ಮಂಗಳೂರು: `ಜನಪ್ರತಿನಿಧಿಗಳಾಗಿ ಆಯ್ಕೆಯಾದವರಿಂದ ಜನ ಬಹಳ ಸೇವೆಗಳನ್ನು ನಿರೀಕ್ಷಿಸುತ್ತಿರುತ್ತಾರೆ. ಒಂದೊಂದು ಕೆಲಸವನ್ನೂ ಅವರು ಗಮನಿಸುತ್ತಾರೆ. ದುಡ್ಡು ಗಳಿಸುವುದಕ್ಕಷ್ಟೇ ಆಯ್ಕೆಯಾಗಿದ್ದೇ ಆದರೆ ಜನ ಮುಂದಿನ ಬಾರಿ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು' ಎಂದು ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯಿದ್ದೀನ್ ಹೇಳಿದರು.

ಇಲ್ಲಿನ ಪುರಭವನದಲ್ಲಿ ಗುರುವಾರ ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ನೂತನ ಜನಪ್ರತಿನಿಧಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕರು, ಪಾಲಿಕೆ ಮತ್ತು ಇತರ ಸ್ಥಳೀಯ ಸಂಸ್ಥೆಗಳ ನೂತನ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

`ಸತ್ಯ ಮತ್ತು ನ್ಯಾಯದ ತಳಹದಿಯಲ್ಲಿ ಇಸ್ಲಾಂ ಧರ್ಮ ಸ್ಥಾಪನೆಯಾಗಿದೆ. ಈ ಧರ್ಮಕ್ಕೆ ಸೇರಿದ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಈ ಮೂಲ ತತ್ವವನ್ನು ಮರೆಯಬಾರದು. ರಾಜಕಾರಣ ಎಂಬುದು ಯಾವುದೇ ಕಾರಣಕ್ಕೂ ವ್ಯಾಪಾರವಾಗದಂತೆ ಎಚ್ಚರ ವಹಿಸಬೇಕು. ಸಾಧ್ಯವಿದ್ದ ಮಟ್ಟಿಗೆ ಜನಸೇವೆಯನ್ನು ಮಾಡುತ್ತಲೇ ಜನರ ಕಷ್ಟ, ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಕಣಚೂರು ಮೋನು ಮಾತನಾಡಿ, ಬ್ಯಾರಿ ಜನಾಂಗದವರು ಕಷ್ಟಪಟ್ಟು ದುಡಿದು ಮೇಲೆ ಬಂದವರು, ಅವರು `ಬ್ಯಾರಿ' ಎಂದು ಹೇಳಿಸಿಕೊಳ್ಳಲು ಹೆಮ್ಮೆಪಡುವವರು. ಮುಸ್ಲಿಂ ಸಮುದಾಯದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಈ ಸಮುದಾಯ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಸಾಧ್ಯ, ಜನಪ್ರತಿನಿಧಿಗಳು ಸ್ವಾರ್ಥ ಬಿಟ್ಟು ಜನರಿಗಾಗಿ ದುಡಿಯಬೇಕು ಎಂದರು.

ವೈವಿಧ್ಯದಿಂದಲೇ ಚೆಂದ:
ಸನ್ಮಾನ ಸ್ವೀಕರಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಬಹುಭಾಷೆ, ಬಹುಧರ್ಮ, ಬಹು ಸಂಸ್ಕೃತಿಯ ನೆಲ ನಮ್ಮದು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಸೊಬಗಿನಂತೆ, ಆಡಳಿತದಲ್ಲಿ ಸಹ ವಿವಿಧ ಜಾತಿ, ಧರ್ಮಗಳ ಜನರು ಬಂದಾಗ ಅಲ್ಲೊಂದು ವೈವಿಧ್ಯಮಯ ಲೋಕ ಸೃಷ್ಟಿಯಾಗುವುದು ಸಾಧ್ಯವಾಗುತ್ತದೆ. ಧಾರ್ಮಿಕ ಸಹಿಷ್ಣುತೆ, ಸೌಹಾರ್ದ ಇದರಿಂದ ಹೆಚ್ಚುವಂತಾಗುತ್ತದೆ ಎಂದರು.

ಮಂಗಳೂರು ಉತ್ತರ ಶಾಸಕ ಬಿ.ಎ.ಮೊಯ್ದೀನ್ ಬಾವ, ಮಂಗಳೂರು ಮಹಾನಗರ ಪಾಲಿಕೆಯ ಮುಸ್ಲಿಂ ಸಮುದಾಯಕ್ಕೆ ಸೇರಿದ 9 ಮಂದಿ ಸದಸ್ಯರು, ಉಳ್ಳಾಲ ಪುರಸಭೆಯ 14 ಮಂದಿ ಸದಸ್ಯರ ಸಹಿತ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಹೆಚ್ಚಿನ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ಸನ್ಮಾನ ಸ್ವೀಕರಿಸಿದರು. ಹೀಗಾಗಿ ವೇದಿಕೆ ಹತ್ತಾರು ಜನಪ್ರತಿನಿಧಿಗಳಿಂದ ತುಂಬಿ ಹೋಗಿತ್ತು.

ಬ್ಯಾರಿ ಪರಿಷತ್ನ ಅಧ್ಯಕ್ಷ ಅಬ್ದುಲ್ ಅಜೀಜ್ ಬೈಕಂಪಾಡಿ, ಕಾರ್ಯದರ್ಶಿ ಅಬ್ದುಲ್ ಹಮೀದ್ ಕಿನ್ಯ, ಕೇಂದ್ರ ಜುಮಾ ಮಸೀದಿಯ ಎಸ್.ಎಂ.ರಶೀದ್, ಅಬ್ದುಲ್ ಅಜೀಜ್ ಹಕ್ ಸಹಿತ ಹಲವರು ಇದ್ದರು.

ಬಳಿಕ ನಗರದ ಬ್ಯಾರಿ ಕಲಾರಂಗದ ಕಲಾವಿದರಿಂದ ನಡೆದ `ಸಂಜೆಯ ರಾಗ' (ಅಸರ್ರೊ ಎಸೆ) ಬ್ಯಾರಿ ಜನಪದ, ಹಳೆ-ಹೊಸ ಹಾಡುಗಳು, ನಗೆಹನಿ ಸಹಿತ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.

`ಬ್ಯಾರಿ' ಸಮುದಾಯದ 36 ಜನ ಪ್ರತಿನಿಧಿಗಳು
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 34 ಮಂದಿ ಆಯ್ಕೆಯಾಗಿದ್ದಾರೆ. ಹೀಗಾಗಿ ನಾವು `ಬ್ಯಾರಿ'ಗಳು ಎಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು ಎಂಬ ಕಣಚೂರು ಮೋನು ಅವರ ಮಾತಿಗೆ ವೇದಿಕೆ ಸಾಕ್ಷಿ ಹೇಳುತ್ತಿತ್ತು.

ಬ್ಯಾರಿ ಸಂಸ್ಕೃತಿಯನ್ನು ಬಿಂಬಿಸುವಂತಹ ಹಲವು ವೈವಿಧ್ಯಗಳು ಗಮನ ಸೆಳೆದವು. ಅತಿಥಿಗಳಿಗೆ ಪನ್ನೀರು ಚಿಮುಕಿಸಿ, ಸುಗಂಧ ಪೂಸಿ, ಬ್ಯಾಡ್ಜ್ ತೊಡಿಸಿ ಸ್ವಾಗತಿಸಿದ ರೀತಿ ವಿಶಿಷ್ಟವಾಗಿತ್ತು. ಹಲ್ವಾ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.