ಭಾನುವಾರ, ಮೇ 16, 2021
22 °C

ಜಾರಿಯಾಗದ ಬರ ಕಾಮಗಾರಿ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ರಾಜ್ಯದಲ್ಲಿ ಭೀಕರ ಬರಗಾಲ ಆಗಿ ಗ್ರಾಮಗಳಲ್ಲಿ ಕುಡಿಯವ ನೀರಿಲ್ಲದೆ ಮೇವು ಕೊರತೆಯಿಂದ ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟಿಲ್ ಭಾನುವಾರ ತಿಳಿಸಿದರುನಗರದ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 14 ಜಿಲ್ಲೆಗಳ 123 ತಾಲ್ಲೂಕುಗಳಲ್ಲಿ ಮುಂಗಾರು ಹಿಂಗಾರು ವಿಫಲವಾಗಿ ಭೀಕರ ಬರಗಾಲ ಎದುರಾಗಿದೆ ಎಂದು ತಿಳಿಸಿದರು.ಬರಗಾರದಿಂದ ಕೃಷಿ ಚಟುವಟಿಕೆ ನಿಂತು ಜನರು ಪಟ್ಟಣಕ್ಕೆ ಗುಳೆ ಹೋಗುತ್ತಿದ್ದಾರೆ, ಸರ್ಕಾರ ಬರಗಾಲ ನಿವಾರಣೆಗೆ ಹಾಕಿಕೊಂಡಿರುವ ಯಾವುದೇ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದ ಅವರು 1985ರಲ್ಲೇ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಅವರು ಬರಗಾರ ಪರಿಸ್ಥಿತಿಯಲ್ಲಿ ಶಾಶ್ವತ ನಿಧಿಯನ್ನು ಸ್ಥಾಪಿಸಬೇಕೆಂದು ತಿಳಿಸಿದ್ದರು ಎಂದರು.ರಾಜ್ಯದ ಬರಗಾರ ಪ್ರದೇಶದ ಜನ ಜಾನುವಾರುಗಳನ್ನು ರಕ್ಷಿಸಲು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಪರಿಹಾರ ನಿಧಿ ಸಮಿತಿಯನ್ನು ಸ್ಥಾಪನೆ ಮಾಡಬೇಕು. ಈ ನಿಧಿಗೆ ರಾಜ್ಯ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ಉದಾ ರವಾಗಿ ಹಣ ಕಾಸಿನ ನೆರವನ್ನು ಪಡೆಯಬೇಕು ಮತ್ತು ರಾಜ್ಯದ ಶಾಸ ಕರು ಮತ್ತು ಸಂಸದರು ತಮ್ಮ ಒಂದು ತಿಂಗಳ ಗೌರವ ಧನವನ್ನು ಈ ನಿಧಿಗೆ ನೀಡಬೇಕು ಹಾಗೂ ಸರ್ಕಾರಿ ನೌಕ ರರು ಒಂದು ದಿನದ ಸಂಬಳವನ್ನು ನೀಡಿ ರಾಜ್ಯದಲ್ಲಿ ಬರಗಾರದಿಂದ ತತ್ತರಿಸಿ ಹೊಗಿರುವ ಜನರ ರಕ್ಷಣೆಗಾಗಿ ಮಾನವೀಯತೆಯನ್ನು ತೋರಿಸಬೇಕು ಎಂದರು.ಭೂಬ್ಯಾಂಕ್‌ಗೆ ಭೂಮಿ ಕೊಳ್ಳುವ ದೃಷ್ಟಿಯಿಂದ ಈ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿರುವ 2000 ಕೋಟಿ ಹಣವನ್ನು ವಾಪಸ್ ಪಡೆದು ಬರಗಾರ ಪ್ರದೇಶದ ಅಭಿವೃದ್ದಿಗೆ ಬಳಸಿಕೊಳ್ಳಬೇಕು ಮತ್ತು ಬೆಳೆ ಸಾಲಕ್ಕಾಗಿ ರೈತರು ಪಡೆದಿರುವ  ಹಾಗೂ ಟ್ರ್ಯಾಕ್ಟರ್ ಸಾಲವನ್ನು ಮನ್ನಾ ಮಾಡಿ ಅಂತರಜಲ ಪುನಶ್ಚೇತನ ಆಗಲು ಹೊಸ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ಉದ್ಭವಿಸಿರುವ ಬರಗಾಲ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಲು ಒತ್ತಾಯಿಸಲು ಏ.9ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ ಬರಗಾಲ ಕಾಮಗಾರಿ ಭ್ರಷ್ಟಾಚಾರ ಆಗದಂತೆ ಉಸ್ತವಾರಿ ವಹಿಸಬೇಕು ಎಂದ ಅವರು, ಜಿಲ್ಲಾ ರೈತ ಸಂಘದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಿ ಸರಿಪಡಿಸುತ್ತೇವೆ ಎಂದರು.ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯ ರೈತ ಸಂಘದಲ್ಲಿರುವ ಸಮಸ್ಯೆ ಸರಿಹೋಗಿದೆ. ಮಾ.17ರಂದೇ ನಿಜವಾದ ಕಾರ್ಯಕಾರಿ ಸಮಿತಿ ರಚನೆ ಆಗಿದೆ ಕೋಡಿಹಳ್ಳಿ ಚಂದ್ರಶೇಖರ್ ಚಳವಳಿ ಗಟ್ಟಿಗೊಳಿಸುವ ದಿಕ್ಕಿನಲ್ಲಿ ನಡೆಯಬೇಕು ಮತ್ತು ರಾಜ್ಯ ಸಮಿತಿ ನಿರ್ಣಯಕ್ಕೆ ಭದ್ದರಾಗಿ ಸಾಮಾನ್ಯ ಕಾರ್ಯಕರ್ತರಾಗಿ ಅವರ ಅನುಭವ ಹಂಚಿಕೊಳ್ಳಬೇಕು ಎಂದು ತಿಳಿಸಿದರು.ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ಹೊಸೂರು ಕುಮಾರ್, ಶೇಷಪ್ಪ, ಅನಗಳ್ಳಿ ನಟರಾಜು, ಮಹದೇವಸ್ವಾಮಿ, ವೈ.ಸಿ.ಪ್ರಕಾಶ್, ಚೆನ್ನಬಸಪ್ಪ ನಂಜೇಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.