ಜನತಂತ್ರ ವ್ಯವಸ್ಥೆಗೆ ಅಪಚಾರ

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಜನತಂತ್ರ ವ್ಯವಸ್ಥೆಗೆ ಅಪಚಾರ

Published:
Updated:

ಮುಖ್ಯಮಂತ್ರಿ ಸ್ವಯಂಘೋಷಿತ ಜಗದ್ಗುರು ಮಠಾಧೀಶರ ಕಾಲಿಗೆ ಬೀಳುವುದು ಎಷ್ಟು ಸಮಂಜಸ (ಪ್ರ.ವಾ. ಆ  30)? ಬೀಳಿಸಿಕೊಳ್ಳುವುದು ಎಷ್ಟು ಸಮಂಜಸ! ದೇಶದ ಯಾವುದೇ ರಾಜ್ಯಗಳಲ್ಲಿ ಕಾಣಸಿಗದ ಈ ಅನಿಷ್ಠ ಪ್ರಕ್ರಿಯೆ ನಮ್ಮಲ್ಲಿ ಕಾಣುತ್ತಿರುವುದು ನೋವು-ನಾಚಿಕೆ ತರುತ್ತಿದೆ. ಕ್ರಾಂತಿ ಪುರುಷರು ವಿಚಾರವಾದಿಗಳು ಜನಿಸಿರುವ ಇಲ್ಲಿ ಮೌಢ್ಯತೆ, ಅಜ್ಞಾನ ತಾಂಡವವಾಡುತ್ತಿದೆ. ತಾನೊಬ್ಬ ಜನರ ಪ್ರತಿನಿಧಿಯಾಗಿದ್ದು, ಸಂವಿಧಾನಕ್ಕೆ ಬದ್ಧನಾಗಿರಬೇಕೆಂಬ ಕನಿಷ್ಠ ಜ್ಞಾನ ಕೂಡ ಇಟ್ಟುಕೊಳ್ಳದೆ ವರ್ತಿಸುವುದು ಎಷ್ಟು ಸರಿ?ಸಂವಿಧಾನದತ್ತ ವೈಚಾರಿಕತೆ, ವೈಜ್ಞಾನಿಕತೆ ಬಿತ್ತಬೇಕಾದವರೇ ಮೌಢ್ಯದ ದಾಸರಾದರೆ ಹೇಗೆ?  ಅಧಿಕಾರ ಮುಗಿದ ಮೇಲೆ ಅವರು ಹೇಗಾದರೂ ವರ್ತಿಸಲಿ ಅದರ ಬಗ್ಗೆ ತಕರಾರಿಲ್ಲ.ಅಧಿಕಾರದಲ್ಲಿರುವಾಗ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕೆಂಬುದು ಸಂವಿಧಾನಬದ್ಧ ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವವರ ತಕರಾರು. ಸಂವಿಧಾನವೇ ದೇವರು! ಮಠಾಧೀಶರಲ್ಲ!

 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry