ಕೂಡ್ಲಿಗಿ: ಕಂದಾಚಾರಗಳಿಗೆ ಕೊನೆ ಹಾಡಲು ಯತ್ನಿಸಿದ್ದು, ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಡಿ ವಾಣ ಹಾಕುವಂತೆ ಮಾಡಿದ್ದು.. ಇವೇ ಮೊದಲಾದ ಕಾರಣಗಳ ಮೂಲಕ ಕೂಡ್ಲಿಗಿ ವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಜನಾನುರಾಗಿ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಇದೀಗ ಅವರ ವರ್ಗಾವಣೆ ಸುದ್ದಿ ಯಿಂದಾಗಿ ಸ್ಥಳೀಯರು ಸ್ವಯಂಪ್ರೇರಿತ ವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೂಡ್ಲಿಗಿ ಉಪ ವಿಭಾಗದ ಸಂಡೂರು ಮತ್ತು ಕೂಡ್ಲಿಗಿ ತಾಲ್ಲೂಕಿನ ಅನೇಕ ಗೊಲ್ಲರಹಟ್ಟಿಯಲ್ಲಿ ಮೈನರೆತ ಬಾಲಕಿಯರನ್ನು, ಮಾಸಿಕ ಮುಟ್ಟಾದವ ರನ್ನು, ಹಸುಗೂಸುಗಳೊಂದಿಗೆ ಬಾಣಂತಿ ಯರನ್ನು ಹಟ್ಟಿಗಳಿಂದ ಹೊರ ಕಳಿಸ ಲಾಗುತ್ತಿತ್ತು.

ಇಂತಹದೇ ಕಂದಾಚಾರ ದಿಂದ ಸಂಡೂರು ತಾಲ್ಲೂಕಿನ ವಡೇರಹಳ್ಳಿ ಗೊಲ್ಲರಹಟ್ಟಿಯಲ್ಲಿ ನವ ಜಾತ ಶಿಶುವೊಂದಕ್ಕೆ ಸೂಜಿಯಿಂದ ಮೈಮೇಲೆ ಬರೆ ಎಳೆದಿದ್ದ ವಿಷಯ ಗಮನಕ್ಕೆ ಬಂದಿದ್ದೇ ತಡ ಅನುಪಮಾ ಶೆಣೈ ಶಿಶು ಅಭಿವೃದ್ಧಿ ಅಧಿಕಾರಿ ಯೊಂದಿಗೆ ಸ್ಥಳಕ್ಕೆ ದಾವಿಸಿದ್ದರು. ಪೋಷಕರ ಮನವೊಲಿಸಿ, ತಾಯಿ ಮತ್ತು ಮಗುವನ್ನು ಮನೆಗೆ ಕಳುಹಿಸಿ ನಂತರ ಹತ್ತಿರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು.

ಇದಾದ ನಂತರ ಅನೇಕ ಗೊಲ್ಲರಹಟ್ಟಿಗಳಿಗೆ ತೆರಳಿದ ಅವರು ಅಲ್ಲಿ ಬಾಣಂತಿಯರು, ಮೈನೆರೆದ ಬಾಲಕಿಯ ರನ್ನು ಹೊರಗಿಡುವುದರಿಂದ ಆಗುವ ತೊಂದರೆಗಳು ಮತ್ತು ಅನಾರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದರು. ಈ ಮೂಲಕ ಈ ಭಾಗದಲ್ಲಿ ಮನೆ ಮಾತಾದರು.

ಸ್ವಾಮಿಹಳ್ಳಿಯಲ್ಲಿ ದೀಪಾವಳಿ ಯಂದೇ ಮದ್ಯ ವ್ಯಸನಿ ಯೊಬ್ಬ ಮದ್ಯ ಸೇವೆನೆ ಮಾಡಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದನ್ನು ಕಂಡ ಅವರು ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮರಾಟಕ್ಕೆ ತಡೆ ಹಾಕಲೇಬೇಕು ಎಂದು ನಿರ್ಧರಿಸಿದರು.

ಇದಕ್ಕಾಗಿ ಆಂದೋಲನ ವನ್ನೇ ನಡೆಸಿ ದರು. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟ ನಡೆಯುವು ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡ ಲಾರಂಬಿಸಿದರು. ಮತ್ತೆ ಕೆಲವರು ಮದ್ಯ ಮಾರಾಟ ತಡೆಗೆ ಕೋರಿ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾರಂಭಿಸಿದರು. ಈಗಲೂ ಅದು ಮುಂದುವರಿದಿದೆ.

ತೀರ ಹಿಂದುಳಿದ ಈ ಭಾಗದಲ್ಲಿ ಸಮಾಜದ ಪರವಾಗಿ ಕೆಲಸ ಮಾಡುವ ಅಧಿಕಾರಿಯ ಅವಶ್ಯವಿದೆ. ಅದ್ದರಿಂದ ಅವರನ್ನು ಇಲ್ಲಿಯೇ ಮುಂದುವರಿಸಬೇಕು.
-ಎಚ್.ಎಂ. ಸಚಿನ್ಕುಮಾರ್, ಕೂಡ್ಲಿಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.