ಸೋಮವಾರ, ಜನವರಿ 20, 2020
18 °C

ಜಿಡಿಪಿ ವೃದ್ಧಿ ದರ ಕುಸಿತ: ವಿಶ್ವಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ ಎರಡು ವರ್ಷಗಳ ಕಾಲ ಭಾರತದ ಆರ್ಥಿಕ ವೃದ್ಧಿ ದರವು ಸಾಧಾರಣ ಮಟ್ಟದಲ್ಲಿಯೇ ಇರಲಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.ಯೂರೋಪ್ ಮತ್ತು ಅಮೆರಿಕದಲ್ಲಿನ ಆರ್ಥಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ, ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು 2012 ಮತ್ತು 2013ರಲ್ಲಿ ಕ್ರಮವಾಗಿ ಶೇ 7.7 ಮತ್ತು 7.9ರಷ್ಟು ಇರಲಿದೆ. 2011ರಲ್ಲಿ ಇರುವಂತಹ ಆರ್ಥಿಕ ವೃದ್ಧಿ ದರವೇ ಮುಂದಿನ ಎರಡು ವರ್ಷವೂ ಮುಂದುವರೆಯಲಿದೆ ಎಂದು ವಿಶ್ವ ಸಂಸ್ಥೆಯ `ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು 2012ರ ನಿರೀಕ್ಷೆ~ ಕುರಿತ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ವಿತ್ತೀಯ ಕೊರತೆ: ವಿತ್ತೀಯ ಕೊರತೆಯು `ಜಿಡಿಪಿ~ಯ ಶೇ 4.7ರಷ್ಟು ಇರಬೇಕೆನ್ನುವ  ಗುರಿ ತಲುಪುವಲ್ಲಿಯೂ ಸರ್ಕಾರ ವಿಫಲವಾಗಿರುವ ಬಗ್ಗೆಯೂ ವರದಿ ಎಚ್ಚರಿಕೆ ನೀಡಿದೆ.ಆರ್ಥಿಕ ವೃದ್ಧಿ ದರವು ಕುಂಠಿತಗೊಂಡಿರುವುದು ತೆರಿಗೆ ವರಮಾನವೂ ಕುಸಿಯುವಂತೆ ಮಾಡಿದೆ.  ಜತೆಗೆ ಸರ್ಕಾರಿ ಸ್ವಾಮ್ಯದ ಷೇರುವಿಕ್ರಯವನ್ನೂ ತಡೆಹಿಡಿಯುವಂತೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಮಾತ್ರ ವರದಿಯು ಆಶಾದಾಯಕ ಮುನ್ನೋಟ ನೀಡಿದೆ.

ಪ್ರತಿಕ್ರಿಯಿಸಿ (+)