ಭಾರತದಲ್ಲಿ ಬಾಕ್ಸಿಂಗ್ ಹಾಗೂ ಜಿಮ್ ಎರಡನ್ನೂ ಸಮನಾಗಿ ಬೆರೆಸಿ ದೈಹಿಕ ಕಸರತ್ತಿನ ಭಾಗವಾಗಿ ನೀಡುವ ಉದ್ದೇಶದಿಂದ ಮಾಜಿ ಬಾಕ್ಸಿಂಗ್ ಚಾಂಪಿಯನ್ ಡೇವಿಡ್ ಹೇ ಅವರೊಂದಿಗೆ ಬಾಲಿವುಡ್ ನಟ ಜಾನ್ ಅಬ್ರಹಾಂ ಒಪ್ಪಂದ ಮಾಡಿಕೊಂಡಿದ್ದಾರೆ.

ಮಾಜಿ ಹೆವಿ ವೈಟ್ ಚಾಂಪಿಯನ್ ಡೇವಿಡ್ ಹೇ ಅವರು ಈಗಲೂ ವಿಶ್ವದ ಮೂರನೇ ಸ್ಥಾನವನ್ನು ಅಲಂಕರಿಸಿರಿದ್ದಾರೆ. ಇದನ್ನು ಸ್ವತಃ ಟ್ರಾನ್ಸ್ನ್ಯಾಷನಲ್ ಬಾಕ್ಸಿಂಗ್ ರಾಂಕಿಂಗ್ ಬೋರ್ಡ್ನಿಂದ ಧೃಢೀಕರಿಸಲ್ಪಟ್ಟಿದೆ. ಇದೀಗ ಈ ಬಾಕ್ಸಿಂಗ್ ದಿಗ್ಗಜ ನಟ ಹಾಗೂ ಭಾರತದ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಜತೆಗೂಡಿ ಫಿಟ್ನೆಸ್ ಹಾಗೂ ಬಾಕ್ಸಿಂಗ್ ಕಲಿಸಲು ಮುಂದಾಗಿದ್ದಾರೆ.

ಬ್ರಿಟನ್ನಿನ ಬಾಕ್ಸರ್ ಡೇವಿಡ್ ಅವರು `ಹೇಮೇಕರ್ ಜಿಮ್' ಎಂಬ ಹೆಸರಿನ ಜಿಮ್ ಒಂದನ್ನು ದುಬೈನಲ್ಲಿ ತೆರೆಯಲು ಸಕಲ ಸಿದ್ಧತೆಗಳನ್ನೂ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದಲ್ಲೂ ಇಂಥದ್ದೊಂದು ಪ್ರಯತ್ನಕ್ಕೆ ಜಾನ್ ಅವರೊಂದಿಗೆ ಕೈಹಾಕಿದ್ದಾರೆ.

ಜಾನ್ ಅಬ್ರಹಾಂ ಎಂದರೆ ಭಾರತದ ಫಿಟ್ನೆಸ್ಗೊಂದು ಗುರುತು ಇದ್ದಂತೆ. ಜಿಮ್ ಜತೆ ಬಾಕ್ಸಿಂಗ್ ಅನ್ನೂ ಕಲೆಯನ್ನಾಗಿ ಕಲಿಸುವ ಯೋಜನೆ ರೂಪಿಸಿರುವ ಈ ಇಬ್ಬರ ಯೋಜನೆ ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. `ಡೇವಿಡ್ ಹೇ ಅವರೊಬ್ಬ ಅಪ್ರತಿಮ ವ್ಯಕ್ತಿ. ನಾನು ಅವರಲ್ಲಿ ತರಬೇತಿ ಪಡೆದಿದ್ದೇನೆ. ಫಿಟ್ನೆಸ್ ಹಾಗೂ ಬಾಕ್ಸಿಂಗ್ ಕುರಿತು ಇಬ್ಬರಿಗೂ ಸಮಾನ ಆಸಕ್ತಿ ಇರುವುದರಿಂದ ಈ ಒಪ್ಪಂದಕ್ಕೆ ಬರಲು ಸಹಕಾರಿಯಾಯಿತು. ಈ ಮೂಲಕ ಫಿಟ್ನೆಸ್ ಹಾಗೂ ಆರೋಗ್ಯಯುಕ್ತ ಜೀವನ ಶೈಲಿಯನ್ನು ಮೈಗೂಡಿಸಿಕೊಳ್ಳುವುದು ಭಾರತದಲ್ಲಿ ಹೊಸ ಬಗೆಯ ಜೀವನಶೈಲಿಯನ್ನು ಹುಟ್ಟುಹಾಕಲಿದೆ ಎಂಬ ವಿಶ್ವಾಸವಿದೆ' ಎಂದು ಜಾನ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.