ಶುಕ್ರವಾರ, ಮೇ 14, 2021
31 °C

ಜರ್ದಾರಿ ಜತೆಗಿನ ಮಾತುಕತೆ ತೃಪ್ತಿದಾಯಕ - ಮನಮೋಹನಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಒಂದು ದಿನದ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಪ್ರಧಾನಿ ಮನಮೋಹನಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.



ಮಾತುಕತೆಯು ತಮಗೆ ತೃಪ್ತಿ ತಂದಿದೆ ಎಂದು ಮನಮೋಹನಸಿಂಗ್ ಪ್ರತಿಕ್ರಿಯಸಿದ್ದು, ಪಾಕ್‌ಗೆ ಆಗಮಿಸುವಂತೆ ಜರ್ದಾರಿ ನೀಡಿದ ಆಹ್ವಾನವನ್ನು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.



ತಮ್ಮ 30 ನಿಮಿಷಗಳ ಮಾತುಕತೆಯು ಅತ್ಯಂತ ಫಲಪ್ರದವಾಗಿತ್ತು ಎಂದು ಜರ್ದಾರಿ ಅವರೂ ಪ್ರತಿಕ್ರಿಯಿಸಿದ್ದೂ ತಾವು ಪ್ರಧಾನಿ ಸಿಂಗ್ ಅವರನ್ನು ಆದಷ್ಟು ಬೇಗ ಪಾಕ್ ನೆಲದಲ್ಲಿ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.



 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.