ಶುಕ್ರವಾರ, ಮೇ 7, 2021
20 °C

ಜಾರ್ಜ್ ಪ್ರಕರಣ ಕೈಬಿಟ್ಟ ಸಿಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆದಾಯಕ್ಕೂ ಮೀರಿ ಆಸ್ತಿಪಾಸ್ತಿ ಹೊಂದಿದ ಆರೋಪದಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಹಾಗೂ ಅವರ ಮಾಜಿ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಸಮರ್ಪಕ  ಪುರಾವೆಗಳಿಲ್ಲ ಎನ್ನುವ ಕಾರಣದಿಂದ ಕೈಬಿಡಲಾಗಿದೆ.ಸದರಿ ಪ್ರಕರಣದಲ್ಲಿ ಅಮೆರಿಕ ಪ್ರಮುಖ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾಗಿದ್ದು ಹತ್ತು ವರ್ಷಗಳಿಂದ ಅಲ್ಲಿಂದ ಯಾವುದೇ ರೀತಿಯ ಮಾಹಿತಿ ಬಂದಿಲ್ಲವಾದ್ದರಿಂದ ಪ್ರಕರಣವನ್ನು ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.1990ರ ನಂತರ ಜಾರ್ಜ್, ದಕ್ಷಿಣ ದೆಹಲಿಯ ಪ್ರತಿಷ್ಠಿತ ಭಾಗದಲ್ಲಿ ವಾಣಿಜ್ಯ ಹಾಗೂ ವಸತಿ ಉದ್ದೇಶದ ಆಸ್ತಿ, ಬೆಂಗಳೂರು, ಚೆನ್ನೈ, ಕೇರಳ ಮತ್ತು ದೆಹಲಿಯ ಗಡಿಭಾಗದಲ್ಲಿ ಕೃಷಿಭೂಮಿ ಹೊಂದಿರುವ ಆರೋಪದಡಿ ಪ್ರಕರಣವನ್ನುದಾಖಲಿಸಿಕೊಳ್ಳಲಾಗಿತ್ತು.ಹೊರ ದೇಶಗಳ ಹಣದಿಂದ ಅಕ್ರಮವಾಗಿ ಜಾರ್ಜ್ ಈ ಎಲ್ಲ ಆಸ್ತಿಪಾಸ್ತಿ ಖರೀದಿಸಿರುವ ಆರೋಪ ಹೊರಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.