ಸೋಮವಾರ, ಜೂನ್ 14, 2021
27 °C

ಜಾತಿ ಅಸಹನೆಯ ಪರಮಾವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಯುವಕನನ್ನು ಪ್ರೀತಿಸಿ ವಿವಾಹವಾದ ಕಾಲೇಜು ಉಪನ್ಯಾಸಕಿಯನ್ನು ಆಕೆಯ ಅಣ್ಣನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಅತ್ಯಂತ ಅಮಾನವೀಯವಾದುದು.ಉನ್ನತ ಶಿಕ್ಷಣ ಪಡೆದ ಉಪನ್ಯಾಸಕಿ ಶ್ರುತಿ ಅವರಿಗೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಹಕ್ಕು ಇಲ್ಲವೇ? ಈ ಕಾಲದಲ್ಲೂ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಅದಕ್ಕಾಗಿ ಹತ್ಯೆ ಮಾಡುವ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ.ಹನ್ನೆರಡನೇ ಶತಮಾನದಲ್ಲೇ ಬಸವಣ್ಣನವರೇ ಇಂತಹ ಅಂತರ್ಜಾತೀಯ ವಿವಾಹಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.  ಅದು ಮುಂದುವರಿಯಬೇಕು. ಮುಂದುವರಿದ ಜಾತಿಯ ಯುವಕರಲ್ಲಿ ಜಾತಿ ಅಸಹನೆ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ.ಪ್ರಗತಿಪರ ಸಂಘಟನೆಗಳು, ಮಠಾಧೀಶರು ಅಂತರ್ಜಾತೀಯ ವಿವಾಹ, ವಿಧವಾ ವಿವಾಹಗಳು ಅವಮಾನ ಎನ್ನುವ ಮನೋಭಾವ ಹೋಗಲಾಡಿಸಲು ಶ್ರಮಿಸುವ ಅಗತ್ಯವಿದೆ. ಇದು ತುರ್ತಾಗಿ ಆಗಬೇಕಾದ ಕೆಲಸ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.