ಬುಧವಾರ, ಏಪ್ರಿಲ್ 21, 2021
32 °C

ಜಹೀರ್-ಇಷಾ ಮದುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ವಿಶ್ವಕಪ್ ಗೆದ್ದು ಬಂದ ಆಟಗಾರರ ಹುಮ್ಮಸ್ಸು ಇನ್ನೂ ಕಡಿಮೆಯಾಗಿಲ್ಲ. ಇದೇ ಸಂತೋಷದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಜಹೀರ್ ಖಾನ್ ಮದುವೆಯಾಗುತ್ತಿರುವ ಸುದ್ದಿ ಬಂದಿದೆ. ಅವರು ತಮ್ಮ ಬಹುದಿನಗಳ ಗೆಳತಿ ಬಾಲಿವುಡ್ ನಟಿ, ರೂಪದರ್ಶಿ ಇಷಾ ಶರ್ವಾಣಿಯನ್ನು ವರಿಸುತ್ತಿದ್ದಾರೆ.2007ರಿಂದ ಜಹೀರ್ ಹೆಸರು ಇಷಾ ಜೊತೆ ತಳುಕು ಹಾಕಿಕೊಂಡಿತ್ತು. ರೂಪದರ್ಶಿಯಾಗಿದ್ದ ಇಷಾ ಸುಭಾಷ್ ಘಾಯ್ ಅವರ ‘ಕಿಸ್ನಾ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅದು ವಿಫಲವಾದರೂ ಆಕೆಯ ನೃತ್ಯ ಸಾಮರ್ಥ್ಯ ಗಮನಸೆಳೆದಿತ್ತು. ನಂತರ ‘ದರ್ವಾಜಾ ಬಂದ್ ರಖೋ’, ‘ರಾಕಿ’, ‘ಗುಡ್ ಬಾಯ್ ಬ್ಯಾಡ್ ಬಾಯ್’, ‘ಯು ಮಿ ಔರ್ ಹಮ್’, ‘ಲಕ್ ಬೈ ಚಾನ್ಸ್’ ಚಿತ್ರಗಳಲ್ಲಿ ನಟಿಸಿದರೂ ಆಕೆ ಮುಂಚೂಣಿಗೆ ಬರಲಿಲ್ಲ. ಕೆಲವು ಬಂಗಾಳಿ ಚಿತ್ರಗಳಲ್ಲೂ ನಟಿಸಿದ ಆಕೆ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.