ಸೋಮವಾರ, ಏಪ್ರಿಲ್ 19, 2021
32 °C

ಜಗನ್‌ಗೆ ಐಟಿ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್ ಸಂಸದ ಜಗನ್ ಮೋಹನ ರೆಡ್ಡಿಗೆ  ಆದಾಯ ತೆರಿಗೆ ಇಲಾಖೆ ಮಂಗಳವಾರ ಕಾರಣ ಕೇಳಿ ನೋಟಿಸ್ ನೀಡಿದೆ. ಜಗನ್ ಮಾಲೀಕತ್ವದ ‘ಜಗತಿ ಪ್ರಕಾಶನ’ (ಜೆಪಿಪಿಎಲ್) ಸಂಸ್ಥೆಯು ಸಲ್ಲಿಸಿದ ಆದಾಯ ದಾಖಲೆ ಪತ್ರಗಳಲ್ಲಿ ‘122 ಕೋಟಿ ರೂಪಾಯಿಗಳಷ್ಟು ಮೊತ್ತ ತಾಳೆಯಾಗುತ್ತಿಲ್ಲ’ ಎಂಬುದು ನೋಟಿಸ್ ನೀಡಲು ಕಾರಣವಾಗಿದೆ.ಜಗನ್ ಮಾಲೀಕತ್ವದ ಜೆಪಿಪಿಎಲ್ ಸಂಸ್ಥೆಯು ತೆಲುಗು ‘ಸಾಕ್ಷಿ’ ಪತ್ರಿಕೆ ಮತ್ತು ಟಿವಿ ಚಾನೆಲ್ ನಡೆಸುತ್ತಿದೆ. ಪ್ರಸಕ್ತ ವರ್ಷದಲ್ಲಿ 500 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿರುವ ಜಗನ್ ಸೆಪ್ಟೆಂಬರ್‌ನಲ್ಲಿ  84 ಕೋಟಿ ಮೊತ್ತದ ಮುಂಗಡ ತೆರಿಗೆ ಪಾವತಿಸಿದ್ದರು. ಆದರೆ ಈ ದಾಖಲೆ ಪತ್ರಗಳು ಸರಿಹೊಂದುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ದಿವಂಗತ ವೈಎಸ್‌ಆರ್ ಪುತ್ರ ಜಗನ್‌ಮೋಹನ್ ರೆಡ್ಡಿ ಕಳೆದ ವರ್ಷ ಕಾಂಗ್ರೆಸ್‌ನಿಂದ ಹೊರ ಬಂದು ‘ವೈಎಸ್‌ಆರ್ ಕಾಂಗ್ರೆಸ್’ ಹೆಸರಿನ ಹೊಸ ಪಕ್ಷ ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.