ಬುಧವಾರ, ಮೇ 25, 2022
24 °C

ಜಡೇಜಾ-ಡೆನ್‌ಬ್ಯಾಚ್ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯ ಮುಗಿಸಿ ಭಾರತ ಹಾಗೂ ಇಂಗ್ಲೆಂಡ್ ತಂಡದ ಆಟಗಾರರು ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಾಗ ರವೀಂದ್ರ ಜಡೇಜಾ ಹಾಗೂ ಜೇಡ್ ಡೆನ್‌ಬ್ಯಾಚ್ ಜಟಾಪಟಿ ನಡೆಸಿದರು.ಇದು ನಡೆದಿದ್ದು ಇಂಗ್ಲೆಂಡ್ ಡ್ರೆಸ್ಸಿಂಗ್ ಕೋಣೆಯ ದ್ವಾರದಲ್ಲಿ. 0-5ರಲ್ಲಿ ಸರಣಿ ಸೋತ ನಿರಾಶೆಯಲ್ಲಿ ಇಂಗ್ಲೆಂಡ್ ಆಟಗಾರರಾದ ಇಯಾನ್ ಬೆಲ್ ಹಾಗೂ ಡೆನ್‌ಬ್ಯಾಚ್ ಆಲ್‌ರೌಂಡರ್ ಜಡೇಜಾ ಅವರನ್ನು ಕೆಣಕಿದರು.ತಮ್ಮನ್ನು ಕೆಣಕಿದ ಈ ಆಟಗಾರರಿಗೆ ಏನನ್ನೋ ಹೇಳಲು ಜಡೇಜಾ ಇಂಗ್ಲೆಂಡ್ ಡ್ರೆಸ್ಸಿಂಗ್ ಕೋಣೆಯತ್ತ ತೆರಳಿದರು. ಆಗ ಅವರ ಮೇಲೆ ಕೈ ಮಾಡಲು ಡೆನ್‌ಬ್ಯಾಚ್ ಮುಂದಾದರು. ಆದರೆ ಮಧ್ಯ ಪ್ರವೇಶಿಸಿದ ಇತರ ಆಟಗಾರರು ಜಡೇಜಾ ಅವರನ್ನು ಬದಿಗೆ ತಳ್ಳಿದರು. ತಕ್ಷಣವೇ ಜಡೇಜಾ ಕೂಡ ಅಲ್ಲಿಂದ ಕಾಲ್ಕಿತ್ತರು. ವೇಗಿ ಡೆನ್‌ಬ್ಯಾಚ್ ಈ ಪಂದ್ಯದಲ್ಲಿ ಆಡಲಿಲ್ಲ.ಆದರೆ ಈ ಘಟನೆ ತಮ್ಮ ಅರಿವಿಗೆ ಬಂದಿಲ್ಲ ಎಂದು ನಾಯಕರಾದ ದೋನಿ ಹಾಗೂ ಅಲಸ್ಟರ್ ಕುಕ್ ನುಣುಚಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.