ಭಾನುವಾರ, ಏಪ್ರಿಲ್ 18, 2021
33 °C

ಜಪಾನ್ ಮತ್ತೆ ಭೂಕಂಪ. ವಿದ್ಯುತ್ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

  ಟೋಕಿಯೊ, (ಎಎಫ್ ಪಿ): ಕಳೆದ ತಿಂಗಳಲ್ಲಿ ನಡೆದ ಭಾರಿ ಭೂಕಂಪದಿಂದ ತತ್ತರಿಸಿದ್ದ  ಜಪಾನ್ ನಲ್ಲಿ ಅದರ ಹಿಂದೆಯೇ ಲಘು ಭೂಕಂಪಗಳು ನಡೆಯುತ್ತಿದ್ದು ಶುಕ್ರವಾರ ನಸುಕಿನಲ್ಲಿ ಮತ್ತೆ ಭೂಮಿ ಕಂಪಿಸಿದಾಗ ಇಬ್ಬರು ಮೃತಪಟ್ಟಿದ್ದಾರೆ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತುರ್ತು ಸೇವಾ ಘಟಕದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಇಲ್ಲಿ ತಿಳಿಸಿದ್ದಾರೆ.

 ಕಳೆದ ತಿಂಗಳು ಮಾರ್ಚ್ 11 ರಂದು ಭೂಕಂಪ ನಡೆದು, ರಕ್ಕಸ ಸುನಾಮಿಗಳು ಉಂಟಾಗಿ ಅಪಾರ ಜೀವ ಹಾಗೂ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿತ್ತು. ಅಂದಿನ ಭೂಕಂಪದ ಪ್ರಮಾಣ ರಿಕ್ಷರ್ ಮಾಪಕದಲ್ಲಿ 9 ರಷ್ಟಿತ್ತು. ಈಗ ಶುಕ್ರವಾರ ನಡೆದ ಭೂಕಂಪದ ಪ್ರಮಾಣ 7.1 ರಷ್ಟಿದೆ.

ಶುಕ್ರವಾರದ ಭೂಕಂಪದಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡು 3.6 ಮಿಲಿಯನ್ ಮನೆಗಳಲ್ಲಿ ವಿದ್ಯುತ್  ಇಲ್ಲದಂತಾಗಿದೆ. ವಿದ್ಯುತ್ ಸ್ಥಗಿತಗೊಂಡು ಕೃತಕ ಉಸಿರಾಟದ ಯಂತ್ರ ನಿಂತು  ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ 79ರ ವೃದ್ಧನೊಬ್ಬ ಮೃತಪಟ್ಟಿದ್ದಾನೆಂದು ವರದಿಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.