ನ ಕನಸು ನನಸಾದ ಘಳಿಗೆ ಇದು. ಈ ಕ್ಷಣಕ್ಕಾಗಿ ನಾನು 15 ವರ್ಷ ಕಾಯ ಬೇಕಾಯಿತು. ಚಾರ್ಲ್ಸ್ಟನ್ ಓಪನ್ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ಸಾನಿಯಾ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಗಳಿಸಿದ್ದರು. ಆಗ ಅವರಿಗಿಂತ ಹೆಚ್ಚು ಖುಷಿ ಪಟ್ಟವಳು ನಾನು’ ಎಂದು ಹಿಂಗಿಸ್ ಪ್ರತಿಕ್ರಿಯಿಸಿದ್ದಾರೆ.

‘15 ವರ್ಷಗಳ ಬಳಿಕ ಹಿಂಗಿಸ್ ಅವರು ಮತ್ತೆ ಅಗ್ರಸ್ಥಾನ ಗಳಿಸಿದ್ದು ನನ ಗಂತೂ ತುಂಬಾ ಖುಷಿ ನೀಡಿದೆ’ ಎಂದು ಸಾನಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.