ಹಿರೇಕೆರೂರ:ತಾಲ್ಲೂಕಿನ ಹಂಸಭಾವಿ ಗ್ರಾಮದ ಜಾನುವಾರು ಮಾರುಕಟ್ಟೆ ತಾಲ್ಲೂಕಿನ ಏಕೈಕ ಜಾನುವಾರು ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದು, ಜಿಲ್ಲೆಯ ದೊಡ್ಡ ಮಾರುಕಟ್ಟೆಗಳಲ್ಲಿ ಒಂದೆಂಬ ಖ್ಯಾತಿಯನ್ನು ಪಡೆದಿದೆ. ಆದರೆ, ಅಗತ್ಯ ಮೂಲ ಸೌಲಭ್ಯಗಳಿಲ್ಲದೆ ಮಾರುಕಟ್ಟೆಯ ಬೆಳವಣಿಗೆ ಕುಂಠಿತಗೊಂಡಿದೆ.

ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಸುಮಾರು 4 ಎಕರೆ ವಿಶಾಲ ಪ್ರದೇಶದಲ್ಲಿ ಜಾನುವಾರುಗಳ ಮಾರುಕಟ್ಟೆ ಪ್ರತಿ ಶುಕ್ರವಾರ ನಡೆಯುತ್ತದೆ. ಹೈನುಗಾರಿಕೆಗೆ ಖರೀದಿಸುವ ಎಚ್ಎಫ್, ಜರ್ಸಿ ತಳಿಗಳ ಮಿಶ್ರತಳಿ ರಾಸುಗಳು, ಕೃಷಿ ಯೋಗ್ಯ ತಳಿಗಳಾದ ಖಿಲಾರಿ, ಹಳ್ಳಿಕಾರ ಹೋರಿಗಳು, ಎಮ್ಮೆಗಳು ಹಾಗೂ ಕರುಗಳು ಸಹಿತ ನೂರಾರು ಉತ್ತಮ ಜಾನುವಾರುಗಳು, ಕಸಾಯಿಖಾನೆಗೆ ಮಾರಾಟ ಮಾಡಲು ವಯಸ್ಸಾದ ರಾಸುಗಳು ಸಹ ಇಲ್ಲಿ ಸೇರುತ್ತವೆ.

ಇಂತಹ ದೊಡ್ಡ ಮಾರುಕಟ್ಟೆಯಾಗಿದ್ದರೂ ಜಾನುವಾರು ಮಾರಾಟ ಹಾಗೂ ಖರೀದಿಗೆ ಬರುವ ರೈತರು ಬಿರು ಬಿಸಿಲಿನಲ್ಲಿಯೇ ವ್ಯವಹಾರ ಮಾಡಬೇಕಾಗಿದೆ. ನೆರಳಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಜಾನುವಾರುಗಳು ಬಿಸಿಲಿನಲ್ಲಿ ಬೇಯುವುದು ಸಾಮಾನ್ಯ ಎನಿಸಿದೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಸರಿಯಾಗಿಲ್ಲದೆ ತಾಪ ಅನುಭವಿಸುವಂತಿದೆ.

ವಾರಕ್ಕೆ 100ರಿಂದ 500 ಜಾನುವಾರುಗಳನ್ನು ಈ ಮಾರುಕಟ್ಟೆಗೆ ತರಲಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ನಿಗದಿತ ಶುಲ್ಕವನ್ನು ಮಾತ್ರ ವಸೂಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ, ‘ಮಾರುಕಟ್ಟೆಯ ಜಾಗೆ ನಮಗೆ ಸೇರಿಲ್ಲ ಹಾಗಾಗಿ ನಾವು ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ’ ಎಂದು ಎಪಿಎಂಸಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮಧ್ಯವರ್ತಿಗಳ ಹಾವಳಿ: ಜಾನುವಾರು ಮಾರಾಟ ಹಾಗೂ ಖರೀದಿಯಲ್ಲಿ ಮಧ್ಯವರ್ತಿಗಳ ಪಾತ್ರ ವಿಪರೀತವಾಗಿದೆ. ಅದಕ್ಕೆ ಯಾವುದೇ ರೀತಿ ಕಡಿವಾಣವಿಲ್ಲ, ಹೀಗಾಗಿ ಮುಗ್ಧ ರೈತರನ್ನು ವಂಚಿಸುವುದು ಮಾರುಕಟ್ಟೆಯಲ್ಲಿ ಸರ್ವೆಸಾಮಾನ್ಯ ಎನಿಸಿದೆ.

ರಾಸುಗಳು ಕರು ಹಾಕಿ ಅನೇಕ ತಿಂಗಳುಗಳು ಕಳೆದಿದ್ದರೂ ಅದಕ್ಕೆ ಸಣ್ಣ ಕರು ಜೋಡಿ ಮಾಡಿಕೊಂಡು ಬಂದು ‘ಕರು ಹಾಕಿ ಕೇವಲ 15–20 ದಿನಗಳಾಗಿವೆ’ ಎಂದು ನಂಬಿಸುವ ಪ್ರಯತ್ನಗಳು ನಡೆಯುತ್ತವೆ. ಕಡಿಮೆ ಹಾಲು ಕೊಡುವ ರಾಸುಗಳ ಹಾಲನ್ನು ಒಂದೆರಡು ದಿನ ಹಿಂಡದೇ ಹಾಗೆ ಬಿಟ್ಟು, ಮಾರುಕಟ್ಟೆಗೆ ತಂದು ಅದರ ದೊಡ್ಡ ಕೆಚ್ಚಲು ತೋರಿಸಿ ‘ಈ ಹಸು ಭಾರಿ ಹಾಲು ಕೊಡುತ್ತದೆ’ ಎಂದು ನಂಬಿಸಿ ಖರೀದಿ ಮಾಡುವ ರೈತರನ್ನು ವಂಚಿಸಿ ಲಾಭ ಪಡೆಯುವುದು ಸಹಜ ಎನ್ನುವಂತಿದೆ. ಗರ್ಭ ಧರಿಸದ ಜಾನುವಾರುಗಳನ್ನು ಸಹ ಗರ್ಭ ಧರಿಸಿದೆ ಎಂದು ವಂಚಿಸುವುದು ಸೇರಿದಂತೆ ಅನೇಕ ಕುತಂತ್ರಗಳನ್ನು ಮಧ್ಯವರ್ತಿಗಳು ಮಾಡುತ್ತಾರೆ.

‘ಜಿಲ್ಲೆಯಲ್ಲಿಯೇ ಉತ್ತಮ ರಾಸುಗಳು ಸೇರುವ ಮಾರುಕಟ್ಟೆ ಎಂಬ ಖ್ಯಾತಿ ಗಳಿಸಿರುವ ಈ ಮಾರುಕಟ್ಟೆಯಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ರೈತರು ಮಧ್ಯವರ್ತಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರೈತ ಮುಖಂಡ ರಾಜಶೇಖರ ದೂದೀಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.