ಗುರುವಾರ , ಫೆಬ್ರವರಿ 25, 2021
17 °C
ಪೊಲೀಸ್‌ ಗಸ್ತು ವ್ಯವಸ್ಥೆ ನಿಷ್ಕ್ರಿಯ, ಅಪರಾಧ ಪ್ರಕರಣ ಹೆಚ್ಚಳ

ಜಾಲಹಳ್ಳಿ: ಎತ್ತುಗಳ ಕಳವು, ರೈತರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲಹಳ್ಳಿ: ಎತ್ತುಗಳ ಕಳವು, ರೈತರು ಕಂಗಾಲು

ಜಾಲಹಳ್ಳಿ:  ಸೋಮವಾರ ರಾತ್ರಿ ಪಟ್ಟಣದ ಅಬ್ದುಲ್‌ ಸಾಬ್‌ ಎನ್ನುವ ರೈತನಿಗೆ ಸೇರಿದ ಜೋಡಿ ಎತ್ತುಗಳು ಕಳವಾಗಿವೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಸುತ್ತಮುತ್ತಲ್ಲಿನ ಹಳ್ಳಿಗಳಲ್ಲಿ ಕಳೆದ ಮೂರು ತಿಂಗಳಿಂದ ರೈತರ ಬೆಲೆ ಬಾಳುವ ಕೃಷಿ ಪರಿಕರಗಳು ಹಾಗೂ ದನಕರಗಳನ್ನು ನಿರಂತರವಾಗಿ  ಕಳ್ಳತನ ನಡೆಯುತ್ತಿದೆ.ರೈತನಿಗೆ ಅಗತ್ಯವಾಗಿ ಬೇಕಾಗಿರುವ ಎತ್ತುಗಳನ್ನೇ  ಕಳ್ಳತನ ಮಾಡಿದರೆ ಅವನು ಬೇಸಾಯ ಹೇಗೆ ಮಾಡಲು ಸಾಧ್ಯ,  ಇಂತಹ ಘಟನೆಯಿಂದ ಬಹುತೇಕ ರೈತರು ಒಕ್ಕಲುತ ಮಾಡುವುದನ್ನು ಬಿಟ್ಟು ನಗರಗಳಿಗೆ ದುಡಿಯಲು ಹೋಗಿದ್ದಾರೆ.  ಕೆಲವು ದಿನಗಳ ಹಿಂದೆ ಪಟ್ಟಣದಿಂದ 1 ಕಿ.ಮೀ ದೂರದಲ್ಲಿ ಮುದರಂಗಪ್ಪ ಎನ್ನುವ ರೈತನ ಹೊಲದಲ್ಲಿ ಕಟ್ಟಿಹಾಕಿದ್ದ ಎರಡು ಎತ್ತುಗಳು  ಕಳವಾಗಿವೆ.  ಸೋಮವಾರ ಅಬ್ದುಲ್ ಸಾಬ್‌ ಕಡಪಿ ಎಂಬುವವರ ಹೊಲದ ಗುಡಿಸಲಿನಲ್ಲಿ ಕಟ್ಟಿ ಹಾಕಿಿದ್ದ ಎತ್ತುಗಳನ್ನು ರಾತ್ರಿ  ಕಳ್ಳರು ಒಯ್ದಿದ್ದಾರೆ.ಈ ಎತ್ತುಗಳನ್ನು ಎರಡು ತಿಂಗಳ ಹಿಂದೆ ರಂಗನಾಥನ ಜಾತ್ರೆಯಲ್ಲಿ ₨ 60 000ಕ್ಕೆ ಖರೀದಿ ಮಾಡಲಾಗಿತ್ತು.   ಎತ್ತುಗಳಿಂದಲೇ ಈತನ ಜೀವನದ ಬಂಡಿ  ಸಾಗಿಸಲಾಗುತ್ತಿತ್ತು. ಈಗ ಎತ್ತು ಕಳೆದುಕೊಂಡು ರೈತ ಕಂಗಾಲಾಗಿದ್ದು, ತಕ್ಷಣವೇ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ರೈತನಿಗೆ ಎತ್ತು ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಬಸವರಾಜ ತೇಕೂರ ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿಯೇ ಪೊಲೀಸ್‌ ಠಾಣೆ ಇದ್ದರು ಸಹ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಿ ಕಾನೂನು ಬಾಹಿರವಾಗಿರುವ ಅಕ್ರಮ ಮದ್ಯ ಮಾರಾಟ, ಮಟ್ಕಾ, ಜೂಜಾಟ, ಅಕ್ರಮ ಮರಳು ದಂಧೆ, ಈಗೆ ಆನೇಕ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್‌ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.  ತಕ್ಷಣವೇ ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಈ ಠಾಣೆಗೆ ಬೇಟಿ ನೀಡಿ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಹಾಗೂ ಠಾಣೆಯಲ್ಲಿಯೇ ಸಾರ್ವಜನಿಕ ಸಭೆ ನಡೆಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.