ಧಾರವಾಡ: ‘ಇಂದಿನ ಸಂಶೋಧಕರು, ಸಂತರು ಶರಣರ ಜಾತಿಯನ್ನು ಮುಖ್ಯವಾಗಿರಿಸಿಕೊಳ್ಳದೇ ಅವರ ಸಾಧನೆ, ವ್ಯಕ್ತಿತ್ವ, ತತ್ವ ಸಿದ್ಧಾಂತ, ತ್ಯಾಗದ ಬದುಕನ್ನು ಹುಡುಕುವಲ್ಲಿ ಮುಂದಾಗಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್. ಬಿ. ವಾಲೀಕಾರ ಹೇಳಿದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು ಹಾಗೂ ಕರ್ನಾಟಕ ಕಲಾ ಮಹಾವಿದ್ಯಾಲಯದ ಕರ್ನಾಟಕ ಸಂಘದ ಸಹಯೋಗದಲ್ಲಿ ನಗರದಲ್ಲಿ ನಡೆದ ರಾಜ್ಯಮಟ್ಟದ 'ಮುತ್ತು ಬಂದಿದೆ ಕೇರಿಗೆ' ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪುರಂದರ ದಾಸರೇ ಆಗಲಿ ಕನಕದಾಸರೇ ಆಗಲಿ ಅವರ ಜಾತಿ ಮುಖ್ಯವಲ್ಲ. ಅವರು ಸಾಧಿಸಿದ ಸಾಧನೆ ಮತ್ತು ಸಾಗಿದ ದಾರಿ ಮುಖ್ಯ ನಮಗೆ ಮಖ್ಯವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಬಸವಪೀಠ, ಕನಕಪೀಠ, ವಾಮನಪೀಠ ಮುಂತಾದ ಎಲ್ಲ ಪೀಠಗಳು ಜಂಗಮಶೀಲ ಪೀಠಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂದಿನ ವಿದ್ಯಾರ್ಥಿಗಳು ಬರೀ ಅಕಾಡೆಮಿಕ್ ಅಂಕಗಳನ್ನು ಪಡೆದರೆ ಸಾಲದು. ಸಾಹಿತ್ಯ, ಸಂಗೀತ , ಸಂಸ್ಕೃತಿಯೊಂದಿಗೆ ಜ್ಞಾನವನ್ನು ಪಡೆಯಬೇಕು. ಬದುಕಿಗೆ ಪದವಿಗಳು ಪೂರಕವಾಗಬೇಕು’ ಎಂದು ಅವರು ಹೇಳಿದರು.

ಡಾ. ಮುದೇನೂರು ನಿಂಗಪ್ಪ ಮಾತನಾಡಿ ‘ಕನಕದಾಸರೇ ಹೇಳಿದಂತೆ ಮುತ್ತು ಎಂದರೆ ಅದೊಂದು ಅಗೋಚರ ಅಪ್ರತಿಮ ಸತ್ಯದ ನಿಲುವನ್ನು ಹೊಂದಿದ ಮುತ್ತು, ಕನ್ನಡ ನೆಲದಲ್ಲಿ ಅವತರಿಸಿದ ಮುತ್ತು ಸಂತ ಕನಕದಾಸರು. ಕುಲಕ್ಕೆ ಅನೇಕ ಪ್ರಶ್ನೆಗಳನ್ನು ಕೇಳುವ ಅದಮ್ಯ ವ್ಯಕ್ತಿತ್ವ ಕನಕದಾಸರಲ್ಲಿತ್ತು. ಅವರು ಮಹಾಕವಿ ಪಂಪನ ಹಾಗೆಯೇ ಕಲಿಯೂ, ಕವಿಯೂ ಆಗಿದ್ದರು’ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಡಾ ಜಯದೇವಿ ಜಂಗಮಶೆಟ್ಟಿಯವರು ಕವಿ ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಡಿ.ಬಿ. ಕರಡೋಣಿ ಪ್ರಾಸ್ತಾವಿಕವಾಗಿ ಮಾತಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ವಿ.ಎಚ್.ಅರಳಿ, ಡಾ. ಎಚ್.ಟಿ. ವಾಮದೇವ, ರಾಘವೇಂದ್ರ ಕುಪ್ಪೇಲೂರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.