ಅಲ್ಲಿ ನಡೆದಿರುವುದು ಹಳೆಯ ಜಾವಾ ಬೈಕ್ಗಳ ಜಾತ್ರೆಯೇನೋ ಎನ್ನುವಂತಿತ್ತು. ಕೆಂಪು, ಕಪ್ಪು, ಗಾಢ ಹಸಿರು, ತಿಳಿ ಹಸಿರು, ಬೆಳ್ಳಿ ಬಣ್ಣದ ದೊಡ್ಡ ಗಾತ್ರದವು. 40 ವರ್ಷ ಹಳೆಯವೇ ಆಗಿದ್ದರೂ ಹೊಸತರಂತೆ ಮಿರಿ ಮಿರಿ ಮಿಂಚುತ್ತಿದ್ದವು...

ಕೋಳಿ ಮೊಟ್ಟೆ ಆಕಾರದ ಪೆಟ್ರೋಲ್ ಟ್ಯಾಂಕ್ನಲ್ಲಿ ಮುಖದ ಬಿಂಬ ನೋಡಿಕೊಂಡು ತಲೆ ಬಾಚಿಕೊಳ್ಳಬಹುದಾಗಿತ್ತು. ಅಷ್ಟರಮಟ್ಟಿಗೆ ಅದರ ಕ್ರೋಮಿಯಂ ಕೋಟಿಂಗ್ ಥೇಟ್ ಕನ್ನಡಿಯಂತೆ ಪ್ರತಿಫಲಿಸುತ್ತಿತ್ತು. ಹಿಂಬದಿ ಚಕ್ರದ ಎರಡೂ ಪಾರ್ಶ್ವದಲ್ಲಿದ್ದ ಸೈಲೆನ್ಸರ್ ಜೋಡಿ ಶಬ್ದ ಕಡಿಮೆ ಮಾಡುವ ಬದಲು ದ್ವಿಗುಣಗೊಳಿಸಲೇ ಇವೆಯೇನೋ ಎಂಬಂತೆಯೇ ದೊಡ್ಡ ಗಾತ್ರದವಾಗಿ ಕಾಣಿಸುತ್ತಿದ್ದವು.

ಊರಿಗೆಲ್ಲಾ ಕೇಳುವಂತೆ ಗುಡು..ಗುಡು... ಜೋರು ಸದ್ದು ಹೊರಡಿಸುವ ಈ ಹಳೆಯ ಜಾವಾ ಮೋಟಾರ್ ಬೈಕ್ಗಳನ್ನು `ಆಂಟಿಕ್~ಗಳೇನೋ ಎನ್ನುವಂತೆ ಜೋಪಾನವಾಗಿಟ್ಟುಕೊಂಡು ದಿನಕ್ಕೊಮ್ಮೆ ಅದರ ಮೈ ಸವರುತ್ತಾ ಖುಷಿ ಪಡುವವರು, ಅಪರೂಪಕ್ಕಾದರೂ ಭಾರಿ ಅಭಿಮಾನದಿಂದ ರಸ್ತೆಗಿಳಿಸಿ `ಗುಡುಗುಡಿ~ಸುವವರು ಅದೆಷ್ಟೋ ಮಂದಿ ಬೆಂಗಳೂರಿನಲ್ಲಿದ್ದಾರೆ.

`ಜಾವಾ~ ಬೈಕ್ನೆಡೆಗೆ ಇರುವ ಮೆಚ್ಚುಗೆ, ಪ್ರೀತಿ, ಅಭಿಮಾನದ ಫಲವಾಗಿ ಅವರೆಲ್ಲರೂ ಜಾವಾ ಮಿತ್ರರ ಕೂಟವನ್ನೂ ರಚಿಸಿಕೊಂಡಿದ್ದಾರೆ. 2007ರಲ್ಲಿ ಬೆಂಗಳೂರಿನ ಅಮೃತ್, ಲೋಕೇಶ್, ಬ್ರಯಾನ್ ಮತ್ತು ಸ್ಯಾಮ್ ಮಿತ್ರರ ಆಸಕ್ತಿಯ ಫಲವಾಗಿ ಜನ್ಮತಳೆದ ಬೆಂಗಳೂರು ಜಾವಾ ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್ (ಬಿಜೆವೈಎಂಸಿ)ನಲ್ಲಿ ಈಗ 500ಕ್ಕೂ ಅಧಿಕ ಸದಸ್ಯರಿದ್ದಾರೆ. ಜಾವಾ ಪ್ರಿಯರೊಟ್ಟಿಗೇ `ಯೆಜ್ಡಿ-ರೋಡ್ಕಿಂಗ್~ ಮಾಲೀಕರೂ ಸೇರಿಕೊಂಡಿದ್ದಾರೆ. ಎಲ್ಲರೂ ಆಗ್ಗಾಗ್ಗೆ ಭೇಟಿಯಾಗುತ್ತಾರೆ. ವರ್ಷಕ್ಕೊಮ್ಮೆ ಪ್ರೀತಿಯ ದ್ವಿಚಕ್ರವಾಹನದೊಂದಿಗೆ ಎಲ್ಲರೂ ಒಂದೆಡೆ ಸೇರಿ `ಜಾವಾ ಜಪ~ ಮಾಡುತ್ತಾರೆ. ಅತಿ ಹಳೆಯದಾದ, ಭಿನ್ನ ಆಕಾರ-ಬಣ್ಣದ ಬೈಕ್ಗಳ ಮೈಸವರುತ್ತಾ, ಅವುಗಳ ಮಾಗಿದ `ಸೌಂದರ್ಯ~ವನ್ನು ಕಣ್ಣುತುಂಬಿಕೊಳ್ಳುತ್ತಾ ಖುಷಿ ಹಂಚಿಕೊಳ್ಳುತ್ತಾರೆ.

ಅಂತಹವರಲ್ಲಿ ಬ್ರಯಾನ್ ಅಮ್ಮಣ್ಣ (ಮೊ: 98861 01005) ಒಬ್ಬರು. ಇವರ ಬಳಿ 1970ರ ಮಾಡೆಲ್ ಜಾವಾ ಇದೆ. ಇದು ತಂದೆ ಧಾರವಾಡದಲ್ಲಿದ್ದಾಗ ಖರೀದಿಸಿದ್ದು. ಪಿತ್ರಾರ್ಜಿತ ಆಸ್ತಿಯಂತೆಯೇ ಇರುವ ಈ ಮೋಟಾರ್ ಬೈಕ್ ಎಂದರೆ ಅಮ್ಮಣ್ಣ ಅವರಿಗೆ ಬಹಳ ಇಷ್ಟ. ಕುಟುಂಬದ ಹಿರಿಯ ಸದಸ್ಯರನ್ನು ಕಂಡಷ್ಟೇ ಗೌರವ- ಅಭಿಮಾನ. ದಿನಾ ಒರೆಸುತ್ತಾ ಕ್ರೋಮಿಯಂ ಕೋಟಿಂಗ್ ಭಾಗಗಳನ್ನು ಫಳಫಳ ಮಿನುಗುವಂತೆ ಮಾಡಿದರೇ ಅವರಿಗೆ ಸಮಾಧಾನ. ಈಗ ಭಾನುವಾರ `ಜಾವಾ ಜಾತ್ರೆ~ಗಾಗಿ ತಮ್ಮ ಅನುಗಾಲದ ಮಿತ್ರನನ್ನು ವಿಶೇಷ ಕಾಳಜಿಯಿಂದ ಸಜ್ಜುಗೊಳಿಸಿದ್ದಾರೆ.

ಸೈಲೆನ್ಸರ್ ಹೆಸರಿಗಷ್ಟೆ!

ಎರಡು ಸೈಲೆನ್ಸರ್ ಇದ್ದರೂ ಜಾವಾ ಸುದ್ದಿ ಮಾತ್ರ ಬಲು ಜೋರು.. ಮೊನ್ನೆ ಎಂಟರ ಭಾನುವಾರ ಉದ್ಯಾನ ನಗರಿಯ ಕೆಲ ರಸ್ತೆಗಳಲ್ಲಿ ಮತ್ತೆ ಜಾವಾದ ಗುಡು ಗುಡು ಸದ್ದು ಮಾರ್ದನಿಸಿತು. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಈ ಹಳೆಯ ಬೈಕುಗಳ ಸವಾರಿ ಸೇಂಟ್ ಮಾರ್ಕ್ ರಸ್ತೆಯ ಬೌರಿಂಗ್ ಇನ್ಸ್ಟಿಟ್ಯೂಟ್, ಹೆಬ್ಬಾಳ ಫ್ಲೈಓವರ್, ಬನಶಂಕರಿ 3ನೇ ಹಂತದ ಪಿಇಎಸ್ಐಟಿ ಕಾಲೇಜು ಬಳಿಯಿಂದ ತುಮಕೂರು ರೋಡಿನತ್ತ ಮೂರು ತಂಡಗಳಲ್ಲಿ ಹೊರಟಿತು.

160ಕ್ಕೂ ಅಧಿಕ ಬೈಕ್ಗಳ ಈ ಜಾಲಿ ರೈಡ್ ನಗರದಿಂದ 55 ಕಿ.ಮೀ. ದೂರದಲ್ಲಿ ತುಮಕೂರು ರಸ್ತೆಯಲ್ಲಿನ ಶಿವಗಂಗಾ ಪಟ್ಟಣದಲ್ಲಿನ 12 ಎಕರೆ ವಿಸ್ತೀರ್ಣದ ಶಿವ ಫಾರ್ಮ್ ಹೌಸ್ ಸೇರಿದಾಗ 10 ಗಂಟೆಯಾಗಿತ್ತು. ನಂತರ ತೋಟದ ಮನೆಯಲ್ಲಿ ನಡೆದದ್ದೆಲ್ಲ ಜಾವಾ ಜಪ. ಮೊದಲಿಗೆ ಎಲ್ಲ ಬೈಕ್ಗಳನ್ನೂ ಮಾದರಿಗನುಗುಣವಾಗಿ ಜಾವಾ (30 ಬೈಕ್), ಯೆಜ್ಡಿ 130 ಸಿಸಿ, ಕ್ಲಾಸಿಕ್, ರೋಡ್ಕಿಂಗ್, ಸಿಎಲ್2 ಎಂದು ಸಾಲಾಗಿ ನಿಲ್ಲಿಸಲಾಯಿತು. ಈ ಸಾಲಿನಲ್ಲಿ ಬಹಳ ಅಪರೂಪದ 350 ಸಿಸಿ ಸಾಮರ್ಥ್ಯ ಟ್ವಿನ್ ಸಿಲಿಂಡರ್ನ ಮೂರು ಬೈಕ್ಗಳೂ ಇದ್ದವು. ಇವೆಲ್ಲಕ್ಕೂ ದೃಷ್ಟಿಬೊಟ್ಟು ಇಟ್ಟಂತೆ ಒಂದು ಜಾವಾ ಸೈಡ್ ಕಾರ್ ಸಹ ಇದ್ದಿತು.

ನಂತರ ಎಲ್ಲ ಜಾವಾ-ಯೆಜ್ಡಿಪ್ರಿಯರಿಂದ ಪರಸ್ಪರ ಪರಿಚಯ, ನಾಲ್ವರು ಹಿರಿಯ ಮೆಕ್ಯಾನಿಕ್ಗಳಿಗೆ ಆತ್ಮೀಯ ಸನ್ಮಾನವೂ ನಡೆಯಿತು. ಅಲ್ಲಿ ಎಲ್ಲರ ಗಮನ ಸೆಳೆದವರೊಬ್ಬರಿದ್ದರು. ಅವರೇ `ಐಡಿಯಲ್ ಜಾವಾ~ದಲ್ಲಿ ವರ್ಷಗಳ ಕಾಲ ದುಡಿದು ಆ ಫ್ಯಾಕ್ಟರಿಯ ಭಾಗವೇ ಆಗಿಹೋಗಿದ್ದ ಹಿರಿಯ ಸಿಬ್ಬಂದಿ ವೆಂಕಟೇಶ್ (65). ಜಾವಾ ಫ್ಯಾಕ್ಟರಿ ಬಗ್ಗೆ, ಅಲ್ಲಿ ತಾವು ಕಳೆದ ದಿನಗಳ ಬಗ್ಗೆ, ಬೈಕ್ಗಳ ಸುಧಾರಣೆಗಾಗಿ ಅಲ್ಲಿ ನಡೆಸುತ್ತಿದ್ದ ಸಂಶೋಧನೆ-ಅಭಿವೃದ್ಧಿ ಬಗ್ಗೆ ಅನುಭವ ಹಂಚಿಕೊಂಡರು. ಆಗಿನ ಕಾಲದಲ್ಲಿ ಜಾವಾ ಗಾಡಿಗಳ ಬಗ್ಗೆ ಯುವಕರ ಅಭಿಮಾನ, ಆಕರ್ಷಣೆ ಹೇಗಿತ್ತು ಎಂಬುದನ್ನೂ ಮೆಲುಕು ಹಾಕಿದರು. ಅವರ ಮಾತುಗಳಲ್ಲಿ 1970-80ರ ದಶಕದ ಮೈಸೂರಿನ ಚಿತ್ರಗಳು ಕಂಡೂಕಾಣದಂತೆ ಇಣುಕುತ್ತಿದ್ದವು.

ನಂತರ ಟೀಂ ಗೇಮ್ಸ, ಬೈಕ್ಗಳ ಜೊತೆ ಗ್ರೂಪ್ ಫೋಟೊ, ಜಾವಾ ಕೂಟ ಲಾಂಛನದ ಟೀ-ಶರ್ಟ್ ಮಾರಾಟ, ಬಂದಿದ್ದವರಿಗೆಲ್ಲ ಜಾವಾ ಚಿಹ್ನೆಯ ಸ್ಟಿಕ್ಕರ್ಸ್, ನಂತರ ಭೋಜನ. ಆ ತೋಟದ ಅಂಗಳದಲ್ಲಿ ಮೂರು ಗಂಟೆಗೂ ಅಧಿಕ ಕಾಲ 1970ರ ದಶಕದ ಜಾವಾ ಲೋಕವೇ ಅವತರಿಸುವಂತೆ ಮಾಡಿದ್ದ ಎಲ್ಲರೂ ನಂತರ ತಂಡ ತಂಡವಾಗಿ ಹೊರಟು ಮತ್ತೆ ಬೆಂಗಳೂರು ಸೇರಿದರು. ಈ ಜಾವಾ ಪ್ರಿಯರ ತಂಡ ಪ್ರತಿ ತಿಂಗಳ ಎರಡನೇ ಭಾನುವಾರ ಲ್ಯಾವೆಲ್ಲೆ ರಸ್ತೆಯ ಏರ್ಲೈನ್ಸ್ ಹೋಟೆಲ್ ಬಳಿ ಸೇರುತ್ತದೆ.

(ವೆಬ್ಸೈಟ್: bjymc.com)

ಬಿಜೆವೈಎಂಸಿ ಚಟುವಟಿಕೆ

`ಬೆಂಗಳೂರು ಜಾವಾ-ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್ ಜನ್ಮ ತಾಳಿದ್ದು 2007ರಲ್ಲಿ~ ಎಂದು ಮಾತಿಗೆ ಶುರುವಿಟ್ಟರು ಬ್ರಯಾನ್ ಅಮ್ಮಣ್ಣ. `ಆಗೆಲ್ಲ ಜಾವಾ ಬೈಕ್ನ ಬಿಡಿಭಾಗ ಸಿಗುವುದು ಬಹಳ ಕಷ್ಟವಿತ್ತು... ಮೆಕಾನಿಕ್ ಸಹ ಸಿಗುತ್ತಿರಲಿಲ್ಲ.. ಅಲ್ಲೊಬ್ಬರು-ಇಲ್ಲೊಬ್ಬರ ಬಳಿ ಜಾವಾ ಬೈಕ್ ಇರುವುದು ಗೊತ್ತಾಗುತ್ತಿದ್ದಂತೆ ಪರಿಚಯವಾಯಿತು, ಅದು ಸ್ನೇಹಕ್ಕೆ, ಜಾವಾ ಪ್ರೀತಿಯ ಕೂಟಕ್ಕೆ ಪರಿವರ್ತನೆ ಆಯಿತು. ಆಟೊಮೊಬೈಲ್ಸ್ ಸ್ಟೋರ್ಗಳಲ್ಲಿ ಸುಲಭಕ್ಕೆ ಸಿಗದು ಬಿಡಿಭಾಗಗಳು ಮಿತ್ರರಿಂದ ವಿನಿಮಯವಾಗಲಾರಂಭಿಸಿದವು~. ನಂತರ ತಿಂಗಳಿಗೊಮ್ಮೆ ಸೇರಿ ಜಾಲಿ ರೈಡ್ ಆರಂಭಿಸಿದೆವು. ಇತ್ತೀಚೆಗೆ 3 ಮಂದಿ ಲೇಹ್- ಲಡಾಕ್ವರೆಗೂ 1ಜಾವಾ, 2 ರೋಡ್ಕಿಂಗ್ ಬೈಕ್ನಲ್ಲಿ ಹೋಗಿ ಬಂದರು. ಹಳೆ ಜಾವಾ ಸಿಗುವುದು ಬಲು ಕಷ್ಟ. ಸಿಕ್ಕರೂ ಭಾರಿ ಬೆಲೆ ತೆರಬೇಕಾಗುತ್ತದೆ. ಹಳೆಯ ಜಾವಾಗೆ ಈಗ ಏನಿಲ್ಲವೆಂದರೂ 60ರಿಂದ 70 ಸಾವಿರದವರೆಗೂ ಬೆಲೆಯಾಗುತ್ತದೆ. ನನ್ನ ಬಳಿ ಒಂದು ಜಾವಾ ಮತ್ತು ರೋಡ್ಕಿಂಗ್ ಇದೆ. ಜಾವಾ 1970 ಮಾಡೆಲ್. ಅದು ತಂದೆ ಧಾರವಾಡದಲ್ಲಿ ಕಾಲೇಜಿನಲ್ಲಿದ್ದಾಗ ಖರೀದಿಸಿದ್ದು. ಕಳೆದ ವರ್ಷ ಸಂಪೂರ್ಣ ರೀಕಂಡೀಷನ್ ಮಾಡಿಸಿದೆ. ಈಗ ಹೊಸ ಗಾಡಿ ಇದ್ದಂತಿದೆ. ಮೈಲೇಜ್ 28-30 ಕಿ.ಮೀ.ವರೆಗೂ ಇದೆ. ವಾರಕ್ಕೊಮ್ಮೆ ಓಡಿಸುವೆ. ಎಲ್ಲೂ ಕೈಕೊಟ್ಟಿಲ್ಲ~ ಎನ್ನುತ್ತಾ ತಮ್ಮ ಬೈಕನ್ನು ಸವರುತ್ತಾ ಮಾತು ಮುಂದುವರಿಸಿದರು ಅಮ್ಮಣ್ಣ.

ಎಂಬಿಎ ಪದವೀಧರ ಅಮ್ಮಣ್ಣ, ಹೊಸೂರು ರಸ್ತೆಯಲ್ಲಿರುವ ಇ-ಕಾಮರ್ಸ್ ಕಂಪೆನಿ `ಮಿಂತ್ರ ಡಾಟ್ ಕಾಂ~ನ ಉದ್ಯೋಗಿ. `ನನಗೂ ಅಪ್ಪನಂತೆಯೇ ಜಾವಾ ಜತೆ ತುಂಬಾ ಅಟ್ಯಾಚ್ಮೆಂಟ್. ಕಾಲೇಜಿನಲ್ಲಿದ್ದಾಗ, ದೂರದಲ್ಲಿ ಬೈಕ್ ಸದ್ದು ಕೇಳಿದರೆ ಅದು ನಾನೇ ಎಂದು ಖಚಿತವಾಗಿ ಹೇಳುತ್ತಿದ್ದರು ನನ್ನ ಸಹಪಾಠಿಗಳು. ದಿನದ ತುಂಬಾ ಹೊತ್ತು ಜಾವಾ ಜತೆಗೆ ಕಳೆಯುವ. ಖುಷಿಯ ಸಂಗತಿ ಎಂದರೆ ನನ್ನ ಪತ್ನಿಗೂ ಜಾವಾ ಕಂಡರೆ ಬಲು ಇಷ್ಟ. ನಾವಿಬ್ಬರೂ ಇತ್ತೀಚೆಗೆ ಲೇಹ್ವರೆಗೂ ಜಾವಾ ಬೈಕ್ನಲ್ಲಿ ಹೋಗಿದ್ದೆವು. ಆದರೆ ಎಲ್ಲಿಯೂ ಗಾಡಿ ಕೈಕೊಡಲಿಲ್ಲ. ಅಂಥ ಚಳಿಯಲ್ಲೂ ಸ್ಟಾರ್ಟಿಂಗ್ ಟ್ರಬಲ್ ಇರಲಿಲ್ಲ. ಎಲ್ಲೂ ಪಂಕ್ಚರ್ ಆಗಲಿಲ್ಲ. ಈಗಂತೂ ನನ್ನ ಜಾವಾ ಮೇಲೆ ವಿಶ್ವಾಸ ಹೆಚ್ಚಿದೆ~ ಎಂದು ಮತ್ತೆ ಜಾವಾ ಜಪ ಶುರುವಿಟ್ಟರು.

ಜಾವಾ ಪ್ರೇಮದ ಕಥೆ

1960-70ರ ದಶಕದಲ್ಲಿ ಬೆಂಗಳೂರು-ಮಂಡ್ಯ ಕಡೆಯಿಂದ ಮೈಸೂರು ಪ್ರವೇಶಿಸುವ ಯಾರನ್ನೇ ಆಗಲಿ ನಗರದ ಟೋಲ್ ಗೇಟ್ ಬಳಿಯೇ `ಐಡಿಯಲ್ ಜಾವಾ~ ಕಂಪೆನಿ ರಾಜಗಾಂಭೀರ್ಯದಲ್ಲಿ ಬರಮಾಡಿಕೊಳ್ಳುತ್ತಿತ್ತು. ಇರಾನಿ ಎಂಬುವರ ಮಾಲೀಕತ್ವದ ಈ ಕಂಪೆನಿ 175 ಸಿಸಿ, 250 ಸಿಸಿ ಮತ್ತು 350 ಸಿಸಿಯ ಮೋಟಾರ್ ಬೈಕ್ ತಯಾರಿಸುತ್ತಿತ್ತು. ಒಟ್ಟು 36 ವರ್ಷಗಳ ಕಾಲ ದ್ವಿಚಕ್ರ ವಾಹನಗಳನ್ನು ತಯಾರಿಸಿದ ಈ ಕಂಪೆನಿಗೆ ಬೀಗ ಬಿದ್ದು 16 ವರ್ಷಗಳೇ ಕಳೆದಿವೆ. ಆದರೂ ಬೈಕ್ ಸವಾರರ ಜಾವಾ ಪ್ರೀತಿ ಮಾತ್ರ ಷೋಡಶದ ಪ್ರೇಮಕಾವ್ಯದಂತೇ ಇದೆ. `ನಾನಿನ್ನ ಮರೆಯಲಾರೆ~ ಸಿನಿಮಾದ ನಾಯಕ ಆನಂದ್, ನಾಯಕಿ ಉಷಾ ಪ್ರೀತಿಯನ್ನು ನೆನಪಿಸುವಂತಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.