ಶುಕ್ರವಾರ, ಫೆಬ್ರವರಿ 26, 2021
30 °C
ದೇವನಹಳ್ಳಿ: ಕೆರೆಗಳಿಗೆ ಮರುಜೀವ ನೀಡಲು ಸಂಕಲ್ಪ

ಜಲ ಸಂರಕ್ಷಣಾ ಆಂದೋಲನ ಜಾಗೃತಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲ ಸಂರಕ್ಷಣಾ ಆಂದೋಲನ ಜಾಗೃತಿಗೆ ಚಾಲನೆ

ದೇವನಹಳ್ಳಿ:  ‘ಸಮಾನತೆಯ ಹರಿಕಾರ ಜಗ­-ಜ್ಯೋತಿ ಬಸವೇಶ್ವರರ ಕನಸು ನನಸಾಗಿ­ಸುವ ನಿಟ್ಟಿನಲ್ಲಿ ಆರೋಗ್ಯ­ಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಜಲ ಸಂರಕ್ಷಣೆ ಇಂದಿನ  ಅನಿವಾರ್ಯ­ವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ ಅಭಿ­ಪ್ರಾಯ­ಪಟ್ಟರು.ದೇವನಹಳ್ಳಿ ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಚೇರಿ ಅವರಣ­ದಲ್ಲಿ ಶುಕ್ರವಾರ ಬಸವ ಜಯಂತಿ ಪ್ರಯುಕ್ತ ತಾಲ್ಲೂಕು ಅಭಿ­ವೃದ್ಧಿ ಸಮಿತಿ ಹಾಗೂ ಮಹಿಳಾ ಗ್ರಾಮೀಣ ವಿದ್ಯಾಭಿ­ವೃದ್ಧಿ ಸಂಸ್ಥೆ ವತಿ­ಯಿಂದ ಹಮ್ಮಿ­ಕೊಂಡಿದ್ದ ಜಲ ಸಂರ­ಕ್ಷಣಾ ಆಂದೋ­ಲನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಬಸವಣ್ಣ ಕನಸು ಕಂಡ ಸಮೃದ್ಧ­ಪೂರ್ಣ ಸಮಾಜದ ನಿರ್ಮಾಣಕ್ಕೆ ಪ್ರಕೃ­ತಿಯ ಸಂಪತ್ತಿನ ರಕ್ಷಣೆ ಇಂದು ಅವಶ್ಯಕವಾಗಿದೆ. ಬಯಲು ಸೀಮೆಯ ತಾಲ್ಲೂಕು ಎಂಬ ಹಣೆಪಟ್ಟಿಗೆ ಒಳಗಾಗಿ ಬರ­ದಿಂದ ಬಳಲುತ್ತಿರುವ ದೇವನಹಳ್ಳಿಯಲ್ಲಿ ಜಲ ಸಂರಕ್ಷಣೆಗೆ ಇಂದಿನಿಂದ ಎಲ್ಲರೂ ಪಣತೊಡ­ಬೇಕಾಗಿದೆ’ ಎಂದು ಅವರು ಹೇಳಿದರು.‘ತಾಲ್ಲೂಕಿಗೆ ಬರ ಎಂಬುದು ಶಾಶ್ವತ­ವಾಗಿ ಅಂಟಿರುವ ಶಾಪವಾಗಿದೆ. ವರ್ಷವೂ ಇದು ಮುಂದುವರೆಯು­ತ್ತಲೇ ಇದೆ. ಮಾನವನ ದುರಾಸೆಗೆ ನೀರು, ಮರಳು ಮಣ್ಣು, ಕಲ್ಲು ಸೇರಿ­ದಂತೆ ಪ್ರಕೃತಿಯ ಎಲ್ಲ ಅಮೂಲ್ಯ ಸಂಪತ್ತುಗಳೂ ಕರಗುತ್ತಿವೆ. ಅಂರ್ತಜಲ ಪಾತಾ­ಳಕ್ಕೆ ಇಳಿದಿದೆ. ಈ ದಿಸೆಯಲ್ಲಿ ಜಲ­ಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ಕೆರೆ, ಕಾಲುವೆಗಳ ಸಂರಕ್ಷಣೆಯಾಗ­ಬೇಕಿದೆ. ತಾಲ್ಲೂಕಿನ ಎಲ್ಲ ರಾಜ­ಕಾಲುವೆ­ಗಳ ದುರಸ್ತಿ, ಅವುಗಳ ಒತ್ತುವರಿ ತೆರವು, ನೀರಿನ ಮಿತ ಬಳಕೆ, ಮಳೆನೀರು ಸಂಗ್ರಹಣೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ಈ ದಿನ­ದಂದು ಸಂಕಲ್ಪ ಮಾಡಲಾಗುತ್ತಿದೆ. ಇದು ನಮ್ಮ ಜೀವ ಸಂಕುಲಗಳ ಉಳಿವಿ­ಗಾಗಿ ಒಂದು ಕಿರು ಪ್ರಯತ್ನ. ಈ ಪ್ರಯ­ತ್ನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.ಎಂ.ಪಿ.ಸಿ.ಎಸ್‌ ಅಧ್ಯಕ್ಷ ಶಿವ­ರಾಮಯ್ಯ ಮಾತನಾಡಿ, ‘ಬಸವಣ್ಣನ ಚಿಂತನೆಯ ಜೊತೆಗೆ ಪ್ರತಿಯೊಂದು ಗ್ರಾಮ,ಬಡಾವಣೆಗಳಲ್ಲಿ ನೀರು ಮರು ಬಳಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳ­ಬೇಕು’ ಎಂದು ಪ್ರತಿಪಾದಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ ಮಾತ­­ನಾಡಿ, ‘ತಾಲ್ಲೂಕಿನಲ್ಲಿ ಮುಚ್ಚಿ­ಹೋಗಿ­ರುವ ಕೆರೆಗಳ ಹೂಳೆತ್ತುವ ಮೂಲಕ ಅವುಗಳನ್ನು ಸ್ವಚ್ಛಗೊಳಿಸ ಬೇಕಿದೆ. ಜೀವಜಲಕ್ಕೆ ಪರಿತಪಿಸುವ ದಿನ­ಗಳನ್ನು ದೂರಾಗಿಸಬೇಕಿದೆ’ ಎಂದರು.ತಾಲ್ಲೂಕು ಸೇವಾದಲ ಅಧ್ಯಕ್ಷ ಲಕ್ಷ್ಮೀನಾರಾಯಣ, ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷೆ ಸೂರ್ಯಕಲಾ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮುನಿ­ಶಾಮೇ­ಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲ್ಲೂಕು ದಲಿತ ಸೇನೆಯ ಅಧ್ಯಕ್ಷ ಸಿ.ಮುನಿಯಪ್ಪ, ಉಷಾ ಪೂರ್ಣಚಂದ್ರ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕ­ಟೇಶ್‌, ಜಾಲಿಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಸ್‌.ಎಂ. ಆನಂದ್‌ ಕುಮಾರ್‌, ಸುಜಾತ, ಅಮರ್‌ ನಾಯಕ್‌ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.