ಭಾನುವಾರ, ಮೇ 22, 2022
27 °C

ಜಗನ್: ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ಕೋರಿದ ಸಿಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಅಕ್ರಮ ಆಸ್ತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್‌ಮೋಹನ್ ರೆಡ್ಡಿ (ಜಗನ್) ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜೂನ್ 25ರವರೆಗೆ ವಿಸ್ತರಿಸಲಾಗಿದೆ.ಈ ಮಧ್ಯೆ ಸಿಬಿಐ, ಜಗನ್ ಮೇಲೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಕೋರ್ಟ್‌ನ ಅನುಮತಿ ಕೋರಿದೆ.

ಆಂಧ್ರಪ್ರದೇಶದ 18 ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಉಪಚುನಾವಣೆ ನಡೆಯಲಿದ್ದು, ಚುನಾವಣೆಯ ಹಿಂದಿನ ದಿನ ಕೋರ್ಟ್ ಈ ಆದೇಶ ನೀಡಿದೆ.ಈ ಉಪ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಜಗನ್ ಬಂಧನದ ವಿಚಾರವನ್ನು ಮುಂದಿಟ್ಟುಕೊಂಡು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ಭಾಷಣ ಮಾಡುತ್ತಿದ್ದರು.ಸಿಬಿಐ ಅರ್ಜಿ: ಏತನ್ಮಧ್ಯೆ ಸಿಬಿಐ ಅಧಿಕಾರಿಗಳು ಜಗನ್ ಹಾಗೂ ಅವರ ಆರ್ಥಿಕ ಸಲಹೆಗಾರ ವಿ. ವಿಜಯಸಾಯಿ ರೆಡ್ಡಿ ಅವರನ್ನು ಮಂಪರು ಪರೀಕ್ಷೆ ಹಾಗೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.ಅಕ್ರಮ ವ್ಯವಹಾರಗಳಿಂದ ಜಗನ್‌ಗೆ ಹೆಚ್ಚಿನ ಲಾಭವಾಗಿದೆ. ಆದರೆ, ಈ ಪ್ರಕರಣಗಳಲ್ಲಿ ವಿಜಯಸಾಯಿ ಸೂತ್ರಧಾರರಾಗಿದ್ದು, ಜಗನ್‌ಗೆ ಸಲಹೆ ನೀಡುತ್ತಿದ್ದುದು ವಿಚಾರಣೆಯ ಸಮಯದಲ್ಲಿ ಸಾಬೀತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.