ಗುರುವಾರ , ಮೇ 13, 2021
38 °C

ಜಾಹೀರಾತು: ಮದ್ಯಪಾನಕ್ಕೆ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಟಿವಿ ಜಾಹೀರಾತುಗಳ ಪ್ರಭಾವದಿಂದ ಮಕ್ಕಳು ಮದ್ಯವ್ಯಸನಕ್ಕೆ ಒಳಗಾಗುತ್ತಿದ್ದಾರೆ ಎಂದು ಪಶ್ಚಿಮ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ತಿಳಿಸಿದೆ.ವಿಶ್ವವಿದ್ಯಾಲಯವು ಎರಡು ತಿಂಗಳವರೆಗೆ ಈ ವಿಷಯದ ಕುರಿತು ಅಧ್ಯಯನ ನಡೆಸಿದೆ. ಸುಮಾರು 2810 ಜಾಹೀರಾತುಗಳ ಪೈಕಿ ಅರ್ಧದಷ್ಟು ಜಾಹೀರಾತುಗಳನ್ನು ವಿಶ್ವವಿದ್ಯಾಲಯ ಅಧ್ಯಯನಕ್ಕೆ ಆರಿಸಿಕೊಂಡಿತ್ತು.ಪಶ್ಚಿಮ ರಾಷ್ಟ್ರಗಳಲ್ಲಿನ ಐದು ರಾಜಧಾನಿ ನಗರಗಳ ಶೇ. 25ರಷ್ಟು ಮಕ್ಕಳು ಟಿವಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯಪಾನಕ್ಕೆ ಪ್ರಚೋದನೆ ನೀಡುವಂತಹ ಜಾಹೀರಾತುಗಳು ಬಿತ್ತರವಾಗಿದ್ದವು.18 ವರ್ಷದ ಒಳಗಿನ ಯುವಕರಿಗೆ ಮದ್ಯ ಸೇವನೆ ಅಪಾಯಕಾರಿ ಹಾಗೂ ಈ ವಯಸ್ಸಿನಲ್ಲಿ ಮದ್ಯ ಸೇವಿಸುವುದರಿಂದ ಇದು ದೀರ್ಘಕಾಲದಲ್ಲಿ ಪರಿಣಾಮ ಬೀರಿ ವ್ಯಸನಕ್ಕೆ ದಾರಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.