ಗುರುವಾರ , ಮೇ 26, 2022
22 °C

ಜಾನ್ಸನ್ ಅಂಡ್ ಜಾನ್ಸನ್‌ರಾಯಭಾರಿಯಾಗಿ ಕತ್ರಿನಾ ಕೈಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆರಾಮಿಕ್ ಟೈಲ್ಸ್ ಮತ್ತು ವಿವಿಧ ಗೃಹೋಪಯೋಗಿ ಉತ್ಪನ್ನಗಳಿಗೆ ಹೆಸರಾದ ಬ್ರಾಂಡ್ ಜಾನ್ಸನ್ ಅಂಡ್ ಜಾನ್ಸನ್ ಇದೀಗ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಅವರನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ಆರಿಸಿಕೊಳ್ಳುವ ಮೂಲಕ ಪ್ರಚಾರಕ್ಕೆ ತಾರಾ ಮೆರುಗು ನೀಡಲು ಮುಂದಾಗಿದೆ.`ಎಚ್ ಅಂಡ್ ಆರ್ ಜಾನ್ಸನ್' (ಭಾರತ) ವಿಭಾಗದ ಬ್ರಾಂಡ್ ರಾಯಭಾರಿಯಾಗಿ ಸಹಿ ಮಾಡಿರುವ ಕತ್ರಿನಾ, ಬಾತ್‌ರೂಮ್ ಉತ್ಪನ್ನಗಳು, ಟೈಲ್ಸ್, ಮೌಲ್ಯವರ್ಧಿತ ಅಮೃತಶಿಲೆ ಮತ್ತು ಕಂಪೆನಿಯ ಸ್ಫಟಿಕ ಮತ್ತು ಮಾಡ್ಯುಲರ್ ಅಡುಗೆಮನೆಯ ಉತ್ಪನ್ನಗಳಿಗೆ ಪ್ರಚಾರ ಮಾಡಲಿದ್ದಾರೆ.`ಈಗ ಜಾನ್ಸನ್ ಅಂಡ್ ಜಾನ್ಸನ್ ಮರುವಿನ್ಯಾಸಗೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ಜನರ ಜೀವನಶೈಲಿಯ ಒಂದು ಭಾಗವೇ ಆಗಿದ್ದ ನಮ್ಮ ಬ್ರಾಂಡ್‌ಗಳ ಬೇಡಿಕೆ ಏರುತ್ತಲೇ ಇದೆ. ಕತ್ರಿನಾ ಕೈಫ್ ರಾಯಭಾರಿಯಾಗಿರುವುದರಿಂದ ಜಾನ್ಸನ್ ಬ್ರಾಂಡಿನ ಗುಣಮಟ್ಟದ ಬಗ್ಗೆ ವಿಶ್ವಾಸಾರ್ಹತೆ ಮೂಡಿಸುವಲ್ಲಿ ಯಶಸ್ವಿಯಾಗುವ ಭರವಸೆ ನಮ್ಮದು' ಎಂದು ಕಂಪೆನಿಯ ಹಿರಿಯ ನಿರ್ವಹಣಾಧಿಕಾರಿ ಸುಳಿಲ್ ಮಥೇರಿ ಅಭಿಪ್ರಾಯಪಟ್ಟಿದ್ದಾರೆ.ಕತ್ರಿನಾ ಕೈಫ್ ಮಾತನಾಡಿ, ಕಂಪೆನಿ ಜತೆ ಸೇರಿರುವುದು ಖುಷಿಯಾಗಿದೆ. ಇದೊಂದು ನಂಬಿಕಾರ್ಹ ಬ್ರಾಂಡ್ ಆಗಿದ್ದು ಜೀವನಶೈಲಿಯ ಪ್ರಾಮುಖ್ಯತೆ ಅರಿತು ವಿನ್ಯಾಸ, ಉತ್ಪಾದನೆ ಮಾಡಿರುವುದು ಗಮನಾರ್ಹ ಎಂದು ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.