ಬೆಂಗಳೂರು: ಕೊಡಗು ಜಿಲ್ಲೆಯ ನಾಪೋಕ್ಲುವಿನ ನಾಲಾಡಿ ಗ್ರಾಮದ 375 ಎಕರೆ ಜಮೀನಿಗಾಗಿ ದಶಕದ ಕಾಲ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಸಮರ ಸಾರಿದ್ದ ಕೇರಳ ಮೂಲದ ತಿರುವಾಂಕೂರು ರಾಜಮನೆತನಕ್ಕೆ ಕೊನೆಗೂ ಸೋಲುಂಟಾಗಿದ್ದು, ಜಾಗ ತೆರವಿಗೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

`ಕೊಲಿಯಾಟ್ ಎಸ್ಟೇಟ್~ ಎಂದು ಪ್ರಸಿದ್ಧವಾಗಿರುವ ಈ ಜಮೀನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದೆ. ಆದುದರಿಂದ ರಾಜವರ್ಮ ಮನೆತನವು ಅದನ್ನು ತೆರವುಗೊಳಿಸಲೇಬೇಕು~ ಎಂದು ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ ಹಾಗೂ ವಿ.ಸೂರಿ ಅಪ್ಪಾರಾವ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
ಈ ಜಮೀನು ಮೊದಲು ಕೇರಳದ ಭಾಗವಾಗಿತ್ತು. 1956ರಲ್ಲಿ ಕರ್ನಾಟಕ ಏಕೀಕರಣದ ನಂತರ ಜಮೀನು ಕರ್ನಾಟಕಕ್ಕೆ ಸೇರಿದೆ. ಜಾಗ ತೆರವುಗೊಳಿಸುವಂತೆ 2000ನೇ ಸಾಲಿನಲ್ಲಿ ಅಂದಿನ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ರಾಜವರ್ಮ ಅವರ ಮಗಳು ಕುಮಾರಿ ವರ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ವಜಾಗೊಳಿಸಿದೆ.

`1906ರಲ್ಲಿ ಈ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಜಾಗದಲ್ಲಿ ಒಂದು ವೇಳೆ ರಾಜಮನೆತನ ನೆಲೆಸಿದ್ದೇ ಆಗಿದ್ದಲ್ಲಿ ಅವರು ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಂತಾಗುತ್ತದೆ. ಇದು ಕರ್ನಾಟಕ ಅರಣ್ಯ ಕಾಯ್ದೆಗೆ ವಿರುದ್ಧವಾಗಿದೆ. ಒಂದು ವೇಳೆ ಇಲ್ಲಿಯೇ ವಾಸ ಮುಂದುವರಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕಾಗುತ್ತದೆ~ ಎಂದು ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

ಪ್ರಕರಣ ವಿವರ: ಕೇರಳ ಜಿಲ್ಲೆಯ ನಾಡುವಿಲ್ ಗ್ರಾಮಕ್ಕೆ ಸೇರಿದ್ದ ಸುಮಾರು 36 ಚದರ ಮೈಲು ಜಾಗವನ್ನು ರಾಜಾ ರವಿವರ್ಮ ಅವರು 1936ರಲ್ಲಿ ಹರಾಜಿನಲ್ಲಿ ಪಡೆದುಕೊಂಡಿದ್ದರು.

ಇದು ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಇತ್ತು. ಏಕೀಕರಣದ ನಂತರ ಈ 375.40ಎಕರೆ ಜಾಗ ಕರ್ನಾಟಕಕ್ಕೆ ಸೇರಿತು.

ಈ ಜಾಗ ಕೂಡ ತಮಗೆ ಸೇರಬೇಕು ಎಂದು ಕೋರಿ ರವಿವರ್ಮ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದರು. ಅವರು ಹಲವು ಬಾರಿ ಮನವಿ ಸಲ್ಲಿಸಿದರೂ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅವರ ಮನವಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಸುತ್ತಾಡತೊಡಗಿತು, ಆದರೆ ಫಲ ಕಾಣಲಿಲ್ಲ.

1999ರ ಮಾರ್ಚ್ 26ರಂದು ಈ ಪ್ರದೇಶವನ್ನು ಉಪವಿಭಾಗಾಧಿಕಾರಿಗಳು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿದರು. ಇದನ್ನು 2000ನೇ ಸಾಲಿನ ಫೆ.7ರಂದು ಜಿಲ್ಲಾಧಿಕಾರಿಗಳೂ ಊರ್ಜಿತಗೊಳಿಸಿದರು. ಜಾಗ ತೆರವಿಗೆ ಆದೇಶಿಸಲಾಯಿತು.

ಇದನ್ನು ರಾಜವರ್ಮ ಅವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ಅಲ್ಲಿ ಅವರ ಅರ್ಜಿ ವಜಾಗೊಂಡಿತು. 2002ನೇ ಸಾಲಿನಲ್ಲಿ ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋದರು. ಅರ್ಜಿಯನ್ನು ಪ್ರಾಧಿಕಾರಕ್ಕೆ ಹಿಂದಿರುಗಿಸಿದ್ದ ಹೈಕೋರ್ಟ್, ಹೊಸದಾಗಿ ವಿಚಾರಣೆ ನಡೆಸಿ ಮರು ಆದೇಶ ಹೊರಡಿಸುವಂತೆ ಸೂಚಿಸಿತ್ತು. ಆಗಲೂ ಪ್ರಾಧಿಕಾರ ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಇದನ್ನು ಪುನಃ ಅವರು 2003ರಲ್ಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. 2007ರಲ್ಲಿ ಏಕಸದಸ್ಯಪೀಠ ಅವರ ಅರ್ಜಿ ವಜಾಗೊಳಿಸಿತು. ಈ ಆದೇಶದ ರದ್ದತಿಗೆ ಅದೇ ಸಾಲಿನಲ್ಲಿ ಅವರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.
ಕರ್ನಾಟಕಕ್ಕೆ ಸೇರಿರುವ ಜಾಗದಲ್ಲಿ ಅವರು ಅನಧಿಕೃತವಾಗಿ ನೆಲೆಸಿದ್ದಾರೆ ಎಂಬ ಸರ್ಕಾರದ ಪರ ವಕೀಲ ಕೇಶವರೆಡ್ಡಿ ಅವರ ವಾದವನ್ನು ಪೀಠ ಮಾನ್ಯ ಮಾಡಿದೆ. ಮೇಲ್ಮನವಿ ವಜಾಗೊಳಿಸಿ ತೆರವುಗೊಳಿಸುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.